SUDDILIVE || ANAVATTI
ಅಪಘಾತದಲ್ಲಿ ಎಎಸ್ಐ ನಿಧನ, ಎಸ್ಪಿ ಸಂತಾಪ-ASI dies in accident, SP condoles
ರಸ್ತೆ ಅಪಘಾತದಲ್ಲಿ ಜೀವನ್ಮರಣದ ಜೊತೆ ಹೋರಾಡುತ್ತಿದ್ದ ಆನವಟ್ಟಿ ಎಎಸ್ಐ ಬಸವರಾಜಪ್ಪ(50) ನಿನ್ನೆ ಕೊನೆ ಉಸಿರು ಎಳೆದಿದ್ದಾರೆ. ಕೋಮಾದಲ್ಲಿದ್ದ ಬಸವರಾಜಪ್ಪರನ್ನ ಆನವಟ್ಟಿಗೆ ಕರೆದುಕೊಂಡು ಬರಲಾಗಿತ್ತು ಮನೆಯಲ್ಲಿಯೇ ಅವರು ಕೊನೆ ಉಸಿರು ಎಳೆದಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿಕೆ ಎಎಸ್ಐ ನಿದನಕ್ಕೆ ಸಂತಾಪ ಸೂಚಿಸಿದ್ದಾರೆ. ಒಬ್ಬ ನಿಷ್ಠಾವಂತ ಎಎಸ್ಐರನ್ನ ಕಳೆದುಕೊಳ್ಳುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಏ.30, 2025 ರಂದು ರಾತ್ರಿ 10-30 ರ ಸಮಯದಲ್ಲಿ ಬಸವರಾಜಪ್ಪ ಪ್ರಕರಣದ ಪತ್ತೆಗಾಗಿ ಶಿರಾಳಕೊಪ್ಪಕ್ಕೆ ತೆರಳುತ್ತಿದ್ದರು. ಶಿರಾಳಕೊಪ್ಪ ಟೌನ್ ನಲ್ಲಿಯೇ ಬಸವರಾಜಪ್ಪನವರಿಗೆ ಅಪಘಾತ ಸಂಭವಿಸಿತ್ತು. ಪ್ರಕರಣ ಹಿಟ್ ಅಂಡ್ ರನ್ ಎಂದು ಹೇಳಲಾಗುತ್ತಿದೆ. ಮೊದಲಿಗೆ ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆ, ಮಂಗಳೂರಿನ ವೆನ್ ಲಾಕ್, ಮಣಿಪಾಲ್ ನಂತರ ಮೆಗ್ಗಾನ್ ಗೆ ಕರೆತಂದು ಕೊನೆಯಲ್ಲಿ ಶಿರಾಳಕೊಪ್ಪಕ್ಕೆ ತಂದು ಚಿಕಿತ್ಸೆ ನೀಡಲಾಗುತ್ತಿತ್ತು.
ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬಸವರಾಜಪ್ಪ ಕೊನೆ ಉಸಿರು ಎಳೆದಿದ್ದಾರೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕರ್ತವ್ಯದಲ್ಲಿರುವಾಗಲೇ ಬಸವರಾಜಪ್ಪ ಅಕಾಲಿಕ ಮರಣಕ್ಕೊಳಗಾಗಿದ್ದಾರೆ. ಶ್ರೀಯುತರು ಓರ್ವ ಪತ್ನಿ ಮತ್ತು ಮೂವರು ಮಕ್ಕಳನ್ನ ಅಗಲಿದ್ದಾರೆ.
ASI dies in accident, SP condoles