SUDDILIVE || SHIVAMOGGA
ಖಾಕಿಪಡೆಯ ವಾಕ್ ಅಂಡ್ ರನ್-police walk and run
ಮಾದಕವಸ್ತು ಜಾಗೃತಿ ಕುರಿತು ಖಾಕಿಪಡೆ ಬೆಳ್ಳಂಬೆಳಿಗ್ಗೆ ವಾಕ್ ಅಂಡ್ ರನ್ ಮಾಡಿದೆ. ಅಭಿಯಾನದ ಪ್ರಯುಕ್ತ ನಗರದಲ್ಲಿ ಜಾಗ್ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿರುವ ಮಾದಕ ವಸ್ತುಗಳ ಕುರಿತು ಜನಜಾಗೃತಿ ಅಭಿಯಾನದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಶಿವಮೊಗ್ಗ ನಗರದಲ್ಲಿ Walk and Run (ನಡಿಗೆ ಮತ್ತು ಓಟ) ವನ್ನು ಹಮ್ಮಿಕೊಂಡಿದ್ದು, ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು Walk and Run ಗೆ ಚಾಲನೆ ನೀಡಿದ್ದು, DAR ಕವಾಯತು ಮೈದಾನದಿಂದ ಪ್ರಾರಂಭಿಸಿ, ಅಶೋಕ ವೃತ್ತ, ಎ ಎ ವೃತ್ತ, ಗೋಪಿ ವೃತ್ತ, ಜೈಲ್ ವೃತ್ತ, ಐ ಬಿ ವೃತ್ತದ ಮುಖಾಂತರ ಪುನಃ ಶಿವಮೊಗ್ಗ DAR ಕವಾಯತು ಮೈದಾನಕ್ಕೆ ಬಂದು ಮುಕ್ತಾಯ ಮಾಡಲಾಯಿತು.
Walk and Run (ನಡಿಗೆ ಮತ್ತು ಓಟ) ನಲ್ಲಿ ಡಿವೈಎಸ್ಪಿ ಸಂಜೀವ್ ಕುಮಾರ್, ಕೃಷ್ಣ ಮೂರ್ತಿ ಪೊಲೀಸ್ ಉಪಾಧೀಕ್ಷಕರು CEN ಪೊಲೀಸ್ ಠಾಣೆ ಮತ್ತು ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.
police walk and run