ad

ನಮ್ಮ ಕೆಲಸವನ್ನ ಕಾಂಗ್ರೆಸ್ ಹೊಗಳಲು ಸಾಧ್ಯವಾ? ಪೂಜಾರಿ-Can Congress praise our work? Poojary

SUDDILIVE || SHIVAMOGGA

ನಮ್ಮ ಕೆಲಸವನ್ನ ಕಾಂಗ್ರೆಸ್ ಹೊಗಳಲು ಸಾಧ್ಯವಾ? ಪೂಜಾರಿ-Can Congress praise our work? Poojary

Poojari, praises

ಮೋದಿ ಆಡಳಿತದ ವೇಳೆ 24 ಕೋಟಿ ಕುಟುಂಬಗಳು ಬಡತನ ರೇಖೆಯಿಂದ ಮೇಲೆ ಬಂದಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. 

ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಬಂಜಾರ ಹಾಲ್ ನಲ್ಲಿ ಶಿವಮೊಗ್ಗ-ಚಿಕ್ಕಮಗಳೂರು-ಉತ್ತರ ಕನ್ನಡ ಜಿಲ್ಲೆಯ ಕಾರ್ಯಕರ್ತರ ಪ್ರಭುದ್ಧರ  ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.

ಶೌಚಾಲಯಗಳು ಇರಲಿಲ್ಲ. 14 ಕೋಟಿ ಶೌಚಾಲಯಗಳನ್ನ ದೇಶದಲ್ಲಿ ನೀಡಲಾಗಿದೆ. ಕೇಂದ್ರ ಸರ್ಕಾರ 7 ಲಕ್ಷ ಮನೆ ಕಟ್ಟಿಕೊಡಲು ಆಯಾ ರಾಜ್ಯಗಳಿಗೆ ಸೂಚಿಸಿವೆ. ಆದರೆ ನಮ್ಮ ರಾಜ್ಯ ಸರ್ಕಾರ ಆವಾಜ್ ಯೋಜನೆ ಸಹ ಜಾರಿಯಾಗಲು ಬಿಡದೆ ಜನರಿಗೆ ಮೋಸ ಮಾಡಿದೆ. ಮನೆ ಹಂಚಿಕೆಗೂ ಶಾಸಕ ಪಾಟೀಲರು ಲಂಚ ಕೊಡಬೇಕಿದೆ ಎಂದು ಹೇಳಿದ್ದಾರೆ. ಅದೇ ರಾಜ್ಯ ಸರ್ಕಾರದ ಭ್ರಷ್ಠತೆ ಕಂಡು ಬರುತ್ತಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಪರಿಣಾಮ ಕಾರಿ ಕೆಲಸ ಮಾಡುತ್ತಿದೆ.  ಮನೆಕಟ್ಟಿದ್ದರೆ ಮೋದಿದು ಎಂದು ಹೇಳಬಹುದು. ಹಾಗಾಗಿ ಅದನ್ನ ಜಾರಿಗೆ ತಾರದೆ ರಾಜ್ಯ ಸರ್ಕಾರ ಜನರ ಕಣ್ಣಿಗೆ ಮಣ್ಣೆರುಚಿತ್ತಿದೆ.   ಜಲಜೀವನ್ ಯೋಜನೆಗೆ 72 ಸಾವಿರ ಕೋಟಿ ಬಿಡುಗಡೆ ಮಾಡಿದೆ. ಈ ಕುಡಿಯುವ ಯೋಜನೆಯನ್ನೇ ರಾಜ್ಯಸರ್ಕಾರ ವಿಫಲ ಮಾಡಿದೆ. ಮನೆಗೆ ಒಂದು ಗಂಟೆಯೂ ನೀರು ಬರಿತ್ತಿಲ್ಲ. ರಾಜ್ಯ ಸರ್ಕಾರದ ಗುತ್ತಿಗೆದಾರರಿಂದ ಲಂಚ ಹೊಡೆದಿದೆ ಎಂದರು.

ರಾಜ್ಯದಲ್ಲಿ 58 ಲಕ್ಷ ಕುಟುಂಬದವರಿಗೆ ಕೃಷಿ ಸಮ್ಮಾನ್ ಯೋಜನೆ ಬರುತ್ತದೆ. ಬಿಎಸ್ ವೈ ಸರ್ಕಾರದಿಂದಲೂ ರೈತರಿಗೆ ಧನ ಸಹಾಯ ಬರುತ್ತಿತ್ತು. ಸಿದ್ದರಾಮಯ್ಯ ಅದನ್ನೂ ಬಂದ್ ಮಾಡಿದರು. ಬೆಳೆ ವಿಮಾ ಬರ್ತಾಯಿದೆ. ಕೇಂದ್ರ ಸರ್ಕಾರದ ಇಂತಹ ಯೋಜನೆಯ ಬಗ್ಗೆ ಜನರ ಮನಕ್ಕೆ ಮುಟ್ಟಿಸುವ ಹಾಗೆ ನಾವುಗಳು ಕೆಲಸ ಮಾಡಬೇಕಿದೆ.  ಕೇಂದ್ರ ಸರ್ಕಾರ 22 ಲಕ್ಷ ಕ್ವಿಂಟಾಲ್ ಅಕ್ಕಿಯನ್ನ ಕೊಟ್ಟಿದ್ದರಿಂದ ರಾಜ್ಯದಲ್ಲಿ ಪ್ರತಿಕುಟುಂಬಕ್ಕೆ 5 ಕೆಜಿ ನೀಡಲಾಗುತ್ತಿದೆ ಎಂದರು.

ಸಿಗಂದೂರು ಸೇತುವೆ ನಿರ್ಮಾಣದ ಬಗ್ಗೆ ಕಾಂಗ್ರೆಸ್ ಹೊಗಳಲು ಸಾಧ್ಯವಿದೆಯಾ? ಅವರ ಟೀಕೆಯನ್ನ ನಮ್ಮ ಶತೃಗಳು ಒಪ್ಪಲು ಸಾಧ್ಯವಿಲ್ಲ. ಸಂಸದ ರಾಘವೇಂದ್ರ ಹೀಗೆ ಮುಂದು ವರೆದರೆ ಇಂದಲ್ಲ ನಾಳೆ  ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಬಂದೇ ಬರುತ್ತದೆ ಎಂದರು. 

2014 ರಲ್ಲಿ 5960 ಗ್ರಾಂಪಂನಲ್ಲಿ 34 ಪಂಚಾಯಿತಿಗಳಲ್ಲಿ ಫೈಬರ್ ಇಂಟರ್ ನೆಟ್ ಬರುತ್ತಿತ್ತು. ಇಂದು ಗ್ರಾಪಂನ್ನ ಕತ್ತುಹಿಸುಕುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ಆಟೋ ಚಾಲಕರು,  ಗಾರೆ ಮಾಡುವವರಿಗೆ ಸಂಧ್ಯಾ ಸುರಕ್ಷೆಯನ್ನ ಬಿಎಸ್ ವೈ ಮಾಡಿದ್ದರು. ರಾಜ್ಯ ಈಗ ಪುನರ್ ಪರಿಶೀಲಿಸಲು ಆದೇಶಿಸಿದೆ. ಇದಕ್ಕೆ ಬಿಜೆಪಿ ಸುಮ್ಮನೆ ಕೂರಬೇಕಾ ಎಂದು ಪ್ರಶ್ನಿಸಿದರು‌.

ಸ್ವಾತಂತ್ರ್ಯ ಬರುವ ಮುಂಚೆ ಕಾಂಗ್ರೆಸ್ ಮತ್ತು ಆರ್ ಎಸ್ ಎಸ್ ಎರಡೂ ಇತ್ತು. ಕಾಂಗ್ರೆಸ್ ಬರ್ತಾ ಬರ್ತಾ ಬರ್ತ ವಿಧಾನಸಭೆಯಲ್ಲಿ ಪಾಕ್ ಗೆ ಜೈ ಎನ್ನುವಂತೆ ಮಾಡಿದರೆ. ಅದೇ ವಿಧಾನ ಸಭೆಯಲ್ಲಿ ಆರ್ ಎಸ್ ಭಾರತ ಮಾತಕೀ ಜೈ ಎಂದು ಸೃಷ್ಠಿಸಿತು. ಇದಕ್ಕೆ ಖರ್ಗೆ ಉತ್ತರಿಸುತ್ತಾರಾ ಎಂದು ಟಾಂಗ್ ನೀಡಿದರು.

Can Congress praise our work? Poojary

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close