ad

ವೀಕೆಂಡ್ ಗೆ ಪ್ರವಾಸಿಗರ ಸಂಖ್ಯೆ ಹೆಚ್ಚು ಸಿಗಂದೂರಿನಲ್ಲಿ ಕಿಲೋಮಿಟರ್ ಗಟ್ಟಲೆ ಟ್ರಾಫಿಕ್ ಜಾಮ್ ! Kilometer-long traffic jam in Sigandur

 SUDDILIVE || SHIVAMOGGA

ವೀಕೆಂಡ್ ಗೆ ಪ್ರವಾಸಿಗರ ಸಂಖ್ಯೆ ಹೆಚ್ಚು ಸಿಗಂದೂರಿನಲ್ಲಿ ಕಿಲೋಮಿಟರ್ ಗಟ್ಟಲೆ ಟ್ರಾಫಿಕ್ ಜಾಮ್ !Kilometer-long traffic jam in Sigandur due to high number of tourists for the weekend!

Siganduru, trafficjam


ಶಿವಮೊಗ್ಗದ ಪ್ರವಾಸತಾಣಗಳು ತುಂಬಿ ತುಳುಕುತ್ತಿವೆ. ಜೋಗ, ಸಿಗಂದೂರು ದೇವಸ್ಥಾನ, ಆಗುಂಬೆ ಮೊದಲಾದ ಪ್ರವಾಸಿತಾಣಗಳು ವೀಕೆಂಡ್ ಮಸ್ತಿಗೆ ಹೌಸ್ ಫುಲ್ ಆಗಿದೆ. ಜೋಗದಲ್ಲಿ ಪ್ರವಾಸಿಗರ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಮಾಮೂಲಿಯಾಗಿ ಜೋಗದಲ್ಲಿ ಮೂರು ಸಾವಿರ ನಾಲ್ಕು ಸಾವಿರ ಜನ ಭೇಟಿ ನೀಡಿದ್ದರೆ, ಇಂದು ಅದರ ಸಂಖ್ಯೆ ದುಪಟ್ಟಾಗಿದೆ. ಸುಮಾರು 13 ಸಾವಿರ ಜನರು ಬೇಟಿ ನೀಡಿದ್ದಾರೆ. ಎಂದಿನಂತೆ ಜಲಪಾತ ಕಣ್ಣಮುಚ್ಚಾಲೆ ಆಡಿದೆ. ಮಳೆಯೂ ಕಡಿಮೆಯಿದ್ದರಿಂದ ಜಲಪಾತದ ವೈಯಾರ ಹೆಚ್ಚಾಗಿದೆ. 




ಇನ್ನೂ ಸಿಗಂದೂರು ಸೇತುವೆ ಉದ್ಘಾಟನೆಗೊಂಡು ಮೊದಲನೇವಾರಕ್ಕೆ ಕಾಲಿಟ್ಟಿದೆ. ಪರಿಣಾಮ ಸಿಗಂದೂರು ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಸಿಗಂದೂರಿಗೆ ಮೊದಲು ಗಂಟೆಗಟ್ಟಲೆ ಕಾದು ದರ್ಶನ ಪಡೆಯುತ್ತಿದ್ದ ಭಕ್ತರು ಇಂದು ಸೇತುವೆಯ ಪರಿಣಾಮ ದೇವಸ್ಥಾನಕ್ಕೆ ಏಕಾಏಕಿ ನುಗ್ಗಿ ಬಂದಿದ್ದಾರೆ. 

ಎರಡು ಎಕ್ಕಲೆಗಳಲ್ಲಿ ಕಾರುಗಳು ಸರದಿ ಸಾಲಿನಲ್ಲಿ ನಿಂತಿದೆ. ದರ್ಶನ ಮುಗಿಸಿಕೊಂಡು ವಾಪಾಸ್ ಹೋಗಲು ಭಕ್ತರು ಪರದಾಡುವಂತಾಗಿದೆ. ಸಿಗಂದೂರು ಸೇತುವೆಯ ಮೇಲೆ ಫೊಟೊ ತೆಗೆಯಿಸಿಕೊಳ್ಳುವ ಗೀಳಿಗೆ ಬಿದ್ದ ಪರಿಣಾಮ ಮತ್ತು ಇತರೆ ಕಾರಣಗಳು ಸಿಗಂದೂರಿನಲ್ಲಿ ಜಾತ್ರೆಯಂತಾಗಿದೆ. ದಿನಾಲು 1 ಸಾವಿರ ಜನರ ಭೇಟಿಗೆ ಸೀಮಿತವಾಗಿದ್ದ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ. 

Kilometer-long traffic jam in Sigandur


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close