ad

ಗಣಪತಿ ಮತ್ತು ಈದ್ ನಲ್ಲಿ ದುರ್ನಡತೆ ತೋರಿದವರನ್ನ ಕರೆಯಿಸಿ ವಾರ್ನ್!Call and warn those who misbehave on Ganpati and Eid!

SUDDILIVE || SHIVAMOGGA

ಗಣಪತಿ ಮತ್ತು ಈದ್ ನಲ್ಲಿ ದುರ್ನಡತೆ ತೋರಿದವರನ್ನ ಕರೆಯಿಸಿ ವಾರ್ನ್!Call and warn those who misbehave on Ganpati and Eid!

Eid, Ganapati        

ಮುಂಬರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ, ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದುರ್ನಡತೆ ವ್ಯಕ್ತಿಗಳ ವಿರುದ್ಧ ಶಿವಮೊಗ್ಗ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ, ಈ ಹಿಂದಿನ ವರ್ಷಗಳ ಗಣಪತಿ ಹಾಗೂ ಈದ್ ಮಿಲಾದ್ ವಿಡಿಯೋಗಳನ್ನು ವೀಕ್ಷಿಸಿ, ದುರ್ನಡತೆ ತೋರಿದ ವ್ಯಕ್ತಿಗಳನ್ನು ಗುರುತಿಸಿ ಹಾಗೂ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಚಟುವಟಿಕೆ ಇರುವ ರೌಡಿ ಆಸಾಮಿಗಳು ಮತ್ತು ಕಮ್ಯುನಲ್ ಗೂಂಡಾ ಆಸಾಮಿಗಳನ್ನು ಠಾಣೆಗೆ ಕರೆಸಿ, ಸದರಿಯವರಿಗೆ ಮುಂಬರುವ ದಿನಗಳಲ್ಲಿ ಹಾಗೂ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ಯಾವುದೇ ರೀತಿಯ ದುರ್ನಡತೆ ತೋರದಂತೆ, ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಮತ್ತು ಪ್ರಕರಣಗಳಲ್ಲಿ ಭಾಗಿಯಾಗಬಾರದು ಹಾಗೂ  ಉತ್ತಮ ನಡವಳಿಕೆಯಿಂದರಲು ಸೂಚಿಸಿರುತ್ತದೆ.

ಎಲ್ಲರ ವಿರುದ್ಧ ಪೊಲೀಸ್ ಇಲಾಖೆಯು ಸೂಕ್ತ ನಿಗಾವಹಿಸಿದ್ದು, ಒಂದು ವೇಳೆ ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘನೆ ಮಾಡಿದರೆ / ಕಾನೂನು ಬಾಹಿರ ಕೃತ್ಯದಲ್ಲಿ* ಭಾಗಿಯಾಗುವುದು, ಸಾರ್ವಜನಿಕರಿಗೆ ಉಪಟಳ ನೀಡುವುದು, ಹಬ್ಬ ಹರಿದಿನಗಳಲ್ಲಿ ಹಾಗೂ ಮೆರವಣಿಗೆ ಸಂದರ್ಭದಲ್ಲಿ ದುರ್ನಡತೆ  ತೋರುವುದು  / ಉಪಟಳ ನೀಡುವುದು ಕಂಡು ಬಂದಲ್ಲಿ ಹಾಗೂ ಕಿಡಿಗೇಡಿತನ ಮಾಡಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ  ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿರುತ್ತದೆ.

Call and warn those who misbehave on Ganpati and Eid!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close