SUDDILIVE || HOSANAGARA
ಅಬ್ಬಿಫಾಲ್ಸ್ ನಲ್ಲಿ ನೀರಿಗೆ ಇಳಿದಿದ್ದ ಯುವಕ ಶವವಾಗಿ ಪತ್ತೆ-Body of young man found after falling into water at Abbey Falls
ಗಿಣಿಕಲ್ ಅಬ್ಬಿ ಫಾಲ್ಸ್ ಗೆ ಪ್ರವಾಸಕ್ಕೆ ಬಂದಿದ್ದ ಯುವಕ ನೀರು ಪಾಲು ಆಗಿದ್ದು ಆತ ಹೆಣವಾಗಿ ಪತ್ತೆಯಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರಿನಲ್ಲಿರುವ ಗಿಣಿಕಲ್ ಅಬ್ಬಿ ಫಾಲ್ಸ್ ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅವಘಡ ಸಂಭವಿಸಿದೆ.
ಬೆಂಗಳೂರಿನ ನಾಗರಬಾವಿಯ ಖಾಸಗಿ ಕಂಪನಿ ಉದ್ಯೋಗಿ ರಮೇಶ್ (33) ಎಂಬುವರು ಗಿಣಿಕಲ್ ನಲ್ಲಿ ನೀರಿಗೆ ಇಳಿದಿದ್ದರು. ಪ್ರವಾಸಕ್ಕೆಂದು ಯಡೂರಿನ ಅಬ್ಬಿ ಫಾಲ್ಸ್ ನಲ್ಲಿ ರಮೇಶ್ ಇಳಿದಿದ್ದರು. ಯಡೂರಿನ ಅಬ್ಬಿ ಜಲಪಾತದಲ್ಲಿ ನೀರಿಗೆ ಇಳಿದಿದ್ದ ರಮೇಶ್ ನೀರುಪಾಲಾಗಿದ್ದಾರೆ. ಆತನಿಗಾಗಿ ಶೋಧಕಾರ್ಯ ಶರಂಭಿಸಲಾಗಿದೆ. ಆತ ಶವವಾಗಿ ಪತ್ತೆಯಾಗಿದ್ದಾನೆ.
ಸ್ಥಳಕ್ಕೆ ನಗರ ಪೊಲೀಸರ ಭೇಟಿ - ಪರಿಶೀಲನೆ ನಡೆಸಿದ್ದಾರೆ. ಮಳೆಗಾಲದಲ್ಲಿ ಈ ಜಾಗಕ್ಕೆ ಪ್ರವೇಶಿಸಲು ನಿಷೇಧವಿದೆ. ಆದರೂ ಫಾಲ್ಸ್ ಗೆ ಹುಡುಕಿಕೊಂಡು ಬರುವ ಪ್ರವಾಸಿಗರು ನೀರಿಗೆ ಇಳಿಯುತ್ತಾರೆ. ಪ್ರತಿ ವರ್ಷದ ಮಳೆಗಾಲಕ್ಕೆ ಇಲ್ಲೊಂದು ಹೆಣ ಬೀಳುತ್ತೆ. ಆದರೆ ಯಾವ ಅರಣ್ಯ ಇಲಾಖೆ ಸಿಬ್ಬಂದಿಗಳು ಇರೊದಿಲ್ಲ. ಪರಿಣಾಮ ನಿಷೇಧಾಜ್ಞೆ ಯಾರಿಗೆ ಜಾರಿಯಾಗುತ್ತೆ ಎಂಬುದೇ ಗೊತ್ತಿಲ್ಲ.
Body of young man found after falling into water at Abbey Falls