ಸೊರಬ ತಾಲ್ಲೂಕಿನಲ್ಲಿ ಬೃಹತ್ ಮರ ಬಿದ್ದು ಇಬ್ಬರಿಗೆ ಗಾಯ-Two injured after huge tree falls in Sorab taluk

SUDDILIVE|| SHIVAMOGGA

ಸೊರಬ ತಾಲ್ಲೂಕಿನಲ್ಲಿ ಬೃಹತ್ ಮರ ಬಿದ್ದು ಇಬ್ಬರಿಗೆ ಗಾಯ-Two injured after huge tree falls in Sorab taluk

Tree, Falls


ತಾಲ್ಲೂಕಿನ ಉಳವಿ ಸಮೀಪದ ಕರ್ಜಿಕೊಪ್ಪ ಗ್ರಾಮದ ಬಳಿ ರಸ್ತೆ ಮೇಲೆ ಬೃಹತ್ ಗಾತ್ರದ ಮರವು ಕ್ಯಾಂಟರ್ ವಾಹನದ ಮೇಲೆ ಉರುಳಿ ಬಿದ್ದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಹಿರೇಕೆರೂರಿನಿಂದ ಉಳವಿ ಗ್ರಾಮದಲ್ಲಿ ಗೊಬ್ಬರ ತುಂಬಲು ಹೊರಟಿದ್ದ ಕ್ಯಾಂಟರ್ ವಾಹನ ಈ ಅವಘಡಕ್ಕೆ ಒಳಗಾಗಿದೆ.

ಈ ದುರ್ಘಟನೆದಲ್ಲಿ ಹಿರೇಕೆರೂರು ತಾಲೂಕಿನ ಹದ್ರಿಹಳ್ಳಿ ಗ್ರಾಮದ ಹನುಮಂತಪ್ಪ ಮತ್ತು ವೀರೇಶ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಕ್ಷಣ ಕರೆದೊಯ್ಯಲಾಗಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸಾಗರಕ್ಕೆ ರವಾನಿಸಲಾಗಿದೆ.

ಮಳೆಯ ಕಾರಣದಿಂದ ಮಣ್ಣು ಒದ್ದೆಯಾಗಿದ್ದ ಹಿನ್ನೆಲೆಯಲ್ಲಿ ಮರ ಬಿದ್ದಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಸಂಚಾರಕ್ಕೆ ತೊಂದರೆ ಉಂಟಾದ ಕಾರಣ, ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ.

ಸ್ಥಳೀಯರು ಹಾಗೂ ವಾಹನ ಸವಾರರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದು, ಬಿದ್ದುಹೋಗುವಂತ ಪರಿಸ್ಥಿತಿಯಲ್ಲಿರುವ ಮರಗಳನ್ನು ಪೂರ್ವವಾಗಿ ಕಡಿದು ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Two injured after huge tree falls in Sorab taluk

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close