ad

ಆಯನೂರು| ಮರಕ್ಕೆ ಟಿಟಿ ಡಿಕ್ಕಿ-Ayanur | TT hits tree

 SUDDILIVE || SHIVAMOGGA

ಆಯನೂರು| ಮರಕ್ಕೆ ಟಿಟಿ ಡಿಕ್ಕಿ-Ayanur | TT hits tree

Ayanuri, TT


ನಾಯಿ ಅಡ್ಡ ಬಂದ ಹಿನ್ನಲೆಯಲ್ಲಿ ರಸ್ತೆಪಕ್ಕದ ಮರಗಳಿಗೆ ಟಿಟಿವೊಂದು ಡಿಕ್ಕಿ ಹೊಡೆದಿದೆ. ಟಿಟಿಯ ಮುಂಭಾಗ ನುಜ್ಜುಗುಜ್ಜಾಗಿದೆ. ಸಧ್ಯಕ್ಕೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣ ಪುಟ್ಟ ಗಾಯಾಳುಗಳಾಗಿದ್ದು, ಅವರಿಗೆ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಹೊಸ ಟಿಟಿಯಲ್ಲಿ ಬೆಂಗಳೂರಿನೊಂದ ಸಿಗಂದೂರಿಗೆ ಹೊರಟಿದ್ದ ಟಿಟಿಯಲ್ಲಿ ಒಂದೇ ಕುಟುಂಬದ ಸದಸ್ಯರು ಸಿಗಂದೂರಿಗೆ ತೆರಳುತ್ತಿದ್ದರು. ಆಯನೂರ ಬಳಿ ಬೆಳಿಗ್ಗೆ  5-30 ರ ಸಮಯದಲ್ಲಿ ಈ ಘಟನೆ ನಡೆದಿದೆ. 

ಆಯನೂರಿನ ಬಳಿ ಟಿಟಿ ಬರುವಾಗ ಈ ವೇಳೆ ನಾಯಿಯೊಂದು ಅಡ್ಡಬಂದಿದೆ ಎನ್ನಲಾಗಿದೆ. ನಾಯಿಯನ್ನ ತಪ್ಪಿಸಲು ಹೋಗಿ ಟಿಟಿ ಚಾಲಕ ನೀಲಗಿರಿ ಮರಕ್ಕೆ ಟಿಟಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಗೆ ನೀಲಗಿರಿ ಮರ ಮುರಿದು ಬಿದ್ದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಟಿಟಿ ಮಾಲೀಕರು ಯಾವುದೇ ಸುದ್ದಿ ಬೇಡ, ನಮ್ಮದೇ ಕುಟುಂಬವಾಗಿದ್ದು ಮೇಜರ್ ಆಗಿ ಯಾರಿಗೂ ಗಾಯವಾಗಿಲ್ಲ ಅಪಘಾತದಲ್ಲಿ ಎಂದಿದ್ದಾರೆ. ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Ayanur | TT hits tree

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close