ಜಾತ್ರೆಯ ವಿಡಿಯೋ ಮಾಡಿದ್ದಕ್ಕೆ ಬೆದರಿಕೆ- Threatened for making a video of the fair

 SUDDILIVE || BHADRAVATHI

ಜಾತ್ರೆಯ ವಿಡಿಯೋ ಮಾಡಿದ್ದಕ್ಕೆ ಬೆದರಿಕೆ-Threatened for making a video of the fair

Threatened, fair

ತಾಲೂಕಿನ ರಂಗನಾಥಪುರದ ಮಾರಮ್ಮನ ದೇವಸ್ಥಾನದ ಜಾತ್ರೆಯ ವೇಳೆ ವಿಡಿಯೋ ತೆಗೆಯುತ್ತಿದ್ದ ಯುವಕನ ಮೇಲೆ ಯುವಕರ ಗುಂಪು ಎಂದು ಮುಗಿಬಿದ್ದಿದೆ ಈ ಹಿನ್ನೆಲೆಯಲ್ಲಿ ಕಿರಣ ಅಲಿಯಾ ಸೇಟು ಕಿರಣ ರಘು ಮುನಿಯ ಸುಹಾಸ್ ಎಂಬುವರ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೂನ್ ನಾಲ್ಕನೇ ತಾರೀಕು ಭದ್ರಾವತಿಯ ರಂಗನಾಥಪುರ ಗ್ರಾಮದಲ್ಲಿರುವ ಮಾರಮ್ಮನ ಜಾತ್ರೆಗೆಂದು ತನ್ನ ಚಿಕ್ಕಮ್ಮನ ಮನೆಗೆ ಲಿಖಿತ್ ಎಂಬವರು ಹೋಗಿದ್ದರು. ಭದ್ರಾವತಿ ತಾಲೂಕು ಎರೆಹಳ್ಳಿ ಗ್ರಾಮದ ಬಸನಗುಡಿ ನಿವಾಸಿ ಲಿಖಿತ್ ಶಿವಾನಿ ಕ್ರಾಸ್ ಬಳಿ ಇರುವ ಎಚ್ ಪಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುವ ಕೂಲಿ ಕೆಲಸ ಮಾಡಿಕೊಂಡಿದ್ದರು ತನ್ನ ಸಹೋದರ ಮನೋಜನಿಗೆ ಮಾರಮ್ಮ ದೇವರ ಮೆರವಣಿಗೆಯನ್ನು ವಿಡಿಯೋ ಕಾಲ್ ಮೂಲಕ ತೋರಿಸುತ್ತಿದ್ದನು.

ಈ ವೇಳೆ ರಂಗನಾಥಪುರದ ನಿವಾಸಿ ಕಿರಣ ಯಾನೆ ಸೇಟು ಕಿರಣ ರಘು ಮುನಿಯ ಸುಹಾಸ್ ಲಿಖಿತ್ ಎಂಬುವರ ಕಡೆ ಬಂದು ಯಾಕೋ ವಿಡಿಯೋ ಮಾಡುತ್ತಿದ್ದೀಯಾ ನಮ್ಮೂರಿನಲ್ಲಿ ಬಂದು ನಮಗೆ ವಿಡಿಯೋ ಮಾಡುತ್ತೀಯಾ ಎಂದು ಬೈದಿದ್ದಾರೆ ಘಟನೆಯ ಬಳಿಕ ರಂಗನಾಥಪುರದ ನಾಗಣ್ಣನವರ ಅಂಗಡಿಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಕಿರಣ ಲಿಖಿತ್ ಎಂಬುವರು ಬಳಿ ಬಂದು ಅವಾಗ ವಿಡಿಯೋ ಮಾಡುತಿದ್ದೆ ಯಾಕೆ ಎಂದು ಪುನಃ ಕ್ಯಥೆ ತೆಗೆದಿದ್ದಾನೆ ಈ ವೇಳೆ ಆಯುಧವನ್ನು ತೆಗೆದು ಬೆದರಿಸಿರುವುದಾಗಿ ಲಿಖಿತ್ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಲಿಖಿತ್ ಮನವಿ ಮಾಡಿದ್ದಾನೆ.

Threatened for making a video of the fair


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close