ಸಬ್ ರಿಜಿಸ್ಟರ್ ಕಚೇರಿ ಸ್ಥಳಾಂತರ- Sub-Registrar Office Relocation

SUDDILIVE || SHIVAMOGGA

ಸಬ್ ರಿಜಿಸ್ಟರ್ ಕಚೇರಿ ಸ್ಥಳಾಂತರ-Sub-Registrar Office Relocation

Sub-Registrar Office,  Relocation

ಜೂ.9 ರಿಂದ ವಿನೋಬನಗರದಲ್ಲಿರುವ ಸಬ್ ರಿಜಿಸ್ಟರ್ ಕಚೇರಿಯನ್ನು ನಗರದ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ಯಾರ್ಡ್ನ ಮಳಿಗೆಗೆ ಸ್ಥಳಾಂತರ ಗೊಳಿಸಲಾಗುತ್ತಿದೆ

ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸಂಕೀರ್ಣದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಸಾಗರ ರಸ್ತೆಯಲ್ಲಿರುವ ಎಪಿಎಂಸಿ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯಲ್ಲಿರುವ ಮಳಿಗೆ ಸಂಖ್ಯೆ 108 ಮತ್ತು 109ಕ್ಕೆ ಸ್ಥಳಾಂತರಿಸಲಾಗಿದೆ.

ಜೂ. 09 ರಿಂದ ಕಾರ್ಯಾರಂಭ ಮಾಡಲಾಗುತ್ತದೆ ಎಂದು ಹಿರಿಯ ಉಪನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಮೊದಲೇ ಸಬ್ ರಿಜಿಸ್ಟರ್ ಕಚೇರಿಯನ್ನು ಸ್ಥಳಾಂತರ ಗೊಳಿಸುವ ಬಗ್ಗೆ ಪರ ವಿರೋಧ ಮಾತುಗಳು ಹರಿದಾಡುತ್ತಿದ್ದವು. ಸ್ಥಳಾಂತರಗೊಳಿಸುವ ಬಗ್ಗೆ ಸಚಿವರು ಸಹ ತಿಳಿಸಿದ್ದರು ಈಗ ಕಚೇರಿಯನ್ನು ಎಪಿಎಂಸಿ ಯಾರ್ಡ್ ನಲ್ಲಿ ಸ್ಥಳಾಂತರ ಗೊಳಿಸಲಾಗುತ್ತಿದೆ.

ಕಟ್ಟಡ ಬಹಳ ಹಳೆಯದಾಗಿದ್ದು ಮತ್ತು ಗ್ರಾಹಕರಿಗೆ ಮೂಲ ಸೌಕರ್ಯಗಳ ಕೊರತೆಯ ಹಿನ್ನಲೆಯಲ್ಲಿ ಕಚೇರಿಯನ್ನ ಸ್ಥಳಾಂತರಗೊಳಿಸಲಾಗುತ್ತಿದೆ. 

Sub-Registrar Office Relocation     

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close