SUDDILIVE || SHIVAMOGGA
ಸಿಎಂ ಪತ್ರ ವೈರಲ್, ಗಪ್ ಚುಪ್ ಆದ ಬಿಜೆಪಿ-CM's letter goes viral, BJP falls silent
ಸಿಗಂದೂರು ಸೇತುವೆಯ ರಾಜಕೀಯ ಕೆಸರೆರಚಾಟ ಮುಂದುವರೆದಿದೆ. ಉದ್ಘಾಟನೆಗೆ ಕೆಲ ಗಂಟೆಗಳ ಅಂತರವಷ್ಟೆ ಉಳಿದುಕೊಂಡಿದ್ದು ಸಿಎಂ ಸಿದ್ದರಾಮಯ್ಯ ತನಗೆ ಉದ್ಘಟನೆಯ ಆಹ್ವಾನ ತಡವಾಗಿ ತಲುಪಿರುವುದಾಗಿ ನಿತಿನ್ ಗಡ್ಕರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದರೂ ಬಿಜೆಪಿ ಸಿಎಂಪತ್ರಕ್ಕೆ ಗಪ್ ಚುಪ್ ಆಗಿದೆ.
ಈಗಾಗಲೇ ಸೇತುವೆಗೆ ರಾಜ್ಯ ಸರ್ಕಾರ ಜಾಗಬಿಟ್ಟುಕೊಟ್ಟಿದೆ. ರಾಜ್ಯ ಸರ್ಕಾರ ಬಿಟ್ಟುಕೊಟ್ಟ ಕ್ಲೈಮ್ ನ್ನ ಕಾಂಗ್ರೆಸ್ ಮಾಡಿಕೊಂಡಿದೆ. ಆದರೆ 20 ಸಾವಿರ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಂತೆ ಕಂಡು ಬರುತ್ತಿದೆ. ಹಾಗಂತ ಸಿಗಂದೂರು ಸೇತುವೆ ನಿರ್ಮಾಣದಿಂದ ಕರೂರು, ಬಾರಂಗಿ ಹೋಬಳಿಗಳು ಬರುವುದರಿಂದ ಈ ಭಾಗದಲ್ಲಿ ಕನಿಷ್ಟ 20 ಸಾವಿರ ಮತಗಳು ಕ್ರೂಢಿಕರಣಗೊಳ್ಳಲಿದೆ.
ಈಗ ಚುನಾವಣೆಯಾವುದೂ ಹತ್ತಿರ ಇಲ್ಲವಾದರೂ ರಾಜಕೀಯ ಪಕ್ಷಗಳು ಮುಂದಿನ ಚುನಾವಣೆಯ ಮೇಲೆ ಕಣ್ಣಿಟ್ಟಿರುತ್ತದೆ ಆ ಲೆಕ್ಕಾಚಾರದ ಮೇಲೆಯೇ ರಾಜಕೀಯ ನಡೆಯುತ್ತಿರುವೆ ಎಂಬುದು ಅಷ್ಟೇ ಸತ್ಯ! ನಿಜ ಹೇಳಬೇಕೆಂದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಈ ಆಹ್ವಾನ ಪತ್ರಿಕೆಗಳನ್ನ ಹಂಚಬೇಕಿದೆ. ಆದರೆ ಇಲ್ಲಿ ನೇರವಾಗಿ ಸಂಸದರೇ ಫೀಲ್ಡ್ ಗೆ ಇಳಿದಿರುವುದರಿಂದ ಕ್ರೆಡಿಟ್ ನ್ನ ಅವರೇ ಹೆಚ್ಚು ಪಡೆದುಕೊಳ್ಳುತ್ತಿದ್ದಾರೆ ಎಂಬ ರಾಜಕಾರಣಕ್ಕೆ ಕಾಂಗ್ರೆಸ್ ಬಿದ್ದಂತೆ ಕಾಣುತ್ತಿದೆ.
ಸಿಎಂನ್ನ ತಡವಾಗಿ ಆಹ್ವಾನಿಸಿರುವ ಬಗ್ಗೆ ಪಿಡಬ್ಲಡಿ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಸಿಎಂಗೆ ತಡವಾಗಿ ಆಹ್ವಾನಿಸಿರುವುದರಿಂದ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಈ ಹಿಂದೆ ನಿಗದಿಗೊಂಡ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದಾಗಿ ಹೇಳಿದ್ದಾರೆ. ಸಿಗಂದೂರು ಸೇತುವೆ ಕೇವಲ ಒಂದು ಪಕ್ಷದ ಪ್ರಯತ್ನವಲ್ಲ ಬದಲಿಗೆ ಮೂರು ಪಕ್ಷಗಳ ಆಡಳಿತದಲ್ಲಿ ಅದಕ್ಕೆ ವೇಗ ತುಂಬಲಾಗಿದೆ ಎಂದಿದ್ದಾರೆ.
ಆಸ್ಕರ್ ಫರ್ನಾಂಡಿಸ್ ಕೇಂದ್ರ ಸಚಿವರಾಗಿದ್ದಾಗ ಸೇತುವೆಯ ನಿರ್ಮಾಣಕ್ಕೆ ಚಾಲನೆ ಪಡೆದುಕೊಂಡಿದೆ ಎಂದು ಹೇಳುವ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಕುಸಿದುಬಿದ್ದಿರುವ ಕಾಂಗ್ರೆಸ್ ಗೆ ಆಕ್ಸಿಜನ್ ನೀಡುವ ಪ್ರಯತ್ನ ಮಾಡಿದ್ದಾರೆ. ಇವೆಲ್ಲಾ ಒಂದು ಕಡೆ ಆದರೆ ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸಚಿವ ಗಡ್ಕರಿಗೆ ಪತ್ರ ಬರೆದಿರುವುದು ವಾಟ್ಸಪ್ ಗಳಲ್ಲಿ ಕಳೆದ ಎರಡು ದಿನಗಳಿಂದ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ತಿಯಿಸಲು ಸಾಧ್ಯವಾಗದ ಜಿಲ್ಲಾ ಬಿಜೆಪಿ ಗಪ್ ಚುಪ್ ಆಗಿದೆ.
ಒಟ್ಟಿನಲ್ಲಿ ಒಬ್ವರು ಸೇತುವೆ ನಿರ್ಮಿಸಿ ಅದರ ಲಾಭ ಏನು ಪಡೆಯಬೇಕೋ ಪಡೆದುಕೊಂಡಿದ್ದಾರೆ. ಮತ್ತೊಬ್ಬರು ಅದರ ಲಾಭ ಪಡೆದುಕೊಂಡಿರುವುದಕ್ಕೆ ಬ್ರೇಕ್ ಹಾಕಲು ವಿಫಲರಾಗಿದ್ದಾರೆ. ಉದ್ಘಾಟನೆಯ ನಂತರ ಸಚಿವ ಮಧು ಬಂಗಾರಪ್ಪ ಉತ್ತರಿಸುವುದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಏನು ಮಾಡಬೇಕೋ ಅದನ್ನ ಮಾಡುವುದನ್ನ ಬಿಟ್ಟು ಕೇವಲ ಮಾಧ್ಯಮಗಳಲ್ಲಿ ಅಬ್ಬರಿಸುತ್ತಿದೆ ಎಂಬುದು ಜನರ ಭಾವನೆಯಾಗಿದೆ.
ಇವೆಲ್ಲಾ ರಾಜಕಾರಣದ ನಡುವೆ ಸಿಗಂದೂರು ಸೇತುವೆಗೆ ಹಸಿರು ತೋರಣವನ್ನ ಕಟ್ಟಿ ವಧುವಣಗಿತ್ತಿಯ ಶೃಂಗಾರ ಮಾಡಲಾಗಿದೆ. ದೀಪದ ಅಲಂಕಾರದಿಂದ ಸೇತುವೆ ಕಂಗೊಳಿಸುತ್ತಿಧ. ನಾಳೆ ಉದ್ಘಾಟನೆಗೆ ಸೇತುವೆ ಸಜ್ಜುಗೊಂಡಿದೆ. ಲಾಂಜ್, ಲಾಂಜ್ ಗಾಗಿ ಟಿಕೇಟ್ ಪಡೆದು ಗಂಟೆಗಟ್ಟಲೆ ಕಾಯಿಸುತ್ತಿದ್ದವರು, ಹೋಟೆಲ್ ಗಳು, ಅಂಗಡಿಗಳನ್ನ ನಡೆಸುವವರ ಬದುಕ್ಕನ್ನ ಈ ಸೇತುವೆ ಕಸಿದುಕೊಂಡಿದೆ.
CM's letter goes viral, BJP falls silent