SUDDILIVE || SHIVAMOGGA
ಆಗುಂಬೆ ತೀರ್ಥಹಳ್ಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ-Tree falls across Agumbe Thirthahalli road
ಶಿವಮೊಗ್ಗದ ಜಿಲ್ಲೆಯಾದ್ಯಂತ ಮಳೆ ಅಷ್ಟೊಂದು ಚುರುಕಾಗದಿದ್ದರೂ, ಪಶ್ಚಿಮ ಘಟ್ಟ ಆಗುಂಬೆ ಎಲ್ಲಿ ಮಳೆಯ ಆರ್ಭಟ ಮುಂದುವರೆದಿದೆ ಮಳೆಗೆ ಅಲ್ಲಲ್ಲಿ ಮರಗಳು ಬಿದ್ದಿರುವ ಹಾಗೂ ವಾಹನಗಳು ತ್ತಿರುವ ಸುದ್ದಿ ಕೇಳಿ ಬರುತ್ತಿದೆ
ಇಂದು ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿ ಮರವೊಂದು ಮಳೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ವಾಹನಗಳ ಟ್ರಾಫಿಕ್ ಜ್ಯಾಮ್ ನಿಂದಾಗಿ ಕಿಲೋ ಮೀಟರ್ ಗಟ್ಟಲೆ ಕಾರುಗಳು ಸರದಿ ಸಾಲು ಕಟ್ಟಿವೆ. ವಾಹನ ಚಾಲಕರೇ ಬಿದ್ದ ಮರಗಳನ್ನ ತುಂಡಾಗಿ ಕತ್ತರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಅದರಂತೆ ಮೇಘರವಳ್ಳಿಯ ಬಳಿ ಸ್ಕೋಡಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡ ಭಾಗದ ಬಳಿ ವಾಲಿದೆ. ಹೀಗೆ ಮಳೆಗಾಲದಲ್ಲಿ ಆಗುಂಬೆ ರಸ್ತೆಯ ಚಿತ್ರಣಗಳೆ ಬದಲಾಗಿದೆ.
Tree falls across Agumbe Thirthahalli road