SUDDILIVE || SHIKARIPURA
ಸಹೋದರರ ಬಾಗಿನ-Brothers Bageena
ಏತನೀರಾವರಿ ಯೋಜನೆ ಅನುಷ್ಠಾನ ಮೂಲಕ ರೈತರಿಗೆ ಅಗತ್ಯವಾದ ನೀರಿನ ವ್ಯವಸ್ಥೆ ಮಾಡಿದ ಸಂತೃಪ್ತಿ ನಮಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಆಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯಕ್ಕೆ ಸೋಮವಾರ ಬಾಗಿನ ಅರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹವಾಗಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೋಡಿ ಎರಿಸುವ ಕೆಲಸ ಮಾಡಿದರು. ಯಡಿಯೂರಪ್ಪ ಸಹಕಾರ ಹಾಗೂ ರೈತ ಪರ ಕಾಳಜಿಯಿಂದ ತಾಲ್ಲೂಕಿನ ಉಡುಗಣಿ ಹೊಸೂರು, ತಾಳಗುಂದ ಹಾಗೂ ಕಸಬಾ ಹೋಬಳಿಗಳಿಗೆ ನೀರಾವರಿ ಯೋಜನೆ ಅನುಷ್ಠಾನ ಮಾಡಲಾಗಿದೆ. ನೀರಾವರಿ ಯೋಜನೆ ಅನುಷ್ಠಾನ ಮೂಲಕ ರೈತರಿಗೆ ನೆಮ್ಮದಿ ನೀಡುವ ಕೆಲಸ ಆಗಿದೆ. ಪ್ರಧಾನಿ ನರೇಂದ್ರ ರೈತ ಪರ ಯೋಜನೆ ನೀಡಿದ್ದಾರೆ. ಶರಾವತಿ ಸಂತ್ರಸ್ಥರಿಗೆ ಸಿಗಂದೂರು ಸಮೀಪ ಸೇತುವೆನಿರ್ಮಾಣವಾಗಿದ್ದು,ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ಭಗವಂತ ಕೃಪೆಯಿಂದ ಒಳ್ಳೆ ಮಳೆಯಾಗಿ ಜಲಾಶಯಗಳು ತುಂಬಿವೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಬರುವ ದಿನಗಳಲ್ಲಿ ರೈತರ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಕ್ಕಿ ರೈತ ಹಾಗೂ ರೈತ ಕುಟುಂಬದವರು ಖುಷಿಯಿಂದ ಇರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾವು ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನೆನಪಿನ ಕೊಳ್ಳಬೇಕು. ರೈತರಿಗಾಗಿ ತುಂಗಾ ನದಿಯಿಂದ ಏತನೀರಾವರಿ ಯೋಜನೆ ಮೂಲಕ ಅಂಜನಾಪುರ ಜಲಾಶಯಕ್ಕೆ ನೀರು ತಂದಿದ್ದಾರೆ. ಶಿಕಾರಿಪುರ ಶಿರಾಳಕೊಪ್ಪ ಶುದ್ದ ಕುಡಿಯುವ ನೀರು ನೀಡಿದ್ದಾರೆ ಎಂದು ಶ್ಲಾಘಿಸಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ , ತೇಜಸ್ವಿನಿ ರಾಘವೇಂದ್ರ, ಪ್ರೇಮ ವಿಜಯೇಂದ್ರ, ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಹಾಲೇಶ್
ಮುಖಂಡರಾದ ಕೊಳಗಿ ರೇವಣಪ್ಪ, ಸಂಕ್ಲಾಪುರ ಹನುಮಂತಪ್ಪ, ಹುಲ್ಮಾರ್ ಮಹೇಶ್, ಎಂ.ಬಿ. ಚನ್ನವೀರಪ್ಪ, ದೂದಿಹಳ್ಳಿ ಬಸವರಾಜ್, ಶಶಿಧರ್ ಚುರ್ಚಿಗುಂಡಿ, ಬಿ.ಡಿ. ಭೂಕಾಂತ್, ಎ.ಬಿ. ಸುಧೀರ್, ತೊಗರ್ಸಿ ಹನುಮಂತಪ್ಪ, ನಿಂಬೆಗೊಂದಿ ಸಿದ್ದಲಿಂಗಪ್ಪ, ಕೆ.ಜಿ. ವಸಂತಗೌಡ್ರು, ಗಿರೀಶ್ ಧಾರಾವಾಡ, , ಕೊರಲಹಳ್ಳಿ ನಾಗರಾಜ್, ಅಂಜನಾಪುರ ಅಶೋಕ್, ಗಾಯತ್ರಿದೇವಿ, ರೇಖಾ ರಾಜಶೇಖರ್, ನೀರಾವರಿ ಇಲಾಖೆ ಅಧಿಕಾರಿಗಳು ಮಂಜುನಾಥ್. ನಾಗೇಶಪ್ಪ, ಬಾಲರಾಜ್ ಮತ್ತಿತರರು ಉಪಸ್ಥಿತರಿದ್ದರು.