ad

ನರಿಬುದ್ದಿಯ ಸಂಸದ, ನಾನು ಮಂತ್ರಿಗಿರಿ ಆಕಾಂಕ್ಷಿ ಹೌದು-ಬೇಳೂರು-A fox-minded MP, I am a ministerial aspirant - Belur

 SUDDILIVE || SHIVAMOGGA

ನರಿಬುದ್ದಿಯ ಸಂಸದ, ನಾನು ಮಂತ್ರಿಗಿರಿ ಆಕಾಂಕ್ಷಿ ಹೌದು-ಬೇಳೂರು-A fox-minded MP, I am a ministerial aspirant - Belur

MP, beluru


ಸಿಗಂದೂರು ಸೇತುವೆಯ ಕ್ರೆಡಿಟ್ ವಾರ್ ಎರಡನೇ ದಿನಕ್ಕೆ ಮುಂದುವರೆದಿದೆ. ಶಾಸಕರ ಪ್ರೆಸ್ ಮೀಟ್ ನಡೆಯಲಿದೆ ಎಂಬ ಕಾರಣಕ್ಕೆ ಬಿಜೆಪಿ ಕೌಂಟರ್ ಪ್ರೆಸ್ ಮೀಟ್ ಇಟ್ಟುಕೊಂಡಿದೆ. ಇದಕ್ಕೆ ಪ್ರತಿಯಾಗಿ ಶಾಸಕ ಗೋಪಾಲಕೃಷ್ಣ ಬೆಳೂರು ಸೇತುವೆ ಆಹ್ವಾನ ವಿಚಾರದಲ್ಲಿ ಬಿಜೆಪಿ ಸಂಸದ ಮತ್ತು ಮಾಜಿ ಸಚಿವರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. 

ಸುದ್ದಿಗೋಷ್ಠಿ ನಡೆಸಿದ ಅವರು ಸೇತುವೆ ನಿರ್ಮಾಣದ ವೇಳೆ ಐದು ದಿನಗಳ ಅಂತರದಲ್ಲಿ ಕಾರ್ಯಕ್ರಮಕ್ಕೆ ಸಿಎಂನ್ನ ಆಹ್ವಾನಿಸುತ್ತಾರೆ ಎಂದರೆ ನರಿ ಬುದ್ದಿ ಎಂಪಿಗೆ ನಾವು ಬರಬಾರದು ಎಂಬ ಭಾವನೆಯಿದೆ ಎಂದು ದೂರಿದ ಅವರು, ನಮ್ಮ ರಾಜ್ಯ ಹೈಯಸ್ಟ್ ಜಿಎಸ್ ಟಿ ಕಟ್ಟುತ್ತಿದ್ದಾರೆ ಎನ್ನುವ ಬಿಜೆಪಿ ಸೇತುವೆಯ ವಿಚಾರದಲ್ಲಿ ರಾಜಕೀಯವನ್ನ ಮಾಡಿದೆ. ಇದು ಮದುವೆ ಆಹ್ವಾನ ಪತ್ರಿಕೆನಾ ಉದ್ಘಾಟನೆ ಕಾರ್ಯಕ್ರಮವನ್ನ 15 ದಿನ ಮುಂಚೆ ಕರೆಯಬೇಕಿತ್ತು ಎಂದ ಅವರು ಪ್ರೋಟೋಕಾಲ್ ಉಲ್ಲಂಘಿಸಲಾಗಿದೆ ಎಂದು ಸಿಎಂ ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂದರು.

ನಿನ್ನೆ ನಡೆದ ಸೇತುವೆ ಉದ್ಘಾಟನಾ ಕಾರ್ಯಕ್ರಮ ಬಿಜೆಪಿ ಕಾರ್ಯಕ್ರಮವಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಿಗಳಿದ್ದಾರೆ. ಅವರನ್ನ ಕೂಡಲೇ ವರ್ಗಾಯಿಸಬೇಕು.  ಸಿಎಂ ರಾಜಕೀಯಮಾಡಿಲ್ಲ. ಇವರ ಅಪ್ಪನ ಮನೆಯ ತೆರಿಗೆತಂದು ಸೇತುವೆ ನಿರ್ಮಿಸಿಲ್ಲ ಮತ್ತು ಕಾರ್ಯಕ್ರಮ ಆಯೋಜಿಸಿಲ್ಲ. ಜಾಗನೂ ಇವರ ಅಪ್ಪನ ಮನೆಯದ್ದಲ್ಲ. ಜಾಗ ಮಾತ್ರ ಬೇಕು ಸಿಎಂನ್ನ ಕರೆಯಬೇಕು ಎಂಬ ಮನಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಎಂಪಿ ಆಹ್ವಾನಿಸದರೆ ಆಗುತ್ತಾ? ಯಾರು ಕರೆಯಬೇಕು? ನಮಗೆ ನಾಟಕವಾಡಿಸಿದ್ದಾರೆ. ಅಧಿಕಾರಿಗಳಿಗೂ ಗೊತ್ತಿರಲಿಲ್ಲ. 15 ದಿನ ಹಿಂದೆ ಕರೆದಿದ್ದರೆ ಸಿಎಂ ಕಾರ್ಯಕ್ರಮಕ್ಕೆ ಬರಬಹುದಿತ್ತು. ರಾಜ್ಯದ ತೆರಿಗೆ ಇದೆ. ಕೇಂದ್ರ ಸಮತೋಲನ ಕಖೆದುಕೊಂಡಿದೆ ಎಂದರು. 

ಸಂಸದರಿಗೆ ಸೇತುವೆ ಉದ್ಘಾಟನೆಗೆ ನೀವೆ ಕಿರೀಟಹಾಕಿಕೊ ಎಂದಿದ್ದೆ. ನನ್ನ ಪತ್ರದ ಮೇಲೆ 2009 ರಲ್ಲಿ ₹100 ಕೋಟಿ ಹಣ ಬಿಡುಗಡೆಯಾಗಿತ್ತು. ಇದು ಸಾಕಾಗಲ್ಲ ಎಂದು ಕೇಂದ್ರದಿಂದ ತಂದು ಸೇತುವೆ ನಿರ್ಮಾಣ ಮಾಡಲಾಗಿದೆ. ಕಾಗೋಡು ತಿಮ್ಮಪ್ಪನವರು ನುನ್ನೆ ಭಾಗಿಯಾಗಿದ್ದಾರೆ ಅದರ ಬಗ್ಗೆ ನಮ್ಮದು ಯಾವುದಕ್ಕೂ ಆಕ್ಷೇಪವಿಲ್ಲ ಎಂದರು. 

ರಾಜ್ಯ ಮತ್ತು ಕೇಂದ್ರದ ನಡುವಿನ ಸಮನ್ವಯಕ್ಕೆ ತೊಂದರೆಯಾಗಲಿದೆ. ಸಿಎಂನವರು ಪಿಎಂಗೆ ಪತ್ರಬರೆದಿದ್ದಾರೆ. ನೋಡೋಣ ಎಂದ ಶಾಸಕರು ಮೊನ್ನೆ ಸುರ್ಜೇವಾಲ ಅವರು ಬಂದಾಗ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ನಾನು ಖುಷಿಯಾಗಿ ಮಾತನಾಡುವೆ. ಮಂತ್ರಿಗಿರಿಯ ಬಗ್ಗೆ ಆಕಾಂಕ್ಷಿಇದ್ದೇನೆ. ನನಗೂ ಮಂತ್ರಿಗಿರಿ ಕೊಡಿ ಎಂದಿರುವೆ ಎಂದರು. 

ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ನ್ನ 2017 ರಿಂದ ಘೋಷಣೆ ಮಾಡಲಾಗಿದೆ.  8644 ಕೋಟಿ ಹಣವನ್ನ ಬಿಡುಗಡೆ ಮಾಡಿದ್ದು ಯೋಜನೆ ದೇಶದಲ್ಲಿ ದೊಡ್ಡ ಪ್ರಾಜೆಕ್ಟ್ ಆಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.  ತಲೆಕೆಳಗಲೆಯಿಂದ ಗೇರುಸೊಪ್ಪೆಯವರೆಗೆ 2000 ಮೆಗಾವ್ಯಾಟ್ ಉತ್ಪಾದಿಸುವ ಯೋಜನೆ ಇದಾಗಿದೆ. ಡ್ಯಾಂ ಕಟ್ಟಲು ಸಾಧ್ಯವಿಲ್ಲ ಪಂಪ್ ಸ್ಟೋರೇಜ್ ಮೂಲಕ ವಿದ್ಯುತ್ ತಯಾರಿಸಬಹುದಾಗಿದೆ. ಜನಸಂಖ್ಯೆ ಹೆಚ್ಚಾಗಿದೆ. ಸಿಎಂ ಬಿಎಎಸ್ ವೈ ಸಂದರ್ಭದಲ್ಲಿ ಬೇರೆ ರಾಜ್ಯಗಳಿಂದ ಖರೀದಿ ಮಾಡಿದ್ದಾರೆ. 

ಮೆಘಾ ಇಂಜಿನಿಯರ್ ಮಾಡುತ್ತಿದೆ. 34 ಹೆಕ್ಟರ್ ಅರಣ್ಯ ನಾಶವಾಗಲಿದೆ. 13 ಸಾವಿರ ಮರಗಳು ನಾಶವಾಗಲಿದೆ 7 ಮೀಟರ್ ನಲ್ಲಿ ಕಾಂಕ್ರಿಟ್ ಸುರಂಗ ಮಾರ್ಗವಿದೆ. ಮುಳುಗಡೆ ಸಂತ್ರಸ್ತರಾಗುತ್ತಾರೆ ಎಂದು ಬಿಂಬಿಸಲಾಗುತ್ತಿದೆ. 8 ಎಕರೆ ಖಾತೆ ಮಾತ್ರ ತೆರವುಗೊಫಿಸಲಾಗುತ್ತಿದೆ. ಇಲ್ಲಿನ ಜನ ಒಪ್ಪಿಕೊಂಡಿದ್ದಾರೆ ಎಂದರು. 

ರಾಜ್ಯದ ಜನರಿಗೆ ವಿದ್ಯುತ್ ಅಭಾವ ನಿವಾರಿಸಬಹುದು. 8.32 ಎಕರೆಯಲ್ಲಿರುವ 8 ಕುಟುಂಬಸ್ಥರಿಗೆ ಕೆಪಿಸಿ ನಲ್ಲಿ ಕೆಲಸ ಸಿಗುತ್ತದೆ ಮತ್ತು ಪರಿಹಾರವೂ ದೊರೆಯಲಿದೆ ಎಂದರು. ಗ್ಯಾರೆಂಟಿಯಿಂದ ಹಣವಿಲ್ಲವೆಂದು ಬೊಗಳೆ ಬಿಡುವ ಬಿಜೆಪಿಗೆ ಇದು ಉತ್ತರವಾಗಲಿದೆ. ಜೋಗ ಅಭಿವೃದ್ಧಿ ಮತ್ತು ಹಸಿರುಮಕ್ಕಿ ಸೇತುವೆಗೆ ಹಣ ನೀಡಲಾಗಿದೆ ಎಂದರು. 

ವಿರೋಧ ಮಾಡುವವರು ಇದ್ದಾರೆ. ಪ್ರಹ್ಲಾದ್ ಜೋಶಿಯವರೆ ಅನಿಮತಿ ಮಾಡಿಕೊಟ್ಟಿದ್ದಾರೆ. ಆದರೆ ಸಾಗರದ ಮಾಜಿ ಶಾಸಕರು ವಿರೋಧ ವ್ಯಕ್ತಪಡಿಸಿರುವುದು ಹಾಸ್ಯಾಸ್ಪದವಾಗಿದೆ. ಒಂದು ಯೋಜನೆಗೆ ಹಾನಿಯಾಗಲಿದೆ. ರಸ್ತೆ ನಿರ್ಮಾಣವಾಗುವಾಗ ಮರ ಹೋಗಲ್ವಾ ಎಂದು ಶಾಸಕರು ಪ್ರಶ್ನಿಸಿದರು.

ಎರಡು ಲಾಂಚ್ ಗಳನ್ನ ಹೋಟೆಲ್ ಗಳನ್ನಾಗಿ ಮಾಡಿ 10 ಸಣ್ಣ ಪುಟ್ಟ ಬೋಟ್ ಗಳನ್ನ ಬಿಟ್ಟುಕ್ಯಾಂಟೀನ್ ಟೈಪ್ ಮಾಡಬಹುದು. ಮದ್ಯ ನಿಷೇಧಿಸಲಾಗಿದೆ. ಖಾಸಗಿಯವರು ಮುಂದೆ ಬಂದರೆ ಅವರಿಗೂ ಹೋಟೆಲ್ ನಡೆಸಲಾಗುವುದು. ಮಾಂಸಹಾರಿ ಮತ್ತು ಸಸ್ಯಹಾರಿ ಎರಡೂ ವಿಭಾಗದ ಹೋಟೆಲ್ ಮಾಡಲಾಗುವುದು. 

ಕ್ಷೇತ್ರ ಅಭಿವೃದ್ಧಿಗೆ ನಮ್ಮ ವಿರೋದವಿಲ್ಲ. ಶರಾವತಿ ನೀರನ್ನ ಬೆಂಗಳೂರಿಗೆ ಕೊಡುವುದನ್ನ ನಿಷೇದಿಸಲಾಗಿದೆ 21 ಸವಿರ ಕೋಟಿ ಸ್ಥಗಿತಗೊಳಿಸಲಾಗುವುದು ಎಂದರು. 

A fox-minded MP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close