ad

ಬಿವೈಆರ್ ಅವರ ಸಿಗಂದೂರು ಸೇತುವೆ ಲೋಕಾರ್ಪಣೆ ಪೋಸ್ಟ್ ಗೆ ಭರಪೂರ ಪ್ರತಿಕ್ರಿಯೆ-BYR's Sigandur Bridge inauguration post receives overwhelming response

 SUDDILIVE || SHIVAMOGGA

ಬಿವೈಆರ್ ಅವರ ಸಿಗಂದೂರು ಸೇತುವೆ ಲೋಕಾರ್ಪಣೆ ಪೋಸ್ಟ್ ಗೆ ಭರಪೂರ ಪ್ರತಿಕ್ರಿಯೆ-BYR's Sigandur Bridge inauguration post receives overwhelming response


Siganduru, bridge

ಸಾಗರ ಅದರಲ್ಲೂ ಶರಾವತಿ ಹಿನ್ನೀರಿನ ದ್ವೀಪದ ಜನರ ಕನಸಾದ ಸಿಗಂದೂರು ಸೇತುವೆ ನಿರ್ಮಾಣ ಉದ್ಘಾಟನೆಯ ಹಂತಕ್ಕೆ ತಲುಪಿದೆ. ಬಿಎಸ್ ಯಡಿಯೂರಪ್ಪ, ಸಂಸದ ರಾಘವೇಂದ್ರ ಅವರ ಭಗೀರಥ ಪ್ರಯತ್ನದಿಂದಾಗಿ ಸೇತುವೆ ಜು.14 ಕ್ಕೆ ಲೋಕಾರ್ಪಣೆಯಾಗಲಿದೆ. ಈ ಲೋಕಾರ್ಪಣೆಗೆ ಪ್ರವಾಸಿಗರು ಮತ್ತು ದ್ವೀಪದ ಜನ ಈಗಾಗಲೇ ಕೌಂಟ್ ಡೌನ್ ಆರಂಭಿಸಿದ್ದಾರೆ.

ಸೇತುವೆ ಲೋಕಾರ್ಪಣೆಗೆ ಬಂದು ನಿಂತ ಹೊಸ್ತಿಲಿನಲ್ಲೇ ರಾಜಕಾರಣವೂ ಸಹ ಬಹಳ ಜೋರಾಗಿ ನಡೆಯುತ್ತಿದೆ. ಸೇತುವೆ ನಿರ್ಮಾಣಕ್ಕೆ ಸಚಿವ ಮಧು ಬಂಗಾರಪ್ಪ ಮತ್ತು ಸಂಸದರ ನಡುವೆ ರಾಜಕೀಯ ಆರೋಪ ಮತ್ತು ಪ್ರತ್ಯಾರೋಪ ಆರಂಭವಾಗಿದೆ. ರಾಜಕಾರಣ ಏನೇ ಇರಲಿ 473 ಕೋಟಿ ವೆಚ್ಚದ ಈ ಸೇತುವೆ ನಿರ್ಮಾಣ ಜು.14 ಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಪ್ರಹ್ಲಾದ್ ಜೋಷಿ ಅವರ ಸಮ್ಮುಖದಲ್ಲಿ ಲೋಕಾರ್ಪಣೆ ಆಗುತ್ತಿದೆ. 


ಸೇತುವೆ ಲೋಕಾರ್ಪಣೆಯ ಬಗ್ಗೆ ಸಂಸದರು ಸಂತೋಷದಿಂದಲೇ ಈಗಾಗಲೇ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಸೇತುವೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ಸಹ ಪ್ರಕಟಿಸಿದ್ದು, ಸೇತುವ ಲೋಕಾರ್ಪಣೆಯ ಪೋಸ್ಟ್ ನ್ನ ತಮ್ಮ ಎಕ್ಸ್ ಖಾತೆಯಲ್ಲಿ ಹರಿಬಿಟ್ಟಿದ್ದಾರೆ. ಜುಲೈ 14 ರಂದು ಸಿಗಂದೂರು ಸೇತುವೆ ನಿರ್ಮಾಣಕ್ಕೆ ಅರ್ಪಣೆ ಎಂದು ಸಂಸದರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ ನೀವಿಬ್ಬರೂ ಈ ಯೋಜನೆಯನ್ನ ತಂದು ಮುಗಿಸಿದ ಹೆಗ್ಗಳಿಕೆ ನಿಮಗಿದೆ. ಬಿವೈಆರ್ ಮತ್ತು ಬಿಎಸ್ ವೈಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ. 

ಸಿಗಂದೂರು ಸೇತುವೆ ಹಲವು ವರ್ಷಗಳ ಕನಸು ನನಸಾಗಿದೆ, ಬಹಳ ಉತ್ತಮ ಕೆಲಸ. ಹಿಡಿದ ಕಾರ್ಯ ಪೂರ್ಣಗೊಳಿಸುವ ಇರಾದೆಯುಳ್ಳ ಜನನಾಯಕರಿದ್ದಿರಿ. ಹಾಗೆಯೇ, ತಮ್ಮ ಚುನಾವಣೆಯ ಸಂದರ್ಭದಲ್ಲಿ, ತಾಯಿ ಕೊಲ್ಲೂರು ಮುಕಾಂಬಿಕಾ ಕಾರಿಡಾರ್ ಯೋಜನೆ ಕೈಗೊಳ್ಳುವ ಮಾತುಗಳನ್ನಾಡಲಾಗಿತ್ತು. ಇದೊಂದು ಯೋಜನೆ ಬಗ್ಗೆ ಶೀಘ್ರ ಗಮನಹರಿಸಿ ಎಂದು ಕೆಲವರು ಪ್ರತಿಕ್ರಿಯಿಸಿದರೆ,

ಕೆಲವರು ರಾಘಣ್ಣ ಹೈತೋ ಶಿವಮೊಗ್ಗ ಡೆವೆಲಪ್ ಮೆಂಟ್ ಹೋತಾಹೈ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ತುಮಕೂರು ಶಿವಮೊಗ್ಗ ಹೈವೆ ಯಾವಾಗ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಚಿಕ್ಕಮಗಳೂರಿನ ಎಂಪಿ ಕೋಟಾರವರಿಗೆ ಟ್ಯಾಗ್ ಮಾಡಿ 'ಒಂದು ಕಾಲದಲ್ಲಿ ಜಿಲ್ಲಾ ಮುಖ್ಯ ರಸ್ತೆ ಸಹ ಆಗಿರದ ಈ ಮಾರ್ಗವನ್ನು ಸಂಸದರು ನ್ಯಾಷನಲ್ ಹೈವೇ ಎಂದು ಘೋಷಿಸಿ ಉತ್ತಮ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಿಸಿದ್ದೀರಿ ಅಭಿನಂದನೆಗಳು. @KotasBJP ತಾವೂ ಸಹ ಚಿಕ್ಕಮಗಳೂರು ಶೃಂಗೇರಿ ಆಗುಂಬೆ ರಸ್ತೆ ಅನ್ನು ನ್ಯಾಷನಲ್ ಹೈವೇ ನಲ್ಲಿ ಸೇರಿಸಿ ಉಪಕಾರ ಮಾಡಿ ಎಂದು ಕೇಳಿಕೊಂಡಿದ್ದಾರೆ. 

ಒಂದು ಕಾಲದಲ್ಲಿ ಜಿಲ್ಲಾ ಮುಖ್ಯ ರಸ್ತೆ ಸಹ ಆಗಿರದ ಈ ಮಾರ್ಗವನ್ನು ತಾವು ನ್ಯಾಷನಲ್ ಹೈವೇ ಎಂದು ಘೋಷಿಸಿ ಉತ್ತಮ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಿಸಿದ್ದೀರಿ ಅಭಿನಂದನೆಗಳು @KotasBJP ತಾವೂ ಸಹ ಚಿಕ್ಕಮಗಳೂರು ಶೃಂಗೇರಿ ಆಗುಂಬೆ ರಸ್ತೆ ಅನ್ನು ನ್ಯಾಷನಲ್ ಹೈವೇ ನಲ್ಲಿ ಸೇರಿಸಿ ಉಪಕಾರ ಮಾಡಿ ಎಂದಿದ್ದಾರೆ. ಒಂದು ಸೇತುವೆ ಲೋಕಾರ್ಪಣೆ ಹಲವು ಚರ್ಚೆಗೆ ಕಾರಣವಾಗಿದೆ. 

BYR's Sigandur Bridge inauguration post receives overwhelming

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close