ಸೊರಬ ಸೆಕ್ಷನ್ ಆಫೀಸರ್ ಲೋಕ ಬಲೆಗೆ-Soraba Section Officer Lok is caught in the net

 SUDDILIVE || SORABA

ಸೊರಬ ಸೆಕ್ಷನ್ ಆಫೀಸರ್ ಲೋಕ ಬಲೆಗೆ-Soraba Section Officer Lok is caught in the net

Lokayukta, net


ಟೆಂಡರ್ ಕಾಮಗಾರಿಗೆ ಬಾಕಿ ಉಳಿದಿದ್ದ ಕಮಿಷನ್ ಪಡೆಯುವ ವೇಳೆ ಸೊರಬ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಪರಶುರಾಮ ನಾಗರಾಳ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ 

ತಾಲೂಕಿನ ಅಸವಿ ಗ್ರಾಮದ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಲಿಂಗರಾಜು ಶಿವಪ್ಪ ಉಳ್ಳಾಗಡ್ಡಿ ಎಂಬುವರು ಸೊರಬ ತಾಲೂಕಿನ ಚೀಲನೂರು ಹಾಗೂ ಕಣ್ಣೂರು ಗ್ರಾಮಗಳ ರಸ್ತೆ ಡಾಂಬರೀಕರಣ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಪಿಎಂಶ್ರೀ ಯೋಜನೆ ಅಡಿ ಸರ್ವ ತಾಲೂಕಿನ ಎಣ್ಣೆಕೊಪ್ಪ ಗ್ರಾಮದ ಶಾಲೆ ದುರಸ್ತಿ ಅಭಿವೃದ್ಧಿ ಸೇರಿ ಒಟ್ಟು 77 ಲಕ್ಷದ 59,437 ರೂಗಳ ಕಾಮಗಾರಿಯನ್ನು ಮುಗಿಸಿದ್ದರು. 

ಈ ಕಾಮಗಾರಿಗಳಿಗೆ ಸೆಕ್ಷನ್ ಆಫೀಸರ್ ಪರಶುರಾಮ್ ನಾಗರಾಳ್ ಶೇಕಡ ಮೂರರಂತೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಬೇಡಿಕೆಯಂತೆ 1,63,000 ಗಳನ್ನು ಲಿಂಗರಾಜು ಅವರಿಂದ ಪಡೆದುಕೊಂಡಿದ್ದರು ಎಪ್ಪತ್ತು ಸಾವಿರ ರೂಗಳ ಹೆಚ್ಚಿನ ಬೇಡಿಕೆಗೆ ನಾಗರಾಳ ಬೇಡಿಕೆ ಇಟ್ಟಿದ್ದನು. 

ಇಂದು ಸೊರಬ ಉಪ ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಿರಿಯ ಅಭಿಯಂತರ ಪರಶುರಾಮ್ ಶಿರಾಳಕೊಪ್ಪ ನಗರದ ಶಿಕಾರಿಪುರ ರಸ್ತೆಯಲ್ಲಿರುವ ಮೆಡಿಕಲ್ ಶಾಪ್ ಬಳಿ ಲಿಂಗರಾಜು ಅವರಿಂದ 30,000 ಹಣವನ್ನು ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಬಿದ್ದಿದ್ದಾನೆ.

Soraba Section Officer Lok is caught in the net

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close