ಹುಲಿ ಸಿಂಹಗಳ ವಿನಿಮಯ-Tiger and lion exchange

 SUDDILIVE || SHIVAMOGGA 

ಹುಲಿ ಸಿಂಹಗಳ ವಿನಿಮಯ-Tiger and lion exchange

Tiger, lion

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ  ಹೊಸ ಹುಲಿಗಳ ತಂಡವೇ ಮಹಾರಾಷ್ಟ್ರದಿಂದ ಆಗಮಿಸಲಿದೆ. ಹೌದು ಮಹಾರಾಷ್ಟ್ರದ ಔರಂಗಾಬಾದ್ ಮೃಗಾಲಯದಿಂದ ಒಂದು ಗಂಡು ಮತ್ತು ಎರಡು ಹೆಣ್ಣು ಹುಲಿಗಳನ್ನು ತರಲು ಕೇಂದ್ರೀಯ ಮೃಗಾಲಯ ಪ್ರಾಧಿಕಾರ ಸಮ್ಮತಿಸಿದೆ. 

ಔರಂಗಾಬಾದ್‌ನಿಂದ ಹುಲಿಗಳನ್ನು ತರಲು ಅನುಮತಿ ಲಭ್ಯವಾಗಿದ್ದು, ಹುಲಿಗಳಿಗೆ ಬದಲಾಗಿ ಲಯನ್ ಸಫಾರಿ ಇಂದ ಎರಡು ಸಿಂಹಗಳು ಅರ್ಜುನ್ ಮತ್ತು ಸುಶ್ಮಿತಾ ಔರಂಗಾಬಾದ್​ ಮೃಗಾಲಯಕ್ಕೆ ರವಾನೆ ಮಾಡಲಾಗುತ್ತದೆ. ಬರುವ ಜುಲೈ ತಿಂಗಳ ಅಂತ್ಯದ ವೇಳೆಗೆ ಸಿಂಹಧಾಮಕ್ಕೆ ಹೊಸ ಹುಲಿಗಳು ಶಿವಮೊಗ್ಗದ ಸಫಾರಿಗೆ ಪ್ರವೇಶ ಮಾಡಲಿವೆ.

ಅದರಂತೆ ಮಧ್ಯಪ್ರದೇಶದ ಇಂದೂರಿನಿಂದ ಹುಲಿ ಮತ್ತು ಸಿಂಹ ಗಳು ಆಗಮಿಸುವ ನಿರೀಕ್ಷೆ ಇದೆ ಜುಲೈ  ತಿಂಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಔರಂಗಾಬಾದಿಗೆ ಎರಡು ಸಿಂಹಗಳನ್ನು ನೀಡಿ ಮೂರು ಹೊಸ ಹುಲಿಗಳನ್ನು ತರುವ ಪ್ರಕ್ರಿಯೆ ಬೆನ್ನಲ್ಲೇ ಸಪಾರಿಗೆ ಇಂದೂರಿನಿಂದಲೇ ಎರಡು ಹೊಸ ಸಿಂಹಗಳು ಬರಲಿದೆ ಸಿಂಹಗಳು ರವಾನಿಯಾಗುತ್ತಿರುವ ಬಗ್ಗೆ ಈಗಾಗಲೇ ಅನುಮತಿ ದೊರೆತಿದೆ 

ಸಿಂಹದಾಮದಲ್ಲಿ ಇರುವ ಸಿಂಹಗಳಿಗೆ ಸಂತಾನೋತ್ಪತ್ತಿಯ ವಯಸ್ಸು ದಾಟಿ ಹೋಗಿದ್ದು ಹೊಸದಾಗಿ ಬರುವ ಸಿಂಹಗಳಿಂದ ವಂಶವೃದ್ದಿ ಆಗಬೇಕಿದೆ ಎಂದೂರಿನಿಂದ ಮತ್ತೊಂದು ಹುಲಿಯೂ ಸಹ ಆಗಮಿಸುವ ನಿರೀಕ್ಷೆ ಇದೆ ವಿನಹ ಈ ಬಗ್ಗೆ ಅನುಮತಿ ದೊರೆತಿಲ್ಲ. 

ಒಂದು ವೇಳೆ ಇಂದೂರಿನಿಂದ ಹುಲಿ ಆಗಮಿಸಿದ್ದಲ್ಲಿ ಇವುಗಳ ಸಂಖ್ಯೆ ಲಯನ್ ಸಫಾರಿಯಲ್ಲಿ ಎಂಟಕ್ಕೆ ಏರಿಕೆಯಾಗಲಿದೆ. ಸಿಂಹಗಳ ಸಂಖ್ಯೆಯೂ ಸಹ ನಾಲ್ಕರಲ್ಲಿ ಇರಲಿದ್ದು ವಂಶಾ ವೃದ್ಧಿಯ ಆಲೋಚನೆ ಹಿನ್ನೆಲೆಯಲ್ಲಿ ಅದರ ಬದಲು ಆಗುತ್ತಿದೆ.

Tiger and lion exchange

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close