ನಾಯಿ ದಾಳಿಗೆ ಜಿಂಕೆ ಬಲಿ-Deer killed in dog attack

 SUDDILIVE || SORABA

ನಾಯಿ ದಾಳಿಗೆ ಜಿಂಕೆ ಬಲಿ-Deer killed in dog attack

Deer, dog

ಬೀದಿ ನಾಯಿಗಳ ಹಾವಳಿಯಿಂದ ಗಂಡು ಜಿಂಕೆವೊಂದು ಮೃತಪಟ್ಟಿರುವಘಟನೆ ತಾಲೂಕಿನ ಚಂದ್ರಗುತ್ತಿಸಮೀಪದ ಶಿವಪುರ ಗ್ರಾಮದಲ್ಲಿಮಂಗಳವಾರ ನಡೆದಿದೆ.

ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದ ಜಿಂಕೆಯನ್ನು ಬೀದಿ ನಾಯಿಗಳು ಅಟ್ಟಾಡಿಸಿದ್ದವು. ಸ್ಥಳೀಯರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ಹಿಡಿದು ರಕ್ಷಿಸಿದ್ದರು ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಬಂದ ಅಧಿಕಾರಿಗಳು ಜಿಂಕೆಗೆ ಪಶು ವೈದ್ಯರಿಂದ ಪ್ರಥಮ ಚಿಕಿತ್ಸೆ ನೀಡಿದ್ದರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಜಿಂಕೆ ಕೊನೆ ಉಸಿರು ಎಳೆದಿದೆ ನಾಯಿಗಳ ದಾಳಿಯಿಂದ ಗಾಬರಿಗೊಂಡಿದ್ದ ಜಿಂಕೆ ಆಘಾತಕ್ಕೆ ಒಳಗಾಗಿತ್ತು ಜಿಂಕೆ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನಡೆಸಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಧ್ಯಮ ಒಂದಕ್ಕೆ ಮಾಹಿತಿ ನೀಡಿದ್ದರು.

Deer killed in dog attack

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close