ಕೆಟ್ಟು ನಿಂತ ಕುವೆಂಪು ಎಕ್ಸ್ ಪ್ರೆಸ್-ಪ್ರಯಾಣಿಕರ ಪರದಾಟ-Passengers struggle after Kuvempu Express breaks down

SUDDILIVE || SHIVAMOGGA

ಕೆಟ್ಟು ನಿಂತ ಕುವೆಂಪು ಎಕ್ಸ್ ಪ್ರೆಸ್-ಪ್ರಯಾಣಿಕರ ಪರದಾಟ-Passengers struggle after Kuvempu Express breaks down

Passanger, kuvempu express


ಮಾರ್ಗ ಮಧ್ಯೆದಲ್ಲೇ ರೈಲು ಕೆಟ್ಟು ನಿಂತ  ಪರಿಣಾಮ ಶತಾಬ್ದಿ ರೈಲಿನ ಪ್ರಯಾಣಿಕರಿಗೂ ತೊಂದರೆ ಉಂಟಾಗಿದೆ. ಒಂದು ಗಂಟೆಗೂ ಹೆಚ್ಚುಕಾಲ ಭದ್ರಾವತಿಯಲ್ಲಿ ಕುವೆಂಪು ಎಕ್ಸ್ ಪ್ರೆಸ್ ಇಂಜಿನ್ ಫೇಲ್ ಆದ ಪರಿಣಾಮ ಶಿವಮೊಗ್ಗ ಕಡೆ ಬರಬೇಕಾದ ಪ್ರಯಾಣಿಕರು ಪರದಾಡುವಂತಾಗಿದೆ. 


16222 ಕುವೆಂಪು ಎಕ್ಸ್ ಪ್ರೆಸ್ ರೈಲು ಶಿವಮೊಗ್ಗ ನಿಲ್ದಾಣಕ್ಕೆ 8-45 ಕ್ಕೆ ಬರಬೇಕಿತ್ತು. ಭದ್ರಾವತಿ ನಿಲ್ದಾಣ ಬಿಟ್ಟು ಸ್ವಲ್ಪ ದೂರದಲ್ಲೇ ಇಂಜಿನ್ ಫೇಲ್ ಆಗಿದೆ. ಕಾರಣ ಗಂಟೆಗಟ್ಟಲೆ ನಿಲ್ಲುವಂತಾಗಿದೆ. ಈಗ ಶಿವಮೊಗ್ಗದಿಂದ‌ ಇಂಜಿನ್ ಕಳುಹಿಸಲಾಗಿದ್ದು ಅದನ್ನ ಕತೆತರುವ ಎಲ್ಲಪ್ರಯತ್ನಗಳು ನಡೆಯುತ್ತಿದೆ. 

ಇದರಿಂದಾಗಿ ಎರಡು ಬಾರಿ ರೈಲು ಕೆಟ್ಟು ನಿಂತಿದೆ. ಮಧ್ಯಾಹ್ನ ಯಶವಂತಪರ-ಶಿವಮೊಗ್ಗ ಗಾಡಿಯೂ ಸಹ ಇಂಜಿನ್ ಫೈಲ್ಯೂರ್ ಆಗಿ ಭದ್ರಾವತಿಯಿಂದ ಎರಡು ಗಂಟೆ ತಡವಾಗಿ ಹೊರಟಿದೆ.  ಇಂದು ರವಿವಾರ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ರೈಲು ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. 

Passengers struggle after Kuvempu Express breaks down

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close