SUDDILIVE || SHIVAMOGGA
ಮೈದುಂಬಿದ ತುಂಗೆಗೆ ಬಾಗಿನ ಅರ್ಪಣೆ-An offering Bagina to Thunge
ಶಿವಮೊಗ್ಗ ಮತ್ತು ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ರೈತರ ಜೀವನಾಡಿ ತನ್ನ ಜೀವಕಳೆ ಮರಳಿ ಪಡೆದುಕೊಂಡು ಮೈದುಂಬಿ ಹರಿಯುತ್ತಿರುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಾಜನೂರು ತುಂಗಾ ಜಲಾಶಯಕ್ಕೆ ಇಂದು ಭೇಟಿ ಕೊಟ್ಟು ಹಿರಿಯ ಶಾಸಕರಾದ ಶ್ರೀ ಅರಗ ಜ್ಞಾನೇಂದ್ರ ಅವರೊಂದಿಗೆ ಜೊತೆಗೂಡಿ ಬಾಗಿನ ಸಮರ್ಪಿಸಲಾಯಿತು.
ಈ ವರ್ಷವೂ ಮಳೆರಾಯನ ಕೃಪೆಯಿಂದ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ವರ್ಷಧಾರೆ ಧುಮ್ಮಿಕ್ಕಿದ ಪರಿಣಾಮ ಜಲಾಶಯ ತನ್ನ ನೈಜ ಸೊಬಗನ್ನು ಮರಳಿ ಪಡೆದುಕೊಂಡು ಉಳುವ ಯೋಗಿಯ ಮೊಗದಲ್ಲಿ ಭಯದ ಕಾರ್ಮೋಡ ದೂರವಾಗಿ ಭರವಸೆಯ ಮಂದಹಾಸ ಮೂಡಿಸಿದ್ದು, ಈ ಸಾಲಿನಲ್ಲಿ ಭತ್ತ, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳು ಉತ್ತಮ ಇಳುವರಿ ದೊರೆಯುವ ನಿರೀಕ್ಷೆ ಮೂಡಿದೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರು, ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ ಅವರು, ಶಾಸಕರುಗಳಾದ ಶ್ರೀ ಚನ್ನಬಸಪ್ಪ ಅವರು, ಶ್ರೀ ಅರುಣ್ ಅವರು, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಶ್ರೀ ದತ್ತಾತ್ರಿ ಅವರು ಸೇರಿದಂತೆ ಅನೇಕ ಮುಖಂಡರು, ಹಿರಿಯರು, ಕಾರ್ಯಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.
An offering Bagina to Thunge