SUDDILIVE || SHIVAMOGGA
ಸೈಜುಗಲ್ಲು ಎತ್ತುಹಾಕಿ ಮರ್ಡರ್-Murder by throwing a stone
ತಲೆಯ ಮೇಲೆ ಕಲ್ಲು ಎತ್ತು ಹಾಕಿ ವ್ಯಕ್ತಿಯ ಕೊಲೆ ಮಾಡಲಾಗಿದೆ. ಅಣ್ಣ ಮತ್ತು ತಮ್ಮ ಒಟ್ಟಿಗೆ ಮಲಗಿದ್ದು ಬೆಳಗ್ಗೆ ನೋಡುವಷ್ಟರಲ್ಲಿ ಅಣ್ಣ ಕೊಲೆಯಾದರೆ ತಮ್ಮ ಎಸ್ಕೇಪ್ ಆಗಿದ್ದಾನೆ.
ಹಾಗಂತ ಕೊಲೆ ಯಾರು ಮಾಡಿದ್ದು ಅಂತ ಇನ್ನೂ ಗೊತ್ತಾಗಿಲ್ಲ. ಕೊಕೆಯಾದ ವ್ಯಕ್ತಿಯನ್ನ ಮಣಿಕಂಠ ಎಂದು ಗುರುತಿಸಲಾಗಿದೆ. ಆತನಿಗೆ 38 ವರ್ಷ ಎಂದು ತಿಳಿದು ಬಂದಿದೆ. ಈತ ಗಾರೆ ಕೆಲಸ ಮಾಡಿಕೊಂಡಿದ್ದ. ಸೈಜ್ ಕಲ್ಲು ಎತ್ತುಹಾಕಿ ಕೊಲೆ ಮಾಡಲಾಗಿದೆ.
ಸ್ಥಳಕ್ಕೆ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಡಿವೈಎಸ್ಪಿ ಬಾಬು ಅಂಜನಪ್ಪ ಪಿಐ ಗುರುರಾಜ್ ಕೆಟಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಮ್ಮನ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಊಟ ತಿಂಡಿಯಲ್ಲ ಪಕ್ಕದಲ್ಲಿದ್ದ ಸಹೋದರಿ ಮನೆಯಿಂದ ಮಣಿಕಂಠನಿಗೆ ಸರಬರಾಜು ಆಗುತ್ತಿತ್ತು. ಬೆಳಿಗ್ಗೆ ಸಹೋದರಿಯ ಮನೆಯ ಕಡೆಯವನು ಟೀಕುಡಿಯಲು ಮಣಿಕಂಠನಿಗೆ ಟೀ ತೆಗೆದುಕೊಂಡು ಹೋದಾಗ ರಕ್ತ ಮಡುವಿನಲ್ಲಿ ಬಿದ್ದಿದ್ದಾನೆ. ಈ ಘಟನೆ ಮೇಲಿನ ತುಂಗನಗರದಲ್ಲಿ ನಡೆದಿದೆ.
Murder by throwing a stone