SUDDILIVE || SHIVAMOGGA
ದರ್ಪ ಮೆರೆದನಾ ಆ ಯುವಕ?Is that young man arrogant?
ಶಿವಮೊಗ್ಗದ ಗುಂಡಪ್ಪ ಶೆಡ್ಡಿನಲ್ಲಿ ಯುವಕನೊಬ್ಬನು ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಒಂದು ವೈರಲ್ ಆಗಿದೆ ಒಂದು ವಾರದ ಹಳೆಯದು ಎನ್ನಲಾದ ಈ ವಿಡಿಯೋ ಯುವಕ ಮತ್ತು ವ್ಯಕ್ತಿಯ ಮೇಲೆ ಗಲಾಟೆ ಮಾಡಲು ಕಾರಣವೇನು ಎಂಬುದು ಎಲ್ಲೂ ತಿಳಿದು ಬಂದಿಲ್ಲ
ಮಾಹಿತಿಯ ಪ್ರಕಾರ ಗುಂಡಪ್ಪ ಶೆಡ್ ನಲ್ಲಿ ಹಲ್ಲೆಗೊಳಗಾದ ಹಾಗೂ ಹಲ್ಲೆ ನಡೆಸಿದ ಯುವಕ ಇಬ್ಬರು ನೆರೆಹೊರೆಯರು ಎಂಬುದು ಪತ್ತೆಯಾಗಿದೆ ಇದು ಎಷ್ಟರಮಟ್ಟಿಗೆ ಮಾಹಿತಿ ಸತ್ಯವಿದೆ ಎಂಬುದು ಪರಿಶೀಲಿಸಬೇಕಾಗಿದೆ. ವೈರಲ್ ಆದ ಹಿನ್ನೆಲೆಯಲ್ಲಿ ಈ ವಿಡಿಯೋವನ್ನು ಸುದ್ದಿ ರೂಪದಲ್ಲಿ ಬಿತ್ತರಿಸಲಾಗುತ್ತಿದೆ.
ಈ ಹಿಂದೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೋರ್ಷೆ ಕಾರನ್ನ ಕಾಲೇಜಿನ ಒಳಗಡೆ ತರಬಾರದು ಎಂಬ ನಿರ್ಬಂಧವನ್ನು ಹೇರಿದ್ದರು ಸಹ, ಯುವಕ ಕಾಲೇಜಿನ ಒಳಗಡೆ ತಂದು ವಿಷಯ ಗುಲ್ಲೆಬ್ಬಿದ್ದ. ಈ ವಿಷಯಕ್ಕೂ ಹಾಗೂ ಗುಂಡಪ್ಪ ಶೆಡ್ಡಿನಲ್ಲಿ ನಡೆದ ವಿಷಯಕ್ಕೂ ಏನು ಸಂಬಂಧ ಎಂಬುದು ಓದುಗರಲಿ ಸಂಶಯ ಮೂಡಬಹುದು.
ಆದರೆ ಈ ವಿಷಯ ಗುಂಡಪ್ಪ ಹೆಡ್ ನಲ್ಲಿ ವ್ಯಕ್ತಿಯ ಮೇಲೆ ನಡೆಸಿದ ಹಲ್ಲೆ ಯು ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾಹನಗಳಿಗೆ ನಿರ್ಬಂಧ ವಹಿಸಿದ ಜಾಗದಲ್ಲಿ ಪೋರ್ಷೆ ಕಾರನ್ನು ನುಗ್ಗಿಸಿ ದಾಂದಲೆ ನಡೆಸಿದ ಯುವಕ ಇಬ್ಬರು ಒಂದೇ ಎಂದು ಹೇಳಲಾಗುತ್ತಿದೆ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಗಲಾಟೆಯು ಸಹ ಯಾವ ಠಾಣೆಯಲ್ಲಿಯೂ ದೂರು ದಾಖಲಾಗದೆ ರಾಜಿಯಾಗಿತ್ತು. ಅದೇ ರೀತಿ ಗುಂಡಪ್ಪ ಶೆಡ್ಡಿನಲ್ಲಿ ನಡೆದ ಹಲ್ಲೆ ಪ್ರಕರಣವೂ ಸಹ ರಾಜಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದು ಓರ್ವ ರಾಜಕಾರಣಿಯ ನೇತೃತ್ವದಲ್ಲಿ ರಾಜಿ ಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಯಾವ ರಾಜಕಾರಣಿ ಎಂಬುದು ಸಹ ಅಸ್ಪಷ್ಟವಾಗಿದೆ.