SUDDILIVE || SHIVAMOGGA
ಮನಸ್ಸಿಗೆ ನೋವು ಮಾಡಿಕೊಂಡು ಮಾತನಾಡಿದ ಸಂಸದರು- MPs who spoke with pain in their hearts
ನಿನ್ನೆ ಮಳೆಯಷ್ಟೆ ಸೇತುವೆಯ ಉದ್ಘಾಟನೆಯ ಅಪಪ್ರಚಾರ ನಡೆದಿದೆ ಎಂದು ಶಿವಮೊಗ್ಗದ ಸಂಸದರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೇತುವೆ ಉದ್ಘಾಟನೆಗೆ ಆಗಮಿಸಿದ್ದಕ್ಕೆ ಕೇಂದ್ರ ಸಚಿವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಿನ್ನೆ ಉದ್ಘಾಟನೆ ವೇಳೆ ಮಳೆಯಷ್ಟೇ ಜೋರಾಗಿ ಅಪಪ್ರಚಾರ ನಡೆದಿದೆ. ಹತಾಶದ ಮನೋಭಾವನೆ ಇರಬಹುದು ಹೀಗಾಗಿ ನಮ್ಮ ಜಿಲ್ಲೆಯ ರಾಜಕಾರಣಿಗಳು ಸಣ್ಣತನ ಪ್ರದರ್ಶನ ಮಾಡಿದ್ದಾರೆ ಎಂದು ದೂರಿದರು.
ಸೇತುವೆ ಉದ್ಘಾಟನೆ ಮಾಡಬೇಕೆಂದು ನಿತಿನ್ ಗಡ್ಕರಿ ಅವರ ಬಳಿ ಮಾತನಾಡಿದ್ದೆನೆ. ಮಳೆ ಹೆಚ್ಚಾಗಿ ಹಿನ್ನೀರು ಹೆಚ್ಚಾದರೆ ಲಾಂಚ್ ಸಂಚಾರಕ್ಕೆ ತೊಂದರೆಯಾಗುತ್ತೆ ಎಂದಿದ್ದೆ. ಮಳೆಯಿಂದಾಗಿ ಪ್ರತಿದಿನ 2 ಇಂಚು ನೀರು ಹೆಚ್ಚಾಗುತ್ತೆ ಎಂದು ಅಧಿಕಾರಿಗಳು ಹೇಳುತ್ತಲೇ ಇದ್ದರು. ಇತ್ತೀಚಿಗೆ ನೀರಿನ ನಡುವೆ ಲಾಂಚ್ ಕೆಟ್ಟು ನಿಂತು ಸ್ಥಗಿತವಾಗಿ ಸಮಸ್ಯೆ ಆಗಿತ್ತು ಎಂದರು.
ಹಿನ್ನೀರು ಪ್ರದೇಶದಲ್ಲಿ ನೀರು ಹೆಚ್ಚಾದರೆ ಲಾಂಚ್ ಓಡಾಡುವ ಪರಿಸ್ಥಿತಿ ಇರಲಿಲ್ಲ. ಹೀಗಾಗಿ ಅಧಿವೇಶನಕ್ಕೂ ಮುನ್ನ ಉದ್ಘಾಟನೆ ನೆರವೇರಿಸಬೇಕೆಂದು ಮನವಿ ಮಾಡಿದ್ದೆ. ಸೇತುವೆ ನಿರ್ಮಾಣವಾದರೂ ಉದ್ಘಾಟನೆ ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಾರೆಂದು ಉದ್ಘಾಟನೆ ಸಮಯ ನಿಗಧಿ ಮಾಡಿದ್ದೆವು ಎಂದ ಅವರು ಸೇತುವೆ ವೀಕ್ಷಿಸಲು ಸಚಿವರು ಮತ್ತು ಶಾಸಕರು ಹೋದಾಗ ನಾನು ಸಂತೋಷಪಟ್ಟಿದ್ದೆ. ಈಗಲಾದರೂ ಅಭಿವೃದ್ಧಿ ವಿಚಾರದಲ್ಲಿ ಸ್ಪರ್ಧೆ ಏರ್ಪಾಡು ಆಯ್ತಲ್ಲ ಎಂದು ಸಂತೋಷಪಮಾಡಿದ್ದಾರೆ.
ಆದರೆ ಇವರಿಬ್ಬರು ಹಗುರವಾಗಿ ಮಾತನಾಡುವ ಮೂಲಕ ಅಪ್ಪನ ದುಡ್ಡಿಂದ ಮಾಡಿಲ್ಲ, ಯಾರಪ್ಪನ ಮನೆ ದುಡ್ಡು ? ಟ್ರಂಪ್ ಕರೆಸಿ, ಮೋದಿ ಕರೆಸಿ ಎಂದು ಹಗುರವಾಗಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ನಿನ್ನೆ ಕಾರ್ಯಕ್ರಮಕ್ಕೂ ಮುನ್ನ ಸಚಿವ ಜಾರಕಿಹೊಳಿಗೆ ಕೇಂದ್ರ ಸಚಿವ ಜೋಷಿಯವರು ಫೋನ್ ಮಾಡಿ ನೀವು ಇರುವ ಜಾಗಕ್ಕೆ ಬರುತ್ತೇವೆ ಎಂದರೂ ಇವರ ಕೈಗೆ ಸಿಕ್ಕಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಐಪಿಎಸ್, ಐಎಎಸ್ ಅಧಿಕಾರಿಗಳು, ಪಿಡಬ್ಲೂಡಿ ಅಧಿಕಾರಿಗಳು ವಾಪಾಸ್ ಹೋಗ್ತಿವಿ ಅಂದ್ರು. ಉದ್ಘಾಟನಾ ಸಮಾರಂಭಕ್ಕೆ ತರಲಾಗಿದ್ದ ಮುಮೆಂಟೋಗಳನ್ನು ಅಧಿಕಾರಿಗಳು ವಾಪಾಸ್ ತೆಗೆದುಕೊಂಡು ಹೋಗಿದ್ದಾರೆ. ಸರ್ ನಮಗೆ ವಾಪಾಸ್ ತೆರಳಲು ಸೂಚನೆ ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕೇಂದ್ರ ಸಚಿವರು ವಿಮಾನದ ಬಗ್ಗೆ ಹೆಲಿಕ್ಯಾಪ್ಟರ್ ಹಾರುವ ಬಗ್ಗೆ ತಲೆಕೆಡಿಸಿಕೊಂಡಿದ್ದರೆ. ನನಗೆ ಶಾಲು ಇಲ್ಲ, ಹಾರ ಇಲ್ಲ, ಮುಮೆಂಟೋ ಇಲ್ಲ ಎಂದು ಫೋನ್ ಬರುತ್ತೆ. ಆಗ ನಮ್ಮ ಮುಖಂಡರ ಮನೆಯಲ್ಲಿದ್ದ ಮುಮೆಂಟೋ, ಶಾಲು, ಹಾರ ತರಿಸಿಕೊಂಡು ಕಾರ್ಯಕ್ರಮ ಮಾಡುತ್ತೇವೆ ಎಂದಿದ್ದೆ.
ಕಳೆದೆರೆಡು ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಇವರು ತಲೆ ಕೆಡಿಸಿಕೊಂಡಿಲ್ಲ. ಮುಂದಾದರೂ ಇಂತಹ ಕೆಲಸ ಮಾಡದೇ ಅಭಿವೃದ್ಧಿ ಕೆಲಸ ಮಾಡಲಿ, ನಮ್ಮ ಸಚಿವರು ಬರುವ ಸಂದರ್ಭದಲ್ಲಿ ಅವರಿಗೆ ಸ್ವಾಗತ ಕೋರುವುದು, ಯೋಜನೆ ಬಗ್ಗೆ ಜನರಿಗೆ ತಿಳಿಸುವುದು ನಮ್ಮ ಡ್ಯೂಟಿ. ನನ್ನ ಕರ್ತವ್ಯ ನಾನು ಮಾಡಿದ್ದೆನೆ.
ನಾನು ಒಬ್ಬ ಚುನಾಯಿತ ಪ್ರತಿನಿಧಿ ನಾನು ಸಚಿವರ ಸಮಯ ತೆಗೆದುಕೊಳ್ಳಬೇಕಿತ್ತು ತೆಗೆದುಕೊಂಡಿದ್ದೆನೆ. ಬಾಕಿ ಉಳಿದದ್ದು ರಾಜ್ಯ ಸರ್ಕಾರದ ಜವಬ್ದಾರಿ ಹೀಗಾಗಿ ಅವರು ಮುಂದಿನ ಕೆಲಸ ಮಾಡಬೇಕಿತ್ತು. ಲಾಂಚ್ ಕಾರ್ಮಿಕರು ಹಾಗೂ ಜೀಪ್ ಚಾಲಕರ ಬಗ್ಗೆ ಯೋಜಿಸಬೇಕಿದೆ. ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದರು.
MPs who spoke with pain in their hearts