ad

ಏನಿದು ನ್ಯೂ ಥೆರಪಿಸ್ಟ್ ಅವೈಲಬಲ್? ಹೊಸ ಟ್ರೆಂಡ್ ಗೆ ದಂಧೆ ತೆರೆದುಕೊಳ್ಳುತ್ತಿದೆಯಾ? Whats is the meaning of New Therapist Available

 SUDDILIVE || SHIVAMOGGA

ಏನಿದು ನ್ಯೂ ಥೆರಪಿಸ್ಟ್ ಅವೈಲಬಲ್? ಹೊಸ ಟ್ರೆಂಡ್ ಗೆ ದಂಧೆ ತೆರೆದುಕೊಳ್ಳುತ್ತಿದೆಯಾ? Whats is the meaning of New Therapist Available

Therapist, available


ನ್ಯೂಥೆರಪಿಸ್ಟ್ ಅವೆಲಬಲ್, ಇಲ್ಲಿಗೆ ಬನ್ನಿ, ರಿಲ್ಯಾಕ್ಸ್ ಆಗಿ ಎಂದು ಸ್ಟೇಟಸ್ ಹಾಕಿಕೊಂಡು ಶಿವಮೊಗ್ಗದಲ್ಲಿ ಬ್ಯೂಟಿ ಪಾರ್ಲರ್ ಗಳು ಮತ್ತು ಸ್ಪಾಗಳು ದಂಧೆಗೆ ಇಳಿಯುತ್ತಿವೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ನ್ಯೂ ಥೆರಪಿಸ್ಟ್ ಎಂದರೆ ಮೆಸಾಜ್ ಮಾಡುವವರು ಸಿಗಲಿದ್ದಾರೆ ಎಂಬ ಅರ್ಥವಾಗಿದ್ದರೂ ಸ್ಪಾಗಳು ಮತ್ತು ಬ್ಯೂಟಿಪಾರ್ಲರ್ ಗಳು ಬೇರೆ ರೀತಿಯ ದಂಧೆಗಳು ನಡೆಯುತ್ತಿವೆ. 

ಹೆಣ್ಣುಮಕ್ಕಳ ಬ್ಯೂಟಿ ಪಾರ್ಲರ್ ಎಂದರೆ ಹೆಣ್ಣುಮಕ್ಕಳಿಗೆ ಹೆಣ್ಣುಮಕ್ಕಳೇ ಬಾಡಿ ಮೆಸೇಜ್ ಮಾಡಬೇಕೆಂಬ ನಿಯಮವಿದೆ. ಈ ನಿಯಮದ ಅಡಿ ಪಾಲಿಕೆಯಿಂದ ಅನುಮತಿಪಡೆಯುವ ಬ್ಯೂಟಿ ಪಾರ್ಲರ್ ಗಳು ಮತ್ತು ಸ್ಪಾಗಳು ನಡೆಯುವ ದಂಧೆನೇ ಬೇರೆಯಾಗಿದೆ. 

ಈ ಹಿಂದೆ ಪೊಲೀಸರು ಬ್ಯೂಟಿ ಪಾರ್ಲರ್ ಗಳ‌ಮೇಲೆ ದಾಳಿ ನಡೆಸಿದ್ದರು. ಪೊಲೀಸರ ದಾಳಿಯ ಹಿಂದೆ ಪತ್ರಕರ್ತನ ವಾಸನೆ ಬರುತ್ತಿತ್ತು. ಇದರಿಂದ ಅಮಾಯಕರ ಪಾರ್ಲರ್ ಗಳು ಟಾರ್ಗೆಟ್ ಆಗಿದ್ದವು. ಹಣ ನೀಡದವರು ಪತ್ರಕರ್ತನ ಟಾರ್ಗೆಟ್ ಆಗಿದ್ದರಿಂದ ಯಶಸ್ವಿಯಾಗಿರಲಿಲ್ಲ. 

ಆದರೆ ಈ ಬಾರಿ ನೊಂದ ಬ್ಯೂಟಿ ಪಾರ್ಲರ್ ನ ಮಾಲೀಕರು ಎಸ್ಪಿಗೆ ಮನವಿ ಮಾಡಿದ್ದಾರೆ. ಪಾರ್ಲರ್ ಗಳಲ್ಲಿ ಹ್ಯಾಪಿ ಎಂಡಿಂಗ್ ಮತ್ತು ಬಿ2ಬಿ ಗಳ ಅರ್ಥವೂ ಬಹಳ ಕೆಟ್ಟ ಅರ್ಥವನ್ನ ನೀಡುವಂತಹವದ್ದಾಗಿದೆ. ಈಗ ನ್ಯೂ ಥೆರಪಿಸ್ಟ್ ನ ಅಡಿಯಲ್ಲಿ ಹೊರ ಜಿಲ್ಲೆಯ ಕಾಲೇಜು ಹೆಣ್ಣುಮಕ್ಕಳನ್ನ‌ ಕರೆಯಿಸಿ ದಂಧೆ ನಡೆಸಲಾಗುತ್ತಿದೆ. ಹೆಣ್ಣುಮಕ್ಕಳ ಫೊಟೊವನ್ನ ಸ್ಟೇಟಸ್ ಗೆ ಹಾಕಿಕೊಂಡು ಮಾರ್ಕೆಟ್ ಮಾಡಲಾಗುತ್ತಿದೆ ಎಂದು ನೊಂದ ಮಾಲೀಕರು ಮನವಿಯಲ್ಲಿ ತಿಳಿಸಿದ್ದಾರೆ. 

ಇಂತಹ ದಂಧೆಗಳಿಂದ ನಿಜವಾಗಿ ನಡೆಯುತ್ತಿರುವ ಬ್ಯೂಟಿ ಪಾರ್ಲರ್ ಗಳು ರೋಸಿಹೋಗಿ ಉದ್ಯಮದಿಂದ ದೂರ ಉಳಿಯುವಂತೆ ಮಾಡಿದೆ. ಇಂತಹ ದಂಧೆಗಳಿಗೆ ಪೊಲೀಸಪ್ಪನ ಕೃಪಾಪೋಷಿತವೂ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಇಲಾಖೆ ರಿಲ್ಯಾಕ್ಸ್ ಆಗಿ ಬಿಟ್ಟರೆ ಶಿವಮೊಗ್ಗ ಮಂಗಳೂರು ಮತ್ತು ಬೆಂಗಳೂರಿನಲ್ಲಿ ನಡೆಯುತ್ತಿರುವ ದಂಧೆಯ ಅಡ್ಡದಂತಾಗಿ ಬಿಡುವ ಅಪಾಯವಿದೆ. 

ನೈಜವಾಗಿ ಪ್ರಾಮಾಣಿಕರಾಗಿ ಬದುಕುವವರ ಅನ್ನವನ್ನ ಕಸಿಯದೆ, ದಂಧೆಗೆ ಇಳಿಯುವ ಪಾರ್ಲರ್ ಗಳ ಮೇಲೆ ಕ್ರಮ‌ಕೈಗೊಳ್ಳುವ ಅಗತ್ಯವಿದೆ. 120 ಕ್ಕೂ ಹೆಚ್ಚು ಬ್ಯೂಟಿ ಪಾರ್ಲರ್ ಗಳು ಶಿವಮೊಗ್ಗದಲ್ಲಿವೆ ಎಂಬ ಮಾಹಿತಿಯನ್ನ‌ ನೊಂದ ಪಾರ್ಲರ್ ಮಾಲೀಕರು ಹಂಚಿಕೊಂಡಿದ್ದು ಐದಕ್ಕೂ ಹೆಚ್ಚು ಪಾರ್ಲರ್ ಇಂತಹ ದಂಧೆಯನ್ನ ನಡೆಸುತ್ತಿದ್ದಾರೆ. 

ನ್ಯೂ ಥೆರಪಿಸ್ಟ್ ಅವೆಲೆಬಲ್ ಎಂಬ ಹೆಸರಿನಲ್ಲಿ ದಂಧೆಗಿಳಿಯುತ್ತಿರುವ ಅಮಾಯಕ ಹೆಣ್ಣುಮಕ್ಕಳನ್ನ ದಂಧೆಗೆ ಹಚ್ಚುವ ಕೆಲಸದಲ್ಲಿ ತೊಡಗಿರುವರಿಗೆ ಬ್ರೇಕ್ ಬೀಳಲಿದೆ. ಎಸ್ಪಿ ಅವರು ಈ ಕೆಲಸ ಮಾಡುವವಲ್ಲಿ ಶಕ್ತರಿದ್ದಾರೆ ಎಂಬ ನಂಬಿಕೆಯಿದೆ. ಮಹಿಳಾ ಆಯೋಗವೂ ಈ ವಿಚಾರದಲ್ಲಿ ಆಕ್ಟಿವ್ ಆಗಬೇಕಿದೆ. ಇಂತಹ ವಿಚಾರದಲ್ಲಿ ಆಯೋಗ ಎಷ್ಟು ಕೇಸ್ ದಾಖಲಾಗಿವೆ ಎಂಬ ಪ್ರಶ್ನೆಗೂ ಉತ್ತರಿಸಬೇಕಿದೆ. ಶಿವಮೊಗ್ಗದಲ್ಲಿರುವ 

Whats is the meaning of New Therapist Available

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close