ad

ಅಡಿಕೆ ಟ್ಯಾಕ್ಸ್ ಕೊಟ್ಟರೆ ಅಭಿವೃದ್ಧಿ ಆಗುತ್ತೆ

 SUDDILIVE || SHIVAMOGGA

ಅಡಿಕೆ ಟ್ಯಾಕ್ಸ್ ಕೊಟ್ಟರೆ ಅಭಿವೃದ್ಧಿ ಆಗುತ್ತೆ-ಮಧು ಬಂಗಾರಪ್ಪ-Areca nut tax will bring development

Arecanut, Madhubangarappa


ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 75 ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು ಕೊಡುವುದಾಗಿದೆ. 6 ಸಾವಿರ ಕೋಟಿಯಲ್ಲಿ ಕೊಡಲಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಅಭಿವೃದ್ಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಶರಾವತಿ ನದಿಯಿಂದ ಕುಡಿಯುವ ನೀರು ಕೊಡಿಸಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಜೆಡಿಎಸ್ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು. 

ಭದ್ರಾವತಿ ಭಾಗದಲ್ಲಿ 139 ಕೋಟಿಯಲ್ಲಿ ಕೆರೆ ನೀರು ತುಂಬಿಸಲಾಗುತ್ತಿದೆ. ಅದರ ಜೊತೆಗೆ 2009 ರಲ್ಲಿ ದಂಡಾವತಿಯನ್ನ‌ ಮಾಡುವುದಾಗಿ ಬಿಎಸ್ ವೈ ಹೇಳಿದ್ದರು ಮಾಡಿರಲಿಲ್ಲ. ದಂಡಾವತಿಯನ್ನ ನಿರ್ಮಿಸುವ ಜಾಗದಲ್ಲಿ ಪ್ರತಿಭಟನೆಯ ಹಿನ್ನಲೆಯಲ್ಲಿ ಸೊರಬ ಟೌನ್ ನಲ್ಲಿ ಮಾಡಲಾಗಿತ್ತು. 2009 ರಲ್ಲಿ ಸೊರಬ ತಾಲೂಕಿನ್ನ ಮುಳುಗಿಸಿ ಶಿಕಾರಿಪುರದಲ್ಲಿ ನೀರು ಕೊಡಲು ಹೋಗಿದ್ದರು. ಮಹಿಳೆಯರಿಗೆ ಲಾಠಿಯಲ್ಲಿ ಹೊಡೆಯಲಾಗಿತ್ತು. 

ನೀರು ಕೊಡಲು ಒಬ್ವರ ಮನೆ ಹಾಳಮಾಡಬಾರದು. ರಾಜಕೀಯ ದ್ವೇಷದ ಹಿನ್ನಲೆಯಲ್ಲಿಬಿಜೆಪಿಯ ಒಳಹೊಡೆತ ನೀಡಲು ಹೊರಟಿತ್ತು. 900 ಕೋಟಿಯಲ್ಲಿ ಮೂರು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನೀಡಲು ಹೊರಟಿದ್ದಾರೆ. ದಂಡಾವತಿ 54 ಕೋಟಿಯಲ್ಲಿ ಮಿನಿ ಬ್ಯಾರೇಜ್ ನಿರ್ಮಿಸಿ, ಗುಡವಿ 32 ಕೆರೆಗಳನ್ನ ತುಂಬಿಸಲಾಗುತ್ತದೆ ಮತ್ತು ಯಡಗೊಪ್ಪದಲ್ಲಿ 38.50 ಕೋಟಿ 15 ಕೆರೆಗಳನ್ನ ತುಂಬಿಸಲಾಗುವುದು‌ ಎಂದರು.

ಹೊಸನಗರ, ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ, ಕುಂಸಿ, ಕ್ರೀಡಾಂಗಣ ವಿವಿಧ ಕಾಮಗಾರಿಗೆ 16 ಕೋಟಿ ಒಟ್ಟಾರೆ ಜಿಲ್ಲೆಯಲ್ಲಿ ಸಮಗ್ರ ಕ್ರೀಡಾಭಿವೃದ್ಧಿಗೆ 32.25 ಕೋಟಿಯ ಪ್ರಸ್ತಾವನೆ ನೀಡಲಾಗಿದೆ. ಕ್ರೀಡಾ ಇಲಾಖೆ, ಪ್ರವಾಸೋದ್ಯಮ, ಚಂದ್ರಗುತ್ತಿ ಪ್ರಾಧಿಕಾರ, ಕೇಂದ್ರ ಸರ್ಕಾರ ಅಡಿಕೆ ಟ್ಯಾಕ್ಸ್ ಕೊಟ್ಟರೆ ಜಿಲ್ಲೆಯ ಅಭಿವೃದ್ಧಿ ಮಾಡಬಹುದು ಎಂದು ಶಿಕ್ಷಣ ಸಚಿವರು ಆಕ್ಷೇಪಿಸಿದ್ದಾರೆ. 

8200 ವಿವಿಧ ಯೋಜನೆಗೆ ಬಿಜೆಪಿ 1200 ಹಣ ಎತ್ತಿಟ್ಟಿದ್ದರು. ನಂತರ ಸಿದ್ದರಾಮಯ್ಯನವರು ಹಣ ನೀಡಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಬಿಜೆಪಿಯ ಯೋಜನೆಯಲ್ಲ ರದ್ದುಗೊಳಿಸಿದ್ದು ಯಾಕೆ ಎಂದರೆ ಬಿಜೆಪಿ ಹಣವೇ ಎತ್ತಿಟ್ಟಿಲ್ಲ ಆ ಕಾರಣಕ್ಕೆ ಹಣ ಬಂದಿಲ್ಲ ಎಂದರು. 

ಶರಾವತಿ ಸಂತ್ರಸ್ತರಿಗೆ ನ್ಯಾಯ

ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ನಿರಂತರವಾಗಿ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದ್ದು, ಇದೀಗ ಅಡ್ವೊಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸಿ, ಸುಮಾರು 1800 ಕ್ಕೂ ಹೆಚ್ಚು ದಾಖಲಾತಿಗಳನ್ನು ಸಲ್ಲಿಸಲಾಗಿದೆ. ಹಂತ ಹಂತವಾಗಿ ಸಂತ್ರಸ್ತರಿಗೆ ಸಂಪೂರ್ಣ ನ್ಯಾಯ ಒದಗಿಸಲಾಗುವುದು.

ಎಸ್.ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು

ಸಾರ್ವಜನಿಕರಿಂದ ಅಹವಾಲು ಸ್ವೀಕಾರ 

ಸಚಿವರು, ಪತ್ರಿಕಾಗೋಷ್ಟಿಯ ನಂತರ ಸಾರ್ವಜನಿಕರಿಂದ ಸುಮಾರು 100 ಕ್ಕೂ ಹೆಚ್ಚು ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದರು.

 ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್, ಮಾಜಿ ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್, ಆರ್ ಪ್ರಸನ್ನಕುಮಾರ್, ಇತರೆ ಮುಖಂಡರು ಹಾಜರಿದ್ದರು.

ಆರ್ ಆಶೋಕ್ ಗೆ ಟಾಂಗ್

ನನ್ನ ಕನ್ನಡವನ್ನ ಆಡಿಕೊಳ್ಳುವ ಬಿಜೆಪಿ ಅವರ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ಕನ್ನಡವನ್ನ ಪ್ರಸ್ಥಾಪಿಸಿ ಬೆಂಗಳೂರು ಕನ್ನಡವನ್ನ ತೆಗೆಳಿದರು. ಮೆಗ್ಗಾನ್ ದುರಾಡಳಿತಕ್ಕೂ ಸಂಸದ ಮತ್ತು ಮಾಜಿ ಸಿಎಂ ಬಿಎಸ್ ವೈ ಕಾರಣ ಎಂದು ದೂರಿದರು. 

Areca nut tax will bring development

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close