ಬೊಮ್ಮನ್ ಕಟ್ಟೆಯ ಕೆರೆ ಏರಿಯ ಮೇಲೆ ಮರ್ಡರ್- Murder at bomman Katte

 SUDDILIVE || SHIVAMOGGA

ಬೊಮ್ಮನ್ ಕಟ್ಟೆಯ ಕೆರೆ ಏರಿಯ ಮೇಲೆ ಮರ್ಡರ್- Murder at bomman Katte

Murder, Bommankatte


ಬೊಮ್ಮನ್ ಕಟ್ಟೆಯ ಕೆರೆ ಏರಿಯಾದಲ್ಲಿ ವ್ಯಕ್ತಿಯೋರ್ವನ ಕೊಲೆಯಾಗಿದೆ. ಲಾಂಗಿನಿಂದ  ದಾಳಿ ನಡೆಸಿ ಹತ್ಯೆ ನಡೆದಿರುವಘಟನೆ ನಿನ್ನೆ ರಾತ್ರಿಯೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. 

ಕೊಲೆಯಾದವನನ್ನ ಅವಿನಾಶ್ (32) ಕೊಲೆಯಾದ ವ್ಯಕ್ತ ಎಂದು ಗುರುತಿಸಲಾಗಿದೆ. ಅವಿನಾಶ್ 10 ವರ್ಷದ ಹಿಂದೆ ತಮಿಳು ಗಿರಿಯ ಕೊಲೆ ಪ್ರಕರಣದಲ್ಲಿ ಭಾಗಿ ಆಗಿದ್ದ ಎಂದು ತಿಳಿದುಬಂದಿದೆ. ಅವಿನಾಶ್ ಇನ್ನೂ ಮದುವೆಯಾಗಿರಲಿಲ್ಲ. ಟೈಲ್ಸ್ ಕೆಲಸಕ್ಕೆ ಹೋಗಿ ಬಂದಿದ್ದ ಅವಿನಾಶ್ ಇಂದು ಬೆಳಿಗ್ಗೆ ಕೆರೆ ಏರಿಯಾ ಮೇಲೆ ಕೊಲೆಯಾಗಿದೆ.



ಪ್ರಕರಣದಲ್ಲಿ ಅವಿನಾಶ್ ಗೆ ಜೀವಾವಧಿ ಶಿಕ್ಷೆಯಾಗಿತ್ತು. ಐದು ವರ್ಷ ಜೈಲಿನಲ್ಲಿದ್ದ ಆತ


ಹೈಕೋರ್ಟ್ ಜಾಮೀನಿನ ಮೇಲೆ ಒಂದು ವರ್ಷದ ಕೆಳಗೆ ಹೊರಗೆ ಬಂದಿದ್ದ ಅವಿನಾಶ್ ಕೊಲೆಯಾಗಿ ಶವವಾಗಿ ಬಿದ್ದಿದ್ದನ್ನ ಬೊಮ್ಮನ್ ಕಟ್ಟೆಯ ಕೆರೆ ಏರಿಯಾ ಮೇಲೆ  ಓಡಾಡುವ ರೈತರು ವಿನೋಬ ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. 

ರಾತ್ರಿ 9 ಗಂಟೆಗೆ  ಊಟ ಮುಗಿಸಿಕೊಂಡು ಮನೆಯಿಂದ ಹೊರಗೆ ಹೋದಾಗ ವಾಪಾಸ್ ಆಗಿಲ್ಲ. ಸ್ಥಳದಲ್ಲಿ ಮಚ್ಚು ದೊರೆತಿದೆ ಎಂದು ತಂದೆ ಶೇಖರಪ್ಪ ಹೇಳಿದ್ದಾರೆ.  ಊರಿನಲ್ಲಿ ಅವಿಅಶ್ ಚೆನ್ನಾಗಿದ್ದ. ಸ್ಏಹಿತರೊಂದಿಗೆ ಚೆನ್ನಾಗಿದ್ದ. ಊರಿನ ಶ್ರೀನಿವಾಸ್ ತಿಳಿಸಿದ್ದಾರೆ. 

ಸ್ಥಳಕ್ಕೆ ಅಡಿಷನಲ್ ಎಷ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಡಿವೈಎಸ್ಪಿ ಸಂಜೀವ್ ಕುಮಾರ್, ವಿನೋಬನಗರ ಪಿಐ ಸಂತೋಷ್ ಕುಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ತಂದೆಯ ಆಕ್ರಂಧನ ಮುಗಿಲು ಮುಟ್ಟಿದೆ. 

Murder at bomman Katte

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close