SUDDILIVE || SHIVAMOGGA
ಆಟೋ ಅಡ್ಡಗಟ್ಟಿ ಹಣಕಿತ್ತುಕೊಂಡು ಪರಾರಿ-Stopped the auto and took the money and ran away
ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಲಿಸುತ್ತಿದ್ದ ಆಟೋವನ್ನು ಅಡ್ಡಗಟ್ಟಿ ಹಿಂಬದಿ ಕುಳಿತಿದ್ದ ವ್ಯಕ್ತಿ ಬಳಿ ಇದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಬ್ಯಾಗ್‌ನಲ್ಲಿ ಎರೆಡು ಲಕ್ಷ ರೂ. ಹಣವಿತ್ತು ಎಂದು ಆರೋಪಿಸಲಾಗಿದೆ.
ನಗರದ ಕೆ.ಆರ್.ಪುರಂನಲ್ಲಿ ಘಟನೆ ಸಂಭವಿಸಿದೆ. ಆಟೋ ಚಾಲಕ ಅಲ್ಲಾಭಕ್ಷ್ ಎಂಬುವವರು ದೂರು ನೀಡಿದ್ದಾರೆ. ನಗರದ ವಿವಿಧ ಆಟೋ ಚಾಲಕರು ತುರ್ತು ಸಂದರ್ಭದಲ್ಲಿ ನೆರವಿಗೆ ಫಂಡ್ ರಚಿಸಿಕೊಂಡಿದ್ದಾರೆ. ಅಲ್ಲಾಭಕ್ಷ್ ಅವರಿಗೆ ಅದರ ಉಸ್ತುವಾರಿ ವಹಿಸಲಾಗಿದೆ. ಜುಲೈ 5ರಂದು ಫಂಡ್ ಹಣ ಸಂಗ್ರಹಿಸಿ, ಪುಸ್ತಕದಲ್ಲಿ ನಮೂದು ಮಾಡಿಕೊಂಡು ಅಲ್ಲಾಭಕ್ಷ್ ಅವರು ತಮ್ಮ ಸಹೋದರನ ಆಟೋದಲ್ಲಿ ಮನೆಗೆ ಮರಳುತ್ತಿದ್ದರು. ಬಿಳಿ ಅಪಾಚೆ ಬೈಕಿನಲ್ಲಿ ಹಿಂಬಾಲಿಸಿ ಬಂದ ಮೂವರು ಯುವಕರು ಕೆ.ಆರ್.ಪುರಂನದಲ್ಲಿ ಆಟೋ ಅಡ್ಡಗಟ್ಟಿದ್ದಾರೆ ಎಂದು ಅರೋಪಿಸಲಾಗಿದೆ.
ಆರೋಪಿಗಳು 25 ವರ್ಷ ವಯಸ್ಸಿನವರು ಎಂದು ಅಂದಾಜಿಸಲಾಗಿದೆ. ಅಲ್ಲಾಭಕ್ಷ್ ಅವರ ಬಳಿ ಬಂದು ಬ್ಯಾಗ್ ಕಸಿದುಕೊಂಡಿದ್ದು, ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಯತ್ನಿಸಿದ ಅಲ್ಲಾಭಕ್ಷ್ ಅವರ ಸಹೋದರನ್ನು ತಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಮೂವರು ಆರೋಪಿಗಳು ಹಣ ಮತ್ತು ಫಂಡ್‌ನ ವಿವರದ ಪುಸ್ತಕಗಳಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Stopped the auto and took the money and ran away