SUDDILIVE | SHIRALKOPPA
ಸಾರ್ವಜನಿಕ ಸ್ಥಳದಲ್ಲಿ ಯುವಕ ಯುವತಿಯರ ಮೈರೆತು ಅಪ್ಪಿಕೊಳ್ಳುವ ದೃಶ್ಯ ವೈರಲ್-A video of a young man and a woman hugging in a public place goes viral.
ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಹೋಬಳಿಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಪಕ್ಕದಲ್ಲಿರುವ ಪಾರ್ಕ್ ನಲ್ಲಿ ಯುವಕ ಯುವತಿಯರು ಮೈಮರೆತು ಕುಳಿತುಕೊಳ್ಳುವ ದೃಶ್ಯವೊಂದು ವೈರಲ್ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ಈರೀತಿ ಮೈರೆತು ಅಪ್ಪಿಕೊಳ್ಳುವ ದೃಶ್ಯ ಚರ್ಚೆಗೆ ಗ್ರಾಸವಾಗಿದೆ.
ಈ ದೃಶ್ಯವನ್ನು ನೋಡಿದರೆ ಅಪ್ಪಿಕೋ ಚಳುವಳಿಯೋ ಅಥವಾ ಪ್ರೇಮದ ಅಮಲಿನಲ್ಲಿ ತೇಲುತ್ತಿರುವ ಯುವಕ ಯುವತಿಯರೋ ಎಂಬುದು ಅರಿವಿಗೆ ಬರುತ್ತಿಲ್ಲ. ಪ್ರಾಯದ ಹೊಸ್ತಿಲಿನಲ್ಲಿರುವ ಜೋಡಿಗಳು ಬಿಗಿದಪ್ಪಿಕೊಳ್ಳುತ್ತಿರುವ ಹಸಿಬಿಸಿ ದೃಶ್ಯಗಳು ವಾಟ್ಸಪ್ ನಲ್ಲಿ ವೈರಲ್ ಆಗುತ್ತಾ ಇದೆ.
ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಈ ವಿಡಿಯೋ ಕಳೆದ 15 ದಿನಗಳಿಂದ ಅಲೆದಾಡುತ್ತಿದ್ದು ಈ ಕುರಿತಂತೆ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಈ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದ್ದು ಇದು ಪುರಸಭೆ ವ್ಯಾಪ್ತಿಗೆ ಸೇರಿದ ಪಾರ್ಕ್ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಪಾರ್ಕಿನಲ್ಲಿ ಕಾಂಪೌಂಡ್ ಒಂದು ಉರುಳಿ ಬಿದ್ದಿದ್ದು ಕಾಂಪೌಂಡ್ ನಿರ್ಮಾಣ ವಿಚಾರದಲ್ಲಿ ಪುರಸಭೆ ನಿರ್ಲಕ್ಷ ಹೊಂದಿರುವುದರಿಂದ ಇಲ್ಲಿಗೆ ಕಾಲೇಜು ಯುವಕ ಯುವತಿಯರ ಲಗ್ಗೆ ಇಡುವುದು ಸಾಮಾನ್ಯವಾಗಿದೆ. ಎಂಬುದು ಸ್ಥಳೀಯರ ಆರೋಪವಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಸಹ ಬೀಟ್ ಅನ್ನು ಹೆಚ್ಚಿಸಿದೆ. ಪ್ರತಿಯೊಂದು ಗಂಟೆಗೆ ಒಮ್ಮೆ ಪೊಲೀಸರ ಬೈಟನ್ನು ಹಾಕಿಸಲಾಗಿದೆ ತಿರುಗುತ್ತಿರುವುದಾಗಿ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ. ಇದರ ಜೊತೆಗೆ ಪುರಸಭೆ ಕಾವಲುಗಾರನ್ನು ನೇಮಿಸುವಂತೆ ಪಟ್ಟಣ ಪಂಚಾಯತಿಗೆ ಸೂಚಿಸಲಾಗಿದೆ
A video of a young man and a woman hugging in a public place goes viral.