ad

ಮಚ್ಚು ಬೀಸಿ ಬರ್ಬರ ಹತ್ಯೆ-A brutal murder

 SUDDILIVE || SHIVAMOGGA

ಮಚ್ಚು ಬೀಸಿ ಬರ್ಬರ ಹತ್ಯೆ-A brutal murder

Brutal, Murder

ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರಗಳನ್ನ ಬಳಸಿ ವ್ಯಕ್ತಿಯ ಕೊಲೆಯಾಗಿದೆ. ಕೊಲೆ ಆದವನನ್ನ ವಾಸು ಯಾನೆ ವಸಂತ ಎಂದು ಗುರುತಿಸಲಾಗಿದ್ದು ಆತನಿಗೆ 32 ವರ್ಷ ಎಂದು ತಿಳಿದು ಬಂದಿದೆ. 

ವಾಸುವಿನ ಕೊಲೆಯನ್ನ ಮಲ್ಲೇಶಪ್ಪನವರ ಮಕ್ಕಳಿಂದ ಆಗಿದೆ ಎನ್ನಲಾಗಿದ್ದು ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆದಿದೆ. ಹರೀಶ ಮತ್ತು ಆಕಾಶ ಎಂಬ ಆರೋಪಿಗಳಿಂದ ಕೊಲೆ ನಡೆದಿದೆ ಎನ್ನಲಾಗಿದೆ. ಮಲ್ಲೇಶಪ್ಪನ ಸಾವಾಗಿ ಅನೇಕ ತಿಂಗಳುಗಳೆ ಕಳೆದಿದೆ. 

ಮಲ್ಲೇಶಪ್ಪನ ಪತ್ನಿಯ ಜೊತೆ ವಾಸುವಿನ ಅನೈತಿಕ ಸಂಬಂಧವಿತ್ತು ಎಂಬ ಶಂಕೆ ಹಿನ್ನಲೆಯಲ್ಲಿ ಆತನ ಮಕ್ಕಳೇ ಕೊಲೆ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ. ಕೊಲೆ ಮಾಡಿದವರೆಲ್ಲ ವಯಸ್ಕರಾಗಿದ್ದು, ಸಧ್ಯಕ್ಕೆ ಹರೀಶ ಮತ್ತು ಆಕಾಶಗಾಗಿ ತೀವ್ರ ಶೋಧಕಾರ್ಯ ನಡೆದಿದೆ.


ಕೊಲೆಯಾದ ವಾಸು ಯಾನೆ ವಸಂತ ಅಪ್ರಪ್ತನಾಗಿದ್ದಾಗ ಮನೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ. ನಂತರ ಸುಧಾರಣೆಗೊಂಡು ಕೂಲಿಕೆಲಸ ಮಾಡಿಕೊಂಡು ಜೀವನಸಾಗಿಸುತ್ತಿದ್ದ. ಆತನಿಗೂ ಮದುವೆಯಾಗಿ ಮಕ್ಕಳಾಗಿದ್ದಾರೆ. ತಲೆಗೆ ಮಚ್ಚುಬೀಸಿ ಕೊಲೆ ಮಾಡಲಾಗಿದ್ದು ರಕ್ತ ಮಡುವಿನಲ್ಲಿ ವಸಂತ ಪ್ರಾಣ ಬಿಟ್ಟಿದ್ದಾನೆ. ನಿನ್ನೆ ರಾತ್ರಿಯೇ ಈ ಘಟನೆ ನಡೆದಿದೆ.

A brutal murder

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close