SUDDILIVE || HOSANAGARA
ಕಾಂತಾರ ಚಿತ್ರತಂಡದ ಯಡವಟ್ಟು ನತಂತರ ಸ್ಪಷ್ಟನೆ-kanthara team Clarification on the film crew's delay
ಕಾಂತರ ಸಿನಿಮಾ ಶೂಟಿಂಗ್ ನಲ್ಲಿ ನಡೆದ ಘಟನೆ ಬಗ್ಗೆ ಹೊಂಬಾಳೆ ಫಿಲಂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ ಸ್ಪಷ್ಟನೆ
ಶಿವಮೊಗ್ಗ ಜಿಲ್ಲೆ, ಹೊಸನಗರದ ಮಾಣಿ ಜಲಾಶಯದಲ್ಲಿ ನಡೆದ ಘಟನೆ ಕುರಿತು ಹೊಂಬಾಳೆ ಫಿಲಂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ ಸ್ಪಷ್ಟನೆ ನೀಡಿದ್ದು, ಘಟನೆ ಕುರಿತು ವಿವರಣೆ ನೀಡಿದ್ದಾರೆ.
ಶಿಪ್ ಮುಳುಗಿದ್ದು ಹೌದು! ಆದರೆ ಆ ಶಿಪ್ ಬಳಿ ಯಾರೂ ಚಲನಚಿತ್ರ ತಂಡದವರು ಇರಲಿಲ್ಲ. ಜೀವಕ್ಕೆ ಹಾನಿ ಉಂಟಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅವಘಡದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು ಈ ಬಗ್ಗೆ ಜಿಲ್ಲಾಡಳಿತ ನೋಟೀಸ್ ನೀಡುವುದಾಗಿ ಹೇಳಿದ ಬಳಿಕ ಈ ಸ್ಪಷ್ಟನೆ ಹೊರಗೆ ಬಿದ್ದಿದೆ.
ಕಾಂತಾರ ಸಿನಿಮಾದ ಶೂಟಿಂಗ್ ಬಗ್ಗೆ ಮಾಣಿ ಡ್ಯಾಂ ಬಳಿ ಸೆಟ್ ಏರಿಸಲಾಗಿತ್ತು. ಶೂಟಿಂಗ್ ಸಹ ಭರದಿಂದ ಸಾಗಿತ್ತು. ಆದರೆ ನಿನ್ನೆ ಸಂಜೆ ಶಿಪ್ ಒಂದು ಮುಳುಗಿದೆ ಎಂಬ ಮಾಹಿತಿ ಆಧಾರದ ಮೇರೆಗೆ ಮಾಧ್ಯಮಗಳು ಸುದ್ದಿ ಮಾಡಿದ್ದು ಈ ಸುದ್ದಿ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ಈಗ ಹೊಂಬಾಳೆ ಫಿಲಂನ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸ್ಪಷ್ಟನೆಯಿಂದ ಘಟನೆ ಬೆಳಕಿಗೆ ಬಂದಿದೆ. ಇದೆಲ್ಲಾ ಪ್ರಚಾರದ ಗಿಮಿಕಾ ಎಂಬ ಕುತೂಹಲ ಹೆಚ್ಚಿದೆ. ಚಿತ್ರತಂಡ ಶೂಟಿಂಗ್ ಮಾಡುವಾಗ ಸ್ಥಳೀಯ ಆಡಳಿತದ ಗಮನಕ್ಕೆ ಬಾರದೆ ಮಾಡುತ್ತಿರುವುದು ಚಿತ್ರದ ತಂಡದ ಯಡವಟ್ಟಿಗೆ ಕಾರಣವಾಗಿದೆ. ಈ ಅವಾಂತರದ ನಂತರ ಇಂದು ಎರಡನೇ ದಿನವೂ ಮಳೆಯಲ್ಲಿ ಚಿತ್ರತಂಡದ ಚಿತ್ರೀಕರಣ ಮುಂದುವರೆದಿದೆ.
Clarification on the film crew's delay