ad

ಹಳೆಯ ವಿಡಿಯೋ ವೈರಲ್-ಜೋಗಕ್ಕೆ ಲಗ್ಗೆಯಿಟ್ಟ ಪ್ರವಾಸಿಗರು-Old video went viral - Travels flow to Joga

 SUDDILIVE || SAGAR

ಹಳೆಯ ವಿಡಿಯೋ ವೈರಲ್-ಜೋಗಕ್ಕೆ ಲಗ್ಗೆಯಿಟ್ಟ ಪ್ರವಾಸಿಗರು-Old video went viral - Travels flow to Joga

Joga, viral


ಸಾಮಾಜಿಕ ಜಾಲತಾಣದಲ್ಲಿ ರಾಜಾ ರಾಣಿ ರೋರಲ್ ರಾಕೆಟ್ ಗಳ ಬೋರ್ಗರೆತದ  ವಿಡಿಯೋ ವೈರಲ್ ಆದ ಬೆನ್ನಲ್ಲೇ ವೀಕೆಂಡ್ ಮೂಡಿನಲ್ಲಿದ್ದ ಪ್ರವಾಸಿಗರು ಜೋಗಕ್ಕೆ ಲಗ್ಗೆಯಿಟ್ಟಿದ್ದಾರೆ. ಜೋಗದಲ್ಲಿ ಟ್ರಾಫಿಕ್ ಜ್ಯಾಮ್ ಕಿಲೋಮೀಟರ್ ಗಟ್ಟಲೆ ಆಗಿವೆ.  

ರಜಾ ಹಿನ್ನಲೆಯಲ್ಲಿ ರಾಜ್ಯದ ನಾನಾ ಬಾಗಗಳಿಂದ ಬಂದ ಪ್ರವಾಸಿಗರಿಂದ ಪರದಾಡುವಂತಾಗಿದೆ. ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಮತ್ತು ಪ್ರಾದಿಕಾರದ ಸಿಬ್ಬಂದಿಗಳಿಂದ ಹರಸಾಹಸ ನಡೆದಿದೆ. 

ಕಳೆದ ವರ್ಷದ ಜೋಗ ಜಲಪಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪರಿಣಾಮ ಪ್ರವಾಸಿಗರು ಜೋಗದಲ್ಲಿಯ ಸೊಬಗನ್ನ ಹೀರಲು ಲಗ್ಗೆಯಿಟ್ಟಿದ್ದಾರೆ. ಜೋಗದಲ್ಲಿ ನೂರಾರು ಕೋಟಿಯ ಅಭಿವೃದ್ಧಿಯ ಸಾಗುತ್ತಿರುವುದರಿಂದ ಪಾರ್ಕಿಂಗ್ ಗೂ ಸಮಸ್ಯೆಯಾಗಿ ವ್ಯವಸ್ಥೆಯಲ್ಲದ ಕಾರಣ ವಾಹನಗಳನ್ನ ರಸ್ತೆಯ ಬದಿಯಲ್ಲೇ ನಿಲ್ಲಿಸಲಾಗಿದೆ.  ಜೋಗ ವೀಕ್ಷಣೆಗೆ ತೆರಳಿದ ಪ್ರವಾಸಿಗರು ಹರಸಾಹಸ ಪಡುವಂತಾಗಿದೆ. 

ಮಂಜು ಮುಸುಕಿದ ವಾತಾವರಣವೂ ಸಹ ಜನರಿಗೆ ಜಲಪಾತ ವೀಕ್ಷಣೆಗೆ ತೊಂದರೆಯುಂಟಾಗಿ ಅನೇಕ ಗಂಟೆಗಳ ಕಾಲ ಉಳಿಯುವಂತೆ ಮಾಡಿದೆ.   ಜಲಪಾತ ವೀಕ್ಷಣೆ ವಿಳಂಬದ ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಸಂಜೆಯ ಒಳಗೆ ಟ್ರಾಫಿಕ್ ಕ್ಲಿಯರ್ ಆಗಿದೆ. 


ಮಳೆಯ ಆರಂಭದ ದಿನಗಳಾಗಿರುವುದರಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಇಂದು ಭೇಟಿ ನೀಡಿರುವ ಸಾಧ್ಯತೆಯಿದೆ. ಜೋಗದಲ್ಲಿ ಕಾರು ಮತ್ತು ಟಿಟಿಗಳದ್ದೇ ಕಾರು ಬಾರಾಗಿರುವುದರಿಂದ ಜನ ವೀಕೆಂಡ್ ಮೂಡ್ ನಲ್ಲಿದ್ದಿದ್ದು ವಿಷೇಷವಾಗಿತ್ತು. 

Old video went viral - Travels flow to Joga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close