SUDDILIVE || SHIVAMOGGA
PUC ಪರೀಕ್ಷೆಯ ಮೂರನೇ ಫಲಿತಾಂಶ-ಕಳೆದ ಬಾರಿಗಿಂತ ಈ ಬಾರಿ ಗಣನೀಯವಾಗಿ ಏರಿಕೆ-PUC EXAMS III RESULT
PUC ಮೂರನೇ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ಒಟ್ಟು 1,11,002 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, 22,446 ಉತ್ತೀರ್ಣರಾಗಿದ್ದಾರೆ. ಶೇಕಡಾ 20.22 ರಷ್ಟು ಫಲಿತಾಂಶ ದೊರೆತಿದೆ.
ಹಾಜರಾತಿ ಮತ್ತು ಉತ್ತೀರ್ಣರ ಸಂಖ್ಯೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ಏರಿಕೆಯಾಗಿದೆ. ಅಂಕ ಸುಧಾರಣೆಗೆ 17,398 ವಿದ್ಯಾರ್ಥಿಗಳು ಹಾಜರಾಗಿ, 11,937 ಜನ ವಿದ್ಯಾರ್ಥಿಗಳು ತಮ್ಮ ಅಂಕ ಹೆಚ್ಚಿಸಿಕೊಂಡರು.
ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ ವಿಷಯಗಳಲ್ಲಿ ಅಂಕ ಸುಧಾರಣೆಗೆ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗಿದ್ದರು. ಮೂರನೇ ಪರೀಕ್ಷೆಯ ಅವಕಾಶದಿಂದ ಒಟ್ಟು 22,446 ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಉತ್ತೀರ್ಣರಾಗಿದ್ದಾರೆ.
ಒಟ್ಟಾರೆ ಕ್ರೋಢೀಕೃತ ಫಲಿತಾಂಶ ಶೇಕಡಾ 79.81, ಹೊಸಬರ ಫಲಿತಾಂಶ ಶೇಕಡಾ 85.19.ವಿದ್ಯಾರ್ಥಿಗಳಿಗೆ ಸಿಇಟಿ ಕೌನ್ಸೆಲಿಂಗ್ ಮತ್ತು ಮುಂದಿನ ಉನ್ನತ ಶಿಕ್ಷಣಕ್ಕೆ ಉತ್ತಮ ಅವಕಾಶ ದೊರತಂತಾಗಿದೆ.
PUC EXAMS III RESULT