ad

ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ - ಶಾಲಾ ಮುಖ್ಯೋಪಾಧ್ಯಾಯ ಸ್ಥಳದಲ್ಲಿಯೇ ಸಾವು-School principal dies on the spot

 SUDDILIVE || RIPPONPETE

ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ - ಶಾಲಾ ಮುಖ್ಯೋಪಾಧ್ಯಾಯ ಸ್ಥಳದಲ್ಲಿಯೇ ಸಾವು-Head-on collision between bikes - School principal dies on the spot

Collision, principal

ಇಲ್ಲಿನ ಶಿವಮೊಗ್ಗ ರಸ್ತೆಯ ಶಿವಮಂದಿರ ಸಮೀಪದಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ  ಸರ್ಕಾರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಅರಸಾಳು ಗ್ರಾಮದ ನಿವಾಸಿ ಮಂಜಯ್ಯ ಟಿ(59) ಮೃತಪಟ್ಟ ದುರ್ಧೈವಿಯಾಗಿದ್ದಾರೆ.ಕೋಟೇತಾರಿಗ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತಿದ್ದ ಟಿ ಮಂಜಯ್ಯ ಮೂಲತಃ ಹರಮಘಟ್ಟ ಗ್ರಾಮದವರು.

ನಡೆದಿದ್ದೇನು..!??

ಶಾಲೆಯ ಕರ್ತವ್ಯ ಮುಗಿಸಿಕೊಂಡು ರಿಪ್ಪನ್ ಪೇಟೆಯಿಂದ ಅರಸಾಳು ಕಡೆಗೆ ತೆರಳುತಿದ್ದ ಮಂಜಯ್ಯ ರವರ ಸ್ಟಾರ್ ಸಿಟಿ ಬೈಕ್ ( KA14 Z 6775) ಬೈಕ್ ಗೆ ಎದುರಿನಿಂದ ಬಂದ ಹಿರೋ ಹೋಂಡಾ ಸ್ಪೆಂಡರ್ (KA15 V 0159) ಬೈಕ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲಿಯೇ ಕೆಳಗೆ ಬಿದ್ದ ಮಂಜಯ್ಯ ನವರಿಗೆ ತೀವ್ರ ರಕ್ತಸ್ರಾವವಾಗಿತ್ತು ಕೂಡಲೇ ಸ್ಥಳೀಯರು ಆಟೋ ಮೂಲಕ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ ಆದರೆ ಅಷ್ಟರಲ್ಲಾಗಲೇ ಮಂಜಯ್ಯ ನವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಘಟನೆಯಲ್ಲಿ ಇನ್ನೊಂದು ಬೈಕ್ ನ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಮೃತದೇಹವನ್ನು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಸ್ಥಳಕ್ಕೆ ರಿಪ್ಪನ್ ಪೇಟೆ ಪಿಎಸ್‌ಐ ರಾಜುರೆಡ್ದಿ ಹಾಗೂ ಸಿಬ್ಬಂದಿಗಳು ಧಾವಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

School principal dies on the spot

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close