SUDDILIVE || SHIVAMOGGA
ಗುತ್ಯಪ್ಪ ಕಾಲೋನಿಯ ಸರ್ಕಾರಿ ಶಾಲೆ ಮಕ್ಕಳಿಗೆ ಕಲಿಕಾ ಪರಿಕರ ಹಂಚಿಕೆ-Distribution of learning materials to government school children in Guthyappa Colony
ನಗರದ ಗುತ್ಯಪ್ಪ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ 45 ಬ್ಯಾಗುಗಳು ನೋಟ್ ಬುಕ್ ಹಾಗೂ ಕಲಿಕಾ ಪರಿಕರಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಯುವ ಬೆಂಗಳೂರು ಟ್ರಸ್ಟ್ ನ ನಿರ್ಮಾತೃಗಳಾದ ಶ್ರೀಮತಿ ಶ್ವೇತಾ ರಾವ್ ಶ್ರೀಯುತ ಜಯಂತ್ ಕರಣ ಶ್ರೀಯುತ ಬಿ ವಿ ಸುನಿಲ್ ಶ್ರೀಯುತ ಅಶೋಕ್ ಬಿ ಯಾದವ್ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಗೆಳೆಯರ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲೆಯ ಹಲವಾರು ಶಾಲೆಗಳಿಗೆ ಕಳೆದ ಮೂರು ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಕಲಿಕಾ ಪರಿಕರಗಳಿಗೆ ಕೈಜೋಡಿಸುತ್ತಿದ್ದಾರೆ
ಸರ್ಕಾರಿ ಶಾಲೆಗಳ ಉಳಿವು ಹಾಗೂ ಬೆಳವಣಿಗೆಗೆ ಸಮಾಜದ ಎಲ್ಲಾ ಭಾಗಿದಾರರು ಶ್ರಮಿಸಬೇಕು ಎಂಬುದು ಅವರ ಆಶಯ ಆ ಗೆಳೆಯರ ಬಳಗಕ್ಕೆ ಅನಂತ ಅನಂತಧನ್ಯವಾದಗಳನ್ನ ತಿಳಿಸಿದ್ದಾರೆ.