ad

ಕಾಂತರಾಜ್ ವರದಿ ಜಾರಿಗೊಳಿಸಿ ನಂತರ ಬೇರೆ ವರದಿ ರಚಿಸಬೇಕು-ವಿ.ರಾಜು-Kantaraju report should be implemented

 SUDDILIVE || SHIVAMOGGA

ಕಾಂತರಾಜ್ ವರದಿ ಜಾರಿಗೊಳಿಸಿ ನಂತರ ಬೇರೆ ವರದಿ ರಚಿಸಬೇಕು-ವಿ.ರಾಜು-Kantaraju report should be implemented and then another report should be implemented - V. Raju

Kantharju, report


ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಗಣತಿಯನ್ನ ಮಾಡುವುದಾಗಿ ನೋಟಿಫಿಕೇಷನ್ ಹೊರಡಿಸಿದೆ. ಹಿಂದುಳಿದ ವರ್ಗಗಳ ದತ್ತಾಂಶಗಳನ್ನ ಒಳಗೊಂಡ ಅಂಕಿ ಅಂಶದ ಜೊತೆ ನಡೆಸುವಂತೆ ಹಿಂದುಳಿದ ವರ್ಗಗಳ ಒಕ್ಕೂಟ ಒತ್ತಾಯಿಸಿದೆ.

ಸುದ್ದಿಗೋಷ್ಠಿ ನಡೆಸಿ ರಾಜು, ರಾಜ್ಯ ಶಾಶ್ವತ ಹಿಂದುಳಿ ವರ್ಗಗಳ ಆಯೋಗದ ಕಾಂತರಾಜು ವರದಿ ಜಾತಿಜನಗಣತಿಯನ್ನ ಹೊರತಂದಿದೆ. ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ಮಾಡುವ ಹಕ್ಕಿಲ್ಲ. ಜಾತಿ ಸಮೀಕ್ಷೆ ಎಂದು ಮತ್ತು 167 ಕೋಟಿ ವೆಚ್ಚದಲ್ಲಿ ಸಾಮಾಜಿಕ, ಶೈಕ್ಷಣಿಕ ವರದಿ ನೀಡಿದ್ದು ಜಾರಿಯಾಗಬೇಕಿತ್ತು. ಆದರೆ ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ಮಾಡುವ ಅಧಿಕಾರವಿರಲಿಲ್ಲ. 

ಆದರೆ ಮುಖ್ಯಮಂತ್ರಿಗಳು ಬದ್ಧತೆಯಿಂದ ಜಾರಿಗೆ ತರಲು ಮುಂದಾಗಿದ್ದರು. 10 ವರ್ಷ ಹಿಂದಿನ ಸಮೀಕ್ಷೆ ಇದ್ದರೂ ವೈಜ್ಞಾನಿಕ ವರದಿ ಮಾಡಲಾಗಿತ್ತು. ಕಾಂಗ್ರೆಸ್ ನ ಪ್ರಮಾಣಿಕವಾದ ಅಂಶ ಜಾತಿ ಜನಗಣತಿಯಾಗಿದೆ. ಬೇರೆ ಸಮೀಕ್ಷೆ ನಡೆಸುವ ಮೊದಲು ವರದಿಯನ್ನ ಬಿಡುಡೆ ಮಾಡಬೇಕು ಎಂದರು.

ಸಣ್ಣಪುಟ್ಟ ತಪ್ಪು ಸರಿಪಡಿಸಿಕೊಂಡು ಜಾರಿಗೊಳಿಸಬೇಕು. ಶಾಶ್ವತ ಹಿಂದುಳಿದ ಆಯೋಗದ ಕಾಯ್ದೆ ಹಿಂದುಳಿದ ಮೀಸಲಾತಿಯನ್ನ 10 ವರ್ಷಕ್ಕೊಮ್ಮೆ ನಡೆಸಬೇಕು ಎಂದು ಇದೆ. ಕಾಯ್ದೆ ಅನುಸಾರ ಚರ್ಚೆ ವಿಮರ್ಶೆಯಲ್ಲಿ 10 ವರ್ಷದ ನಂತರ ನಡೆಯಬೇಕು. ಆದರೆ ಸರ್ಕಾರ ವರದಿ ಬಿಡುಗಡೆ ಮಾಡದೆ ಮತ್ತೊಂದು ಸಮೀಕ್ಷೆಗೆ ಸರ್ಕಾರ ಹೋಗುವುದಾಗಿ ಹೇಳಿರುವುದು ಸರ್ಕಾರದ ವೈಫಲ್ಯವೆಂದರು. 

Kantaraju report should be implemented

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close