ad

ನಗರ ಹೋಬಳಿ ಆಸ್ಪತ್ರೆಯ ಮುಂದೆ ಬಿಜೆಪಿ ದಿಡೀರ್ ಪ್ರತಿಭಟನೆ- BJP holds sudden protest in front of Nagar Hobli Hospital

SUDDILIVE || NAGARA

ನಗರ ಹೋಬಳಿ ಆಸ್ಪತ್ರೆಯ ಮುಂದೆ ಬಿಜೆಪಿ ದಿಡೀರ್ ಪ್ರತಿಭಟನೆ-BJP holds sudden protest in front of Nagar Hobli Hospital

Protest, nagara

ನಗರದ ನಿತಿನ್ ನೇತೃತ್ವದಲ್ಲಿ ಹೊಸನಗರ ತಾಲೂಕಿನ ಚಿಕ್ಕಪೇಟೆ-ನಗರ ಹೋಬಳಿಯ ಆಸ್ಪತ್ರೆಯ ಮುಂಭಾಗದಲ್ಲಿ ಬಿಜೆಪಿಯ ಕಾರ್ಯಕರ್ತರು ದಿಡೀರ್ ನೆ ಅಹೋರಾತ್ರಿ ಪ್ರತಿಭಟನೆಗೆ ಇಳಿದಿದ್ದಾರೆ.  ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಮತ್ತು ವೈದ್ಯರ ಕೊರತೆಯಿಂದಾಗಿ ರೋಗಿಗಳು ಪರದಾಡುವಂತಾಗಿದೆ ಎಂದು ಆರೋಪಿಸಿ ಪ್ರತಿಭಟಿಸಲಾಗಿದೆ.

ಮಳೆಗಾಲವಾಗಿದ್ದು, ಮಳೆಯ ಅಧಿಕವಾಗಿ ಕಾಲಸಂಕದಿಂದ ಕಾಲುಜಾರಿ ಹೋಗುವ, ಹಾವು ಕಚ್ಚಿದ ಹಾಗೂ ಹೃದಯಾಘಾತದಿಂದ ಸಾವಾಗುತ್ತಿರುವ ಪ್ರಕರಣಗಳು ಹೆಚ್ಚಾದ ಈ ದಿನಗಳಲ್ಲಿ ನಗರ ಹೋಬಳಿ ಆಸ್ಪತ್ರೆಯಲ್ಲಿ ಇಂದು ಸಂಜೆ 4 ಗಂಟೆಯಿಂದ ಇಲ್ಲಿಯ ವರೆಗೆ ಡಿಗ್ರೂಪ್ ನೌಕರರು ಬಿಟ್ಟರೆ ವೈದ್ಯರಾಗಲಿ, ನರ್ಸ್ ಗಳಾಗಲಿ ಇಲ್ಲದಿರುವುದನ್ನ ಖಂಡಿಸಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಈ ಹಿಂದೆಯೂ ನಗರದ ನಿತಿನ್ ನೇತೃತ್ವದಲ್ಲಿ ವೈದ್ಯರು ಇಲ್ಲದೆ ಇರುವ ಕಾರಣ ಪ್ರತಿಭಟನೆ ನಡೆಸಲಾಗಿತ್ತು. ಡಿಹೆಚ್ ಒ ಅವರ ಮದ್ಯ ಪ್ರವೇಶದದ ಈ ಸಮಸ್ಯೆ ಬಗೆಹರಿದಿತ್ತು. ಈಗ ಮತ್ತೆ ಸಿಬ್ಬಂದಿಗಳ ಮತ್ತು ವೈದ್ಯರ ಕೊರತೆ ಉಂಟಾಗಿದೆ. ಪ್ರತಿಭಟನೆಯ ನಂತರ ಈಗ ನರ್ಸ್ ಒಬ್ಬರನ್ನ ಕಳುಹಿಸಲಾಗಿದೆ ಎಂದು ನಗರದ ನಿತಿನ್ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ. ಇನ್ನು ಜಟ್ಟುಗಟ್ಟಿದ ಸರ್ಕಾರಕ್ಕೆ ಇನ್ನೂ ಬಲಿಗಳು, ಪ್ರತಿಭಟನೆಗಳು ಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಸಿಬ್ಬಂದಿಗಳ ಮತ್ತು ವೈದ್ಯರು ಬರುವವರೆಗೂ ನಗರದ ಜನ ಪರದಾಡುವಂತಾಗಿದೆ. 

ಪ್ರತಿಭಟನೆಯಲ್ಲಿ, ರಾಜೇಶ್ ಹಿರಿಮನೆ, ದೇವು ಕಂದ್ಲಕೊಪ್ಪ, ಉಮೇಶ್ ಕಾಡಿಗ್ಗೇರಿ, ನಿತಿನ್ ಹಾಲ್ಗದ್ದೆ, ದೇವಣ್ಣ, ನಾಗರಾಜ್, ಸುಮಂತ್ ದುಬಾರತಟ್ಟಿ, ಶಾಶ್ವತ್, ಸಂತೋಷ್, ರಾಕೇಶ್, ಚಂದ್ರಮೌಳಿ, ಮಂಜು, ಸುಬ್ರಹ್ಮಣ್ಯ ಬಾಗವತ್, ರಮೇಶ್ ಚಿಕ್ಕಪೇಟೆ, ಸಂತೋಷ್ ಚಿಕ್ಕಪೇಟೆ, ದಿನೇಶ್ ನೂಲಿಗ್ಗೇರಿ ಭಾಗಿಯಾಗಿದ್ದರು. 

BJP holds sudden protest in front of Nagar Hobli Hospital

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close