SUDDILIVE || SHIVAMOGGA
ಚಿಕಿತ್ಸೆ ಫಲಕಾರಿಯಾಗದೆ ಯುವ ವೈದ್ಯ ಸಾವು-Young doctor dies after treatment fails
ಚಿಕಿತ್ಸೆ ಫಲಕಾರಿಯಾಗದೆ ಯುವ ವೈದ್ಯ ಸಾವನಪ್ಪಿದ್ದಾಳೆ. ಜೂನ್ 15ರಂದು ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವ ವೈದ್ಯ ಚಿಕಿತ್ಸೆ ಫಲಕಾರಿಯಾಗದೆ ಸವಾಗಿದೆ.
ಶಿವಮೊಗ್ಗದ ಆರ್‌ಎಂಎಲ ನಗರದ ನಿವಾಸಿ ಸನ ರಾಬಿಯ ಕೌಸರ್ ಮೃತಪಟ್ಟಿರುವ ಯುವ ವೈದ್ಯ ಎಂದು ಗುರುತಿಸಲಾಗಿದೆ. ಸನಾ ರಾಬಿಯ ಕೌಸರ್ ಇತ್ತೀಚೆಗೆ ಎಂ ಬಿ ಬಿ ಎಸ್ ಪೂರ್ಣಗೊಳಿಸಿದ್ದು ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದರು.
ಜೂನ್ 15ರ ಮಧ್ಯಾಹ್ನ ಎರ್ಟಿಗಾ ಕಾರ್ ನಲ್ಲಿ ಸುಮಾರು ಐದಾರು ಜನರಿದ್ದ ಯುವ ವೈದ್ಯರ ತಂಡ ಹೊಸನಗರದ ಪ್ರವಾಸ ತಾಣಕ್ಕೆ ತೆರಳುತ್ತಿತ್ತು ನಗರದ ಹೊರವಲಯದಲ್ಲಿರುವ ಹುಲಿ ಸಿಂಹ ದಾಮದ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರು ಡಿವೈಡರ್ಗೆ ಡಿಕ್ಕಿಯಾಗಿ ಪಾರ್ಟಿಯಾಗಿತ್ತು.
ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಪಘಾತದಲ್ಲಿ ತೀವ್ರವಾಗಿ ಗಂಭೀರ ಗಾಯಗೊಂಡಿದ್ದ ಸನಾರಾಬಿಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಸವನಪ್ಪಿದ್ದಾರೆ ಪ್ರಕರಣ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
Young doctor dies after treatment fails