ad

ಶಾಸಕರಿಗೆ ಕೊಡಲು ಹಣವಿಲ್ಲ ಎಂಎಡಿಬೆಗೆ ಹಣ ಹೇಗೆ ಕರ್ಚಾಗುತ್ತಿದೆ? ಡಿ.ಎಸ್ ಅರುಣ್- There is no money to give to MLAs

 SUDDILIVE || SHIVAMOGGA

ಶಾಸಕರಿಗೆ ಕೊಡಲು ಹಣವಿಲ್ಲ ಎಂಎಡಿಬಿ ಕಚೇರ ನವೀಜರಣಕ್ಕೆ ಹಣ ಹೇಗೆ ಕರ್ಚಾಗುತ್ತಿದೆ? ಡಿ.ಎಸ್ ಅರುಣ್ ಆಕ್ಷೇಪ-There is no money to give to MLAs. How is the money being spent for the renovation of the MADB office? DS Arun objects

Mlc, Arun


ಎಂಎಡಿಬಿ ನವೀಕರಣವನ್ನ‌ ಮಾಡಲು ಹಣ ಬಿಡುಗಡೆಯಾಗಿದೆ. ಶಾಸಕರ ಅನುದಾನಕ್ಕೆ ಹಣವಿಲ್ಲ ಎನ್ನುವ ಸರ್ಕಾರ ನವೀಕರಣಕ್ಕೆ ಮುಂದಾಗಿರುವುದಕ್ಕೆ ಎಂಎಲ್ ಸಿ ಡಿಎಸ್ ಅರುಣ್ ಆಕ್ಷೇಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರ ಅನುದಾನದಲ್ಲಿ 2023-24 ಹಣ ಬಂದಿದೆ. 2024-25 ಮತ್ತು2025-26 ಅನುದಾನ ಹಣ ಬಂದಿಲ್ಲ. 46 ಲಕ್ಷ ಹಣ ನಮ್ಮ ಶಾಸಕರಿಗೆ ಹಣ ಬರಬೇಕು. 1.80  ಕೋಟಿ ವೆಚ್ಚದಲ್ಲಿ ಎಂಎಡಿಬಿ ಕಚೇರಿ ನವೀಕರಣಕ್ಕೆ ಸರ್ಕಾರ ಮುಂದಾಗಿದೆ. ಆದರೆ ಈ ಹಣವನ್ನ ಯಾವುದೇ ಸಭೆಯ ಅನುಮತಿ ಪಡೆಯದೆ ಸ್ಯಾಂಕ್ಷನ್ ನೀಡಿರುವುದಾಗಿ ಹೇಳಿದರು.

ಎಂಎಡಿಬಿ ಅಧ್ಯಕ್ ಆರ್ ಎಂ ಮಂಜುನಾಥ ಗೌಡ ಜೈಲಿಗೆ ಹೋದಾಗ ಸರ್ವಸದಸ್ಯರ ಸಭೆ ಮಾಡಲು ಅವಕಾಶವಿಲ್ಲ. ಕಾರ್ಯದರ್ಶಿ ಸೇರಿದಂತೆ 15 ಜನ ಈ ಸಭೆ ನಡೆಸಿ ಅನುಮೋದನೆ ಮಾಡಲಾಗಿದೆ. 144 ಜನ ಸದಸ್ಯರಲ್ಲಿ 14 ಜನ ಶಾಸಕರಿದ್ದರು. ಇವರಿಗೆ ಅಧಿಕಾರವಿಲ್ಲದಿದ್ದರೂ ಸಭೆ ನಡೆಸಿದ್ದು ಹೇಗೆ ಎಂದು ಪ್ರಶ್ನಿಸಿದ ಅರುಣ್ ಅಧ್ಯಕ್ಷರು ಜೈಲಿಗೆ ಹೋದರೂ ರಾಜೀನಾಮೆ ಪಡೆಯಬೇಕೆಂದು ಸರ್ಕಾರಕ್ಕೆ ಅನಿಸದೆ ಇರುವ ಬಗ್ಗೆ ಆಕ್ಷೇಪಣೆವಿದೆ ಎಂದರು. 

There is no money to give to MLAs

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close