ad

ಪ್ರಸನ್ನ ಕೆರೆಕೈಯನ್ನ ನೆನಪಿಸಿಕೊಂಡ ಸಚಿವ ಮಧುಬಂಗಾರಪ್ಪ-Prasanna Kerekai remembered Minister Madhubangarappa

SUDDILIVE || SAGARA

ಪ್ರಸನ್ನ ಕೆರೆಕೈಯನ್ನ ನೆನಪಿಸಿಕೊಂಡ ಸಚಿವ ಮಧುಬಂಗಾರಪ್ಪ-Prasanna Kerekai remembered Minister Madhubangarappa

Prasanna, kerekai


ಸಾಗರದ ಹಸಿರುಮಕ್ಕಿ ಸೇತುವೆ ವೀಕ್ಷಣೆಗೆ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಪರಿಶೀಲಿಸಿದರು. ಪರಿಶೀಲನೆ ವೇಳೆ ಸಾರ್ವಜನಿಕರನ್ನ ಉದ್ದೇಶಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅಂಬಾರಕೊಡ್ಲು-ಕಳಸವಳ್ಳಿಯ ಸಿಗಂದೂರು ಸೇತುವೆಯ ನಿಜವಾದ ನಿರ್ಮಾತೃ ಪ್ರಸನ್ನ ಕೆರೆಕೈ ಎಂದು ನೆನಪಸಿಕೊಂಡಿರುವುದು ವಿಶೇಷವಾಗಿತ್ತು. 

ಮೊದಲಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕಾಗೋಡು ತಿಮ್ಮಪ್ಪ ಮಂತ್ರಿಯಾಗಿದ್ದಾಗ ಹಸಿರುಮಕ್ಕಿ ಸೇತುವೆ ಮಂಜುರಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಕಾಳಜಿ ವಹಿಸಲಿಲ್ಲ.  38 ಕೋಟಿ ಮಾತ್ರ ಬಿಡಿಗಡೆಯಾಗಿತ್ತು.  ತಂತ್ರಜ್ಞಾನದ ದೋಷವಿದೆ ಎಂದು ಕಾಮಗಾರಿ ಮುಂದುವರೆಯಲಿಲ್ಲ. ನಾನು ಬೆಳಗಾವಿ ಅದಿವೇಶನ ನಂತರ 48 ಕೋಟಿ ಬಿಡುಗಡೆ ಮಾಡಿಸಿದ್ದೇನೆ ಎಂದ ಅವರು 16 ಮೀಟರ್ ಬಾಕಿ ಇದೆ. ಮಳೆಗಾಲದಲ್ಲಿ ತೊಂದರೆಯಾಗಿದೆ ತಡವಾಗಿದೆ ಎಂದರು. 


ಈ ಸೇತುವೆಯೂ ಪ್ರಮುಖವಾಗಿದೆ ಕಳಸವಳ್ಳಿಯ ಸೇತುವೆ ಬೇಗ ಆಗಬೇಕೆಂದು ಸಂಸದರು ತಡಮಾಡಿದ್ದಾರೆ. ಈ ಸೇತುವೆ ಬಗ್ಗೆ ಗಮನಹರಿಸಲಿಲ್ಲ. ತುಮರಿಭಾಗದ ಜನರಿಗೆ ಅನುಕೂಲವಾಗಬೇಕೆಂದು ಹೇಳಿದ ಶಾಸಕರು 2026 ನೇ ಸಾಲಿನ ಮೇ. ತಿಂಗಳಲ್ಲಿ ಮುಗಿಸಿಕೊಡುವಂತೆ ಗುತ್ತಿಗೆದಾರನಿಗೆ ಗಡವು ನೀಡಲಾಗಿದೆ ಎಂದರು. 

ಸಚಿವ ಮಧು ಬಂಗಾರಪ್ಪ ಮಾತನಾಡಿ, ಸೇತುವೆ ಪರಿವೀಕ್ಷಣೆಗೆ ಬಂದಿದ್ದೇವೆ. ನಮ್ಮ ಸರ್ಕಾರ ಬಂದಮೇಲೆ ಮರು ಚಾಲನೆ ನೀಡಲಾಗಿದೆ. ಬಿಜೆಪಿಗೆ ಒಂದು ಬ್ರಿಡ್ಜ್ ಟಾರ್ಗೆಟ್ ಇರಬಹುದು ಆದರೆ ಎರಡೂ ಸೇತುವೆ ನಮಗೆ ಬೇಕು. ಬಾಕಿ 25 ಕೋಟಿ ಇದೆ. ಕೊಡಲಾಗುವುದು. 

ನಾನೇ ಆಗಲಿ ಅವರೆ ಆಗಲಿ ಮನೆಯಿಂದ ಹಣ ತರಲ್ಲ. ತೆರಿಗೆ ನಮ್ಮ ಜನರದ್ದು,  ಜಮೀನು ಯಾರದ್ದು? ಜಾಗ ಕೇಂದ್ರ ಕೊಡುತ್ತಾ? ರಾಜ್ಯನೇ ಕೋಡೋದು. ಇದನ್ನ ಬಿಡಿ ಬಿಡಿ ಮಾಡಬಾರದು. ನಾಲ್ಕೈದು ಪಿಲ್ಲರ್ ಮುಗಿದರೆ ಹಸಿರು ಮಕ್ಕಿ ಸೇತುವೆ  ಪೂರ್ಣಗೊಳ್ಳುತ್ತದೆ ಎಂದರು. 

ಕಳಸವಳ್ಳಿ ಸೇತುವೆ 2.13 ಮೀಟರ್ ಇದೆ. 435 ಕೋಟಿಯಲ್ಲಿ ನಿರ್ಮಾಣವಾಗುತ್ತಿದೆ. ವಿಮಾನ ನಿಲ್ದಾಣದಂತೆ ಆಗದಿರಲಿ ಎಂದ ಸಚಿವರು ಹಸಿರುಮಕ್ಕಿ ಸೇತುವೆ 125 ಕೋಟಿ ಬ್ರಿಡ್ಜ್ ಆಗಿದೆ. ಕರಾವಳಿ ಮತ್ತು ಮಲೆನಾಡಿನ ಸಾಗರ ಭಾಗದ ಜನರ ಸಂಪರ್ಕ ಸಾಧಿಸಲಾಗುತ್ತಿದೆ ಎಂದರು. 

ಅಣ್ಣತಮ್ಮಂದಿರೆಗೆ ಕೆಟ್ಟ ಚಾಳಿ ಇದೆ. ಸರ್ಕಾರದ ಹಣ ಎಲ್ಲಾ ಸಾರ್ವಜನಿಕರದ್ದು. ಕಾಗೋಡು ಭೂಮಿ ಪೂಜೆ ಮಾಡದಿದ್ದರೆ ಹೊಸದಾಗಿ ಈ ಸೇತುವೆಗೆ ಮತ್ತೆ ಹೋರಾಟಬೇಕಿತ್ತು.  ಸಿಗಂದೂರು ಸೇತುವೆಯ ನಿಜವಾದ ನಿರ್ಮಾತೃ ಪ್ರಸನ್ನವೆಂದು ನೆನಪಿಸಿಕೊಂಡಿದ್ದು ವಿಷೇಶವಾಗಿದ್ದು. 

ಗಡ್ಕರಿ, ನರೇಂದ್ರ ಮೋದಿಯನ್ನ ಕರೆಸುತ್ತಾರೋ ಅಥವಾ ಮೋದಿಯ ಸ್ನೇಹಿತ  ಟ್ರಂಪ್ ನ್ನಾದರೂ ಕರೆಯಿಸಲಿ. ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದರು. 

ಕೋಳೂರು ಶಾಲೆಯ ಅಭಿವೃದ್ಧಿ ಮಾಡುವೆ. ಶರಾವತಿ ಮುಳುಗಡೆಯವರ ಬ್ಲಾಕ್ ಸರ್ವೆ ಆಗಲು ಜನ ಒತ್ತಾಯಿಸುತ್ತಿದ್ದಾರೆ. ಜನರಿಗೆ ತೊಂದರೆ ನಮ್ಮಿಂದ ಆಗಲ್ಲ. ಇವರ ಸಮಸ್ಯೆಯನ್ನ‌ಉಲ್ಬಣಗೊಳಿಸಿರುವುದು ಬಿಜೆಪಿ ಪಕ್ಷ‌ ಎಂದರು.

ಕೇಂದ್ರ ಸರ್ಕಾರದ ಜೊತೆ ಸಹಕಾರದಿಂದ ಸಮಸ್ಯೆ ಬಗೆಹರಿಸಲಾಗುವುದು. ಡಿಸಿಯವರಿಂದ ವರದಿ ತರೆಯಿಸಿ ನ್ಯಾಯಾಲಯಕ್ಕೆ ಅರ್ಜಿ ಹಾಕಲಾಗುವುದು. ಹೇಳಿದಂತೆ ನಾವು ನಡೆಸುತ್ತೇವೆ ಎಂದರು. ನಂತರ ಕಳಸವಳ್ಳಿ ಸೇತುವೆಗೂ ಭೇಟಿ ನೀಡಿದರು.

Prasanna Kerekai remembered Minister Madhubangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close