ad

ಹಿಂದೂ ದೇವರ ವಿಗ್ರಹಗಳಿಗೆ ಅವಮಾನಿಸಿದವರ ಬಂಧನ-Arrest of those who insulted Hindu gods

SUDDILIVE || SHIVAMOGGA

ಹಿಂದೂ ದೇವರ ವಿಗ್ರಹಗಳಿಗೆ ಅವಮಾನಿಸಿದವರ ಬಂಧನ-Arrest of those who insulted Hindu gods

Hindu, gods

ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹಗಳನ್ನು ಕಾಲಿನಿಂದ ಒದ್ದು, ಚರಂಡಿಗೆ ಎಸೆದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಿಂದೂ ದೇವರ ವಿಗ್ರಹಗಳಿಗೆ ಅವಮಾನಿಸಿದ ಘಟನೆ ಶಿವಮೊಗ್ಗವನ್ನು ಏಕಾಏಕಿ ಪ್ರಕ್ಷುಬ್ದಗೊಳಿಸಿದೆ. ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯ ಗಣಪತಿ ವಿಗ್ರಹಕ್ಕೆ ಕಾಲಿನಿಂದ ಒದ್ದು, ವಿಗ್ರಹವನ್ನು ಚರಂಡಿಗೆ ಎಸೆದೆ ಧಾರ್ಮಿಕ ಭಾವನೆಗೆ ತೀವ್ರ ಘಾಸಿಗೊಳಿಸಿದ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಶೇಷಾದ್ರಿಪುರನ ಸೈಯದ್ ಅಹಮದ್( 32) ಹಾಗೂ ಬಾಪೂಜಿನಗರದ ರಹಮತ್ (50) ಎಂಬಿಬ್ಬರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಲೆಗೆ ಬಿದ್ದ ಆರೋಪಿಗಳು

ಹಿಂದೂ ದೇವರ ವಿಗ್ರಹಗಳಿಗೆ ಅಪಮಾನ ಮಾಡಿ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ತಂದ ಕಾರಣದಿಂದ ಮತೀಯ ಸೆಕ್ಷನ್ ಅಡಿಯಲ್ಲಿ ಹಾಗೂ ಎಸ್‌ಸಿ ಜನಾಂಗದ ಮಹಿಳಗೆ ದೌರ್ಜನ್ಯ ಎಸಗಿದ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ವಾತಾವರಣ ಬಿಗುಗೊಳ್ಳುತ್ತಿದ್ದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯರಿಂದ ವಿರೋಧ

ಹಿಂದೂ ದೇವರ ವಿಗ್ರಹಗಳಿಗೆ ಕಾಲಿನಿಂದ ಒದ್ದು, ವಿಗ್ರಹಗಳನ್ನು ಚರಂಡಿಗೆ ಎಸೆದ ಪ್ರಕರಣ ಸಂಬಂಧ ಸ್ಥಳೀಯರು ಸೇರಿದಂತೆ ಶಾಸಕ ಚನ್ನಬಸಪ್ಪ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸೇರಿದಂತೆ ಹಲವರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಧಾರ್ಮಿಕ ಭಾವನೆ ಕೆರಳಿಸಿದ ಹಿನ್ನಲೆಯಲ್ಲಿ ಹಿಂದೂ ಸಮುದಾಯ ತೀವ್ರ ಆಕ್ರೋಶಗೊಂಡಿತ್ತು.

ಆರೋಪಿಗಳ ಗಡಿಪಾರಿಗೆ ಆಗ್ರಹ

ಆರೋಪಿಗಳು ಅಕ್ರಮವಾಗಿ ಇದೇ ಪ್ರದೇಶದಲ್ಲಿ ಮನೆ ಕಟ್ಟುತ್ತಿದ್ದಾನೆ. ಆತನ ವಿರುದ್ದ ಯಾವುದೇ ಕ್ರಮ ಇಲ್ಲ. ಆತನ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದೀಗ ಹಿಂದೂಗಳು ಪೂಜೆ ಮಾಡುವ, ಪವಿತ್ರವಾಗಿ ಕಾಣುವ ಹಿಂದೂ ವಿಗ್ರಹಗಳನ್ನು ಕಾಲಿನಿಂದ ಒದ್ದು ಚರಂಡಿಗೆ ಎಸೆಯಲಾಗಿದೆ. ಘಟನೆಗೆ ಕಾರಣಾದ ಮೂವರನ್ನ ಬಂಧಿಸಬೇಕು ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.

ಆರೋಪಿಗಳ ಗಡಿಪಾರಿಗೂ ಈಶ್ವರಪ್ಪ ಆಗ್ರಹಿಸಿದ್ದರು‌ ನಮ್ಮ ದೇವತೆಗಳಿಗೆ ಅವರು ಒದೆಯುತ್ತಾರೆ ಎಂದರೆ ಯಾರಾದರೂ ಸುಮ್ಮನಿರಲು ಸಾಧ್ಯವಾ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿತ್ತು.

ಮೂವರ ಕೃತ್ಯ ವಿಡಿಯೋದಲ್ಲಿ ಸೆರೆ

ಮೂವರು ಮುಸ್ಲಿಮ್ ಯುವಕರು ಈ ಕೃತ್ಯ ಎಸಗಿರುವ ಕುರಿತು ಸ್ಥಳೀಯ ಮಹಿಳೆಯರು ಸೆರೆ ಹಿಡಿದ ವಿಡಿಯೋದಲ್ಲಿ ದಾಖಲಾಗಿದೆ. ಈ ಪೈಕಿ ಇಬ್ಬರ ಗುರುತು ಪತ್ತೆಯಾಗಿತ್ತು. ಇವರಿಬ್ಬರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಮಹಿಳೆಯರು ಈ ಯುವಕರು ಹಿಂದೂ ವಿಗ್ರಹಗಳಿಗೆ ಅಪಮಾನ ಮಾಡುತ್ತಿರುವ ವಿಡಿಯೋ ಸೆರೆ ಹಿಡಿದಿದ್ದರು. ಇಷ್ಟೇ ಅಲ್ಲ ಯುವಕರು ಬೈಕ್‌ನಲ್ಲಿ ತೆರಳುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ.

ಪಾದಯಾತ್ರೆಯ ಎಚ್ಚರಿಕೆ

ಎಂಎಲ್ ಸಿ ಡಾ.ಧನಂಜಯ ಸರ್ಜಿ ಸ್ಥಳಕ್ಕೆ ಭೇಟಿಯಾಗಿ ವಿಗ್ರಹಗಳ ಹಾನಿಗೊಳಿಸಿದವರನ್ನ ಶೀಘ್ರದಲ್ಲಿ ಬಂಧಿಸದಿದ್ದರೆ ಬಿಜೆಪಿ ಪಾದಯಾತ್ರೆ ಮಾಡಲಿದೆ. ಅನಧಿಕೃತ ಕಟ್ಟಡದ ತೆರವು ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಪೊಲೀಸರ ಬಿಗಿ ಬಂದೋಬಸ್ತ್ ಸಹ ಆಗ್ರಹಿಸಿದ್ದರು. 

Arrest of those who insulted Hindu gods

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close