SUDDILIVE || SAGARA
ಕಸ ಹಾಕಿದ ವಿಚಾರದಲ್ಲಿ ಪ್ರಶ್ನಿಸಿದ ಅಜ್ಜಿನ ಕಂಬಕ್ಕೆ ಕಟ್ಟಿ ಹಲ್ಲೆ-Grandmother tied to a pole and attacked after being questioned about littering
ಮನೆಯ ಮುಂದೆ ಕಸ ಹಾಕಿದ್ದನ್ನ ಪ್ರಶ್ನೆ ಮಾಡಿದ 67 ವರ್ಷದ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ತಾಲೂಕಿನ ಆನಂದಪುರದ ಗೌತಮಪುರ ಗ್ರಾಮದಲ್ಲಿ ನಡೆದಿದೆ.
ಹೌದು.. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅನಂತಪುರ ಹೋಬಳಿಯ ಗೌತಮಪುರ ಗ್ರಾಮದ 67 ವರ್ಷದ ಹುಚ್ಚಮ್ಮ ಎಂಬವವರ ಮನೆಯ ಮುಂದೆ ನೆರೆಮನೆಯವರಾದ ಪ್ರೇಮ ಎಂಬ ಮಹಿಳೆ ಕಸ ತಂದು ಹಾಕಿದನು ಪ್ರಶ್ನೆ ಮಾಡಿದಕ್ಕೆ ಮಂಜುನಾಥ್ , ದರ್ಶನ್ ಹಾಗೂ ಪ್ರೇಮ ಎಂಬುವವರು ಹುಚ್ಚಮ್ಮ ಗೆ ಕೆಟ್ಟದಾಗಿ ಬೈದು, ಮನೆಯಿಂದ ಎಳೆದುಕೊಂಡು ಹೋಗಿ ಕಂಬಕ್ಕೆ ಹಗ್ಗದಿಂದ ಕಟ್ಟಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದ್ದು ಸಮಾಜ ತಲೆತಗ್ಗಿಸುವ ವಿಚಾರವಾಗಿದೆ.
ಘಟನೆ ಕುರಿತು ಹುಚ್ಚಮ್ಮ ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಆರೋಪಿಗಳಾದ ಪ್ರೇಮ , ಮಂಜುನಾಥ ಹಾಗೂ ದರ್ಶನ್ ಎಂಬುವವರ ಮೇಲೆ ಭಾರತೀಯ ನ್ಯಾಯ ಸಂಹಿತಾ (BNS), 2023 (U/s-54,115(2), 127(2),352, r/w 3(5)) ಕಾಯ್ದೆ ಪ್ರಕಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಹಲ್ಲೆಗೊಳಗಾದ ವೃದ್ಧೆಯ ಪುತ್ರ ಕನ್ನಪ ಮಾತನಾಡಿದ್ದು ನನ್ನ ತಾಯಿ ಮೇಲೆ ಅಗಿರುವ ಹಲ್ಲೆ ಆಘಾತಕಾರಿ ಘಟನೆಯಾಗಿದೆ. ಪೋಲಿಸ್ ಇಲಾಖೆ ನನ್ನ ತಂದೆ ತಾಯಿಯನ್ನು ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಇಂತಹ ಅಘಾತಕಾರಿ ಘಟನೆ ನಡೆದಿದ್ದು ಮಾನವ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಏನೇ ಆಗಲಿ ಕ್ಷೇತ್ರದ ಶಾಸಕರು ಹಾಗೂ ಪೋಲಿಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ತಗೆದುಕೊಂಡು ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದೇ ಸಾರ್ವಜನಿಕರ ಕೂಗಾಗಿದೆ.
Grandmother tied to a pole and attacked