SUDDILIVE. || SHIVAMOGGA
ಆಪಲ್ ಸ್ಮಾರ್ಟ್ ವಾಚ್ ಕಳೆದುಕೊಂಡ ಮಹಿಳಾ ಪ್ರಯಾಣಿಕರಿಗೆ ಹಿಂದಿರುಗಿಸಿದ ರೈಲ್ವೆ ರಕ್ಷಣ ಪಡೆ-Railway Protection Force returns lost Apple smartwatch to female passenger
ಕೆಂಗೇರಿಯಿಂದ ಶಿವಮೊಗ್ಗಕ್ಕೆ 16227 ರೈಲಿನಲ್ಲಿ ಪ್ರಯಾಣಿಸುವಾಗ ಮಹಿಳಾ ಪ್ರಯಾಣಿಕರ 20 ಸಾವಿರ ಮೌಲ್ಯದ ವಾಚ್ ಕಳೆದುಕೊಂಡಿದ್ದು ಯುವತಿಗೆ ರೈಲ್ವೆ ರಕ್ಷಣೆ ಪಡೆ (ಆರ್ ಪಿಎಫ್) ನವರು ವಾಪಾಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೂ.26 ರಂದು ಕುಮಾರ ವಿಧಿ ಜೈನ್ ಎಂಬ ಯುವತಿ 16227 ಕ್ರಮ ಸಂಖ್ಯೆಯ ಮೈಸೂರು-ತಾಳಗುಪ್ಪ ರೈಲಿನಲ್ಲಿ ಕೆಂಗೇರಿಯಿಂದ ಶಿವಮೊಗ್ಗಕ್ಕೆ ಪ್ರಯಾಣಿಸಿದ್ದರು. ಎ1 ಕೋಚ್ ನಲ್ಲಿ ಪ್ರಯಾಣಿಸುವಾಗ 20 ಸಾವಿರ ರೂ ಮೌಲ್ಯದ ಆಪಲ್ ಸ್ಮಾರ್ಟ್ ವಾಚ್ ನ್ನ ಕಳೆದುಕೊಂಡಿದ್ದರು.
ತಾವು ಕಳೆದುಕೊಂಡ ವಿಷಯವನ್ನ ರೈಲ್ವೆ ಮದತ್ ಪೋರ್ಟಲ್ ನಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಳ್ಳುತ್ತಿದ್ದಂತೆ ಶಿವಮೊಗ್ಗದಲ್ಲಿ ಆರ್ ಪಿಎಫ್ ಪ್ರಕಾಶ್ ಅವರ ನೇತೃತ್ವದ ತಂಡ ಅಲರ್ಟ್ ಆಗಿ ರೈಲು ತಲುಪುವ ಕೊನೆ ರೈಲ್ವೆ ಸ್ಟೇಷನ್ ನಲ್ಲಿ ನಿಲ್ದಾಣದ ಅಧೀಕ್ಷಕ ಬೋಗಿಗಳನ್ನ ಸ್ವಚ್ಛಗೊಳಿಸುವ ತಂಡವನ್ನು ಅಲರ್ಟ್ ಮಾಡಿದ್ದರು.
ಪರಿಣಾಮ ವಾಚ್ ಅದೇ ಬೋಗಿಯಲ್ಲಿ ಪತ್ತೆಯಾಗಿದೆ. ಇಂದು ಆರ್ ಪಿಎಫ್ ಪ್ರಕಾಶ್ ನೇತೃತ್ವದಲ್ಲಿ ವಾಚ್ ನ ಮಾಲೀಕರಾದ ಕುಮಾರಿ ವಿಧಿ ಜೈನ್ ಗೆ ಹಿಂದುರಿಗಿಸಲಾಗಿದೆ. ಆರ್‌ಪಿಎಫ್/ಎಸ್‌ಎಂಇಟಿ ಪ್ರಯಾಣಿಕರು ಮತ್ತು ಅವರ ವಸ್ತುಗಳ ಸುರಕ್ಷತೆ ಮತ್ತು ಭದ್ರತೆಗೆ ಸದಾ ಬದ್ಧರಾಗಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Railway Protection Force returns lost Apple smart watch