SUDDILIVE || SHIVAMOGGA
ಜಾತ್ಯಾತೀತ ಮತ್ತು ಸಮಾಜವಾದವನ್ನ ಸಂವಿಧಾನದಲ್ಲಿ ತೆಗೆಯುವ ಹೊಸಬಾಳೆ ವಾದ ಸರಿಯಿದೆ ಈಶ್ವರಪ್ಪ-Eshwarappa's new argument to remove secularism and socialism from the Constitution is correct
ಸಂವಿಧಾನ ನನ್ನ ಜೇಬಿನಲ್ಲಿದೆ ಎಂದು ದೊಡ್ಡಧ್ವನಿಯಲ್ಲಿ ಹೇಳಿದರೆ ಸಂವಿಧಾನ ಬದಲಾಗಲ್ಲ. ಇಂದಿರಾಗಾಂಧಿಯವರು ಜಾತ್ಯಾತೀತ ಎಂಬ ಪದವನ್ನ ತಂದಿದ್ದು ಹೌದೋ ಅಲ್ವೋ ಎಂದು ತಾವು ಒಪ್ಪಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಡಿಸಿಎಂ 1973 ರಲ್ಲಿ ಕೇರಳ ಮತ್ತು ಸುಪ್ರೀಂ ಸಹ ಮೂಲ ಸಂವಿಧಾನ ಬದಲಾಯಿಸುವಂತಿಲ್ಲ ಎಂದಿದೆ. ಸಿಎಂ ಇದು ಸುಳ್ಳು ಎಂದು ಹೇಳಲಿ. ಅವರು ಪ್ರಧಾನಿ ಮೋದಿಯನ್ನ ಸಂವಿಧಾನ ಪೀಠಿಕೆ ವಿಚಾರದಲ್ಲಿ ಸವಾಲು ಹಾಕುತ್ತಿದ್ದಾರೆ. ಆದರೆ ಈ ಸವಾಲಿಗೆ ತಮ್ಮ ನಿಲುವು ಮೊದಲು ಸ್ಪಷ್ಟಪಡಿಸಿ ಎಂದಿದ್ದಾರೆ.
ಸಂವಿಧಾನದಲ್ಲಿ ಜಾತ್ಯಾತೀತ ಮತ್ತು ಸಮಾಜವಾದಿ ಪದಗಳನ್ನ ಸೇರಿಸುವ ವಿಷಯವಾಗಿ ಸಂವಿಧಾನ ರಚನಾ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಾಗ ಸ್ವತಃ ಅಂಬೇಡ್ಕರ್ ವಿರೋಧಿಸಿದ್ದರು. 1948 ರಲ್ಲಿ ಈ ವಿಷಯದ ಕುರಿತಾಗಿ ನಡೆದ ಸಭೆಯಲ್ಲಿ ಅಂದಿನ ಪ್ರಧಾನಿ ನೆಹರು ಮತ್ತು ಅಂಬೇಡ್ಕರ್ ಈ ಪದಗಳ ವಿರುದ್ಧವಿದ್ದರು.
ಆದರೆ ತುರ್ತು ಪರಿಸ್ಥಿತಿಯಲ್ಲಿ ಜಾತ್ಯಾತೀತ ಮತ್ತು ಸಮಾಜವಾದವನ್ನ ಸಂವಿಧಾನದಲ್ಲಿ ತುರುಕಿದ್ದಾರೆ. ದತ್ತಾತ್ರಿ ಹೊಸಬಾಳೆ ಅವರು ಈ ಪದವನ್ನ ತೆಗೆದುಹಾಕಿ ಎಂದು ಹೇಳಿದನ್ನ ರಾಹುಲ್ ಗಾಂಧಿ ಮತ್ತು ಜಯರಾಮ ರಮೇಶ್ ಖಂಡಿಸಿದ್ದಾರೆ. 1973 ರಲ್ಲಿ ಸುಪ್ರೀಂಕೋರ್ಟ್ ಮೂಲ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದರೂ ಈರೀತಿ ಹೇಳಿಕೆ ಕಾಂಗ್ರೆಸ್ ನಿಂದ ಬರುತ್ತಿದೆ ಎಂದು ಒತ್ತಾಯಿಸಿದರು.
ನಾಳೆ ರಾಷ್ಟ್ರಭಕ್ತರ ಬಳಗದ ಕೆಲ ವಕೀಲರು ಮಹಾನಗರ ಪಾಲಿಕೆಯ ಆಯ್ಯಕ್ತರನ್ನ ಭೇಟಿ ಮಾಡುತ್ತಿದೆ. ಡಿಸಿ ಕಚೇರಿಯ ಎದುರಿನ ಆಟದ ಮೈದಾನದ ಬಗ್ಗೆ 8 ವಾರದಲ್ಲಿ ವರದಿ ನೀಡಲು ಕೇಳಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಭಕ್ತರ ಬಳಗ ಆಯುಕ್ತರಿಗೆ ಡಿಸಿ ಕಚೇರಿ ಎದುರಿನ ಮೈದಾನ ಪಾಲಿಜೆಗೆ ಸೇರಿದ್ದು ಎಂದು ದಾಖಲಾತಿ ನೀಡುತ್ತಿರುವುದಾಗಿ ಹೇಳಿದರು.
ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗಲ್ಲ. ಕುರುಬರ ಸಭೆ ನಡೆದಿದೆ ಎಲ್ಲರೂ. ಬಿಜೆಪಿಗೆ ಹೋಗಿ ಎನ್ನುತ್ತಿದ್ದಾರೆ. ಕೆಲವೊಂದು ವಿಷಯದಲ್ಲಿ ಬಿಜೆಪಿ ನಾಯಕರ ಜೊತೆ ಮಾತನಾಡಿ ಹೋಗುವೆ ಎಂದ ಮಾಜಿ ಡಿಸಿಎಂ ಸೆಪ್ಟಂಬರ್ ಕ್ರಾಂತಿ ಎಂದರೆ ಸಿದ್ದರಾಮಯ್ಯ ಕೆಳಗೆ ಇಳಿಸಲಾಗುತ್ತಿದೆ. ಸುರ್ಜೇವಾಲ 40 ಜನ ಶಾಸಕರ ಜೊತೆ ಮಾತನಾಡುತ್ತಿದ್ದಾರೆ. ಆದರೆ ಆ ಗುಂಪು ಯಾವುದು ಗೊತ್ತಿಲ್ಲ. ರಾಜಣ್ಣ ಸೆಪ್ಟಂಬರ್ ಕ್ರಾಂತಿ ಎಂದಿದ್ದಾರೆ. ಏನಾಗಲಿದೆ ಕಾದು ನೋಡೋಣವೆಂದರು.
Eshwarappa's new argument