ad

ಜೂನ್ ಕೊನೆಯ ಎರಡು ದಿನಗಳಲ್ಲಿ ಹೃದಯಾಘಾತಕ್ಕೆ ನಾಲ್ವರು ಬಲಿ- Three people died of heart attacks

 SUDDILIVE || SHIVAMOGGA

ಜೂನ್ ಕೊನೆಯ ಎರಡು ದಿನಗಳಲ್ಲಿ ಹೃದಯಾಘಾತಕ್ಕೆ ಮೂವರು ಬಲಿ-Three people died of heart attacks in the last two days of June

Heart attack, died

ಹೃದಯಾಘಾತಕ್ಕೆ ಸಂಬಂಧಿಸಿದಂತೆ ಭಾನುವಾರ ಮತ್ತು ಸೋಮವಾರದಲ್ಲಿ ನಾಲ್ಕು ಸಾವಾಗಿದೆ. 21 ವರ್ಷದ ಯುವಕ, 23 ವರ್ಷದ ವಿವಾಹಿತ ಮಹಿಳೆ ಮತ್ತು ವೈದ್ಯರೋರ್ವರು ಹಾಗೂ 52 ವರ್ಷದ ಮಹಿಳೆ ಬಲಿಯಾಗಿದ್ದಾರೆ. 

ಹೃದಯಾಘಾತ ಸಧ್ಯಕ್ಕೆ ಹಾಸನ ಜಿಲ್ಲೆಯಲ್ಲಿ ತಿಂಗಳಿಗೆ 18 ರಿಂದ 20 ಸಾವಾದ ಬೆನ್ನಲ್ಲೇ ಶಿವಮೊಗ್ಗದಲ್ಲೂ ಜೂನ್ ತಿಂಗಳಲ್ಲಿ ತಿಂಗಳ ಕೊನೆಯ ಎರಡು ದಿನಗಳಲ್ಲಿ ನಾಲ್ವರು ಸಾವಾಗಿದೆ. ಅದೂ ಹದಿಹರೆಯದ ಯುವಕ ಯುವತಿಯರು ಸಾವಾಗುತ್ತಿರುವುದು ಅಚ್ಚರಿ ಮೂಡಿಸಿದೆ. 

ಭಾನುವಾರ ಶ್ರೀನಿಧಿ ಎಂಬ 21 ವರ್ಷದ ಡಿವಿಎಸ್ ಕಾಲೇಜಿನ ಅಂತಿಮ ವರ್ಷದ ಪದವಿಯ ಯುವಕ ಹೃದಯಾಘಾತದಿಂದ ಸಾವಾಗಿದೆ. ಬಸವಗಂಗೂರಿನ ನಿವಾಸಿ ಶ್ರೀನಿಧಿಗೆ ದಿಡೀರ್ ಎಂದು ಹೃದಯಾಘಾತ ಕಾಣಿಸಿಕೊಂಡು ಸಾವಾಗಿರುವುದಾಗಿ ತಿಳಿದು ಬಂದಿದೆ. 

ನಿನ್ನೆ ಜಿಲ್ಲೆಯಲ್ಲಿ ಎರಡು ಸಾವಾಗಿದೆ. ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಸಂದೀಪ (40) ಹೃದಯಾಘಾತದಿಂದ ಸಾವಾಗಿದೆ. ಅದರ ಜೊತೆಗೆ ನಿನ್ನೆ ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ವಿವಾಹಿತ ಮಹಿಳೆ ಹರ್ಷಿತಾ ಹೇದಯಾಘಾತಕ್ಕೆ ಬಲಿಯಾಗಿದ್ದಾಳೆ. 

ಹರ್ಷಿತಾ (23) ಹಾಸನ ಜಿಲ್ಲೆಯ ಯುವಕನಿಗೆ ಮದುವೆಯಾಗಿದ್ದರು. ಏ.5 ರಂದು ಎರಡನೇ ಹೆರಿಗೆಗೆ ಶಿವಮೊಗ್ಗ ಜಿಲ್ಲೆಯ ಆಯನೂರು ಹೋಬಳಿಯ ಮಂಡಘಟ್ಟ ತಾಲೂಕಿನ ದ್ಯಾವನ ಕೆರೆಯಲ್ಲಿರುವ ತವರು ಮನೆಗೆ ಬಂದಿದ್ದರು. ಮೇ24 ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 

ಮಗುವಿಗೆ ಜನ್ಮ ನೀಡಿ 34 ದಿನಗಳ ಅಂತರದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನ ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಿನ್ನೆ  ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲು ಕರೆದೊಯ್ಯುವಾಗ ಮಾರ್ಗ ಮಧ್ಯೆದಲ್ಲಿ ಸಾವಾಗಿಗೆ. ಹರ್ಷಿತಾ ಬಾಣಂತಿಯಾಗಿಯೂ ಸಾವಾಗಿದ್ದಾರೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಹೃದಯಘಾತದಿಂದ ಸರಣಿ ಸಾವು ಮುಂದುವರಿದಿದ್ದು, ಹೃದಯಾಘಾತದಿಂದ ಮತ್ತೊಬ್ಬ ಮಹಿಳೆ ನಿಧನರಾಗಿದ್ದಾರೆ. ಚಿಕ್ಕಮ್ಮನ ಮಗನ ಅಂತ್ಯಕ್ರಿಯೆಗೆ ತೆರಳಿದ್ದ ಮಹಿಳೆಯು ಹೃದಯಾಘಾತಕ್ಕೆ ಒಳಗಾಗಿ ಸಾವನಪ್ಪಿದ್ದಾರೆ. ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಚೈತ್ರಾ (52) ಮೃತ ದುರ್ದೈವಿ.

Three people died of heart attacks

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close