SUDDILIVE || SHIVAMOGGA
ಮೈದುಂಬಿದ ತುಂಗೆ-ಪಾಲಿಕೆಯಿಂದ ಅಲರ್ಟ್ - Tunga overflow, Palike alert
ತುಂಗಾ ಜಲಾನಯನ ಪ್ರದೇಶದಲ್ಲಿ ಅಧಿಕ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಿಟಿಯಲ್ಲಿ ತುಂಗೆ ಮೈದುಂಬಿ ಹರಿಯುತ್ತಿದ್ದಾಳೆ ಅಧಿಕ ಮಳೆ ಹಿನ್ನೆಲೆಯಲ್ಲಿ ತುಂಗಾ ಜಲಾಶಯದಲ್ಲಿ ನೀರು ಒಳಹರಿವು ಪಡೆದುಕೊಂಡಿರುವ ತುಂಗಾ ನದಿಗೆ ಜಲಾಶಯದಿಂದ ಅಷ್ಟೇ ಪ್ರಮಾಣದಲ್ಲಿ ನೀರು ಹರಿ ಬಿಡಲಾಗುತ್ತಿದೆ
ಇಂದು ಬೆಳಿಗ್ಗೆ 80000 ಕ್ಯೂಸೆಕ್ ನೀರು ಜಲಾಶಯದಿಂದ ಹರಿದು ಬರುತ್ತಿತ್ತು ಸಂಜೆ ವೇಳೆಗೆ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ ಇದರಿಂದಾಗಿ 77 ಸಾವಿರ ಕ್ಯೂಸೆಕ್ ನೀರು ಸದ್ಯಕ್ಕೆ ಹರಿದು ಬರುತ್ತಿದೆ ಶೃಂಗೇರಿ ಕಿಗ್ಗ ತೀರ್ಥಳ್ಳಿ ಭಾಗದಲ್ಲಿ ಆದ್ರ ಮಳೆಯ ಆರ್ಭಟ ಮುಂದುವರೆದಿದೆ.
ಗಾಜನೂರಿನ ತುಂಗಾ ಜಲಾಶಯದಿಂದ 22 ಗೇಟುಗಳನ್ನು 1.5 ಮೀಟರ್ ಎತ್ತರದಷ್ಟು ಏರಿಸಿ ನದಿಗೆ ಹರಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ಮಳೆಯ ಆರ್ಭಟ ಕೊಂಚ ತಗ್ಗಿರುವುದರಿಂದ ಇದರ ಪರಿಣಾಮ ಅಷ್ಟೇನೂ ಕಾಣಿಸುತ್ತಿಲ್ಲ.
ಮಹಾನಗರ ಪಾಲಿಕೆಯಿಂದ ಅಲರ್ಟ್
77,000 ಕಿಸೆ ನದಿಗೆ ನೀರು ಹರಿಯುತ್ತಿರುವುದ ಕಾರಣದಿಂದ ನಗರದ ಹಲವು ಬಡಾವಣೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ 2025 ನೇ ಸಾಲಿನಲ್ಲಿ ಇದು ಮೊದಲ ಅಲರ್ಟ್ ಆಗಿದ್ದು ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗುತ್ತಿದೆ. ಸೀಗೆಹಟ್ಟಿ, ಇಮಾಮ್ ಬಾಡಾ, ಬಿಬಿ ಸ್ಟ್ರೀಟ್ ಮೊದಲಾದ ಬಡಾವಣೆಗಳಲ್ಲಿ ಪಾಲಿಕೆ ಅಲರ್ಟ್ ಘೋಷಿಸಿದೆ. ಸುರಕ್ಷಿತ ಸ್ಥಳಕ್ಕೂ ತೆರಳುವಂತೆ ಕೋರಲಾಗುತ್ತಿದೆ.
Tunga overflow, Palike alert