SUDDILIVE || SHIVAMOGGA
ಶಿವಮೊಗ್ಗದ ಜನತೆಗೆ ರೈಲ್ವೆ ಪ್ರಯಾಣದಲ್ಲಿ ಸಿಹಿ ಸುದ್ದಿ ನೀಡಿದ ಸಂಸದರು-MP gives good news about railway travel for the people of Shimoga
ವಂದೇ ಬಾರತ್ ಶಿವಮೊಗ್ಗಕ್ಕೆ ಬರುತ್ತಾ? ಬರುವುದಾದರೆ ಯಾವಾಗ ಬರುತ್ತೆ? ಎಲ್ಲಿಂದ ಎಲ್ಲಿಗೆ ಚಲಿಸುತ್ತೆ ಎಂದು ಪ್ರಶ್ನೆ ಕೇಳುವವರಿಗೆ ಸಂಸದ ರಾಘವೇಂದ್ರ ಸಿಹಿ ಸುದ್ದಿ ನೀಡಿದ್ದಾರೆ.
ನಗರದ ಬಂಜಾರ ಸಭಾಂಗಣದಲ್ಲಿ ಬಿಜೆಪಿಯು ಶಿವಮೊಗ್ಗ, ಚಿಕ್ಕಮಗಳೂರು ಉತ್ತರ ಕನ್ನಡ ಜಿಲ್ಲೆಯ ಕಾರ್ಯರ್ತರ ಪ್ರಬುದ್ಧರ ಸಭೆಯಲ್ಲಿ ಭಾಗವಹಿಸಿ ಮಾತಮಾಡಿ, ಶಿವಮೊಗ್ಗದಲ್ಲಿ ರೈಲ್ವೆ ಕೋಚಿಂಗ್ ಡಿಪೋ ಜನವರಿಯಲ್ಲಿ ಉದ್ಘಾಟನೆಯಾಗಲಿದೆ. ಉದ್ಘಾಟನೆ ಆದ ವೇಳೆ ಶಿವಮೊಗ್ಗದಿಂದ ತಿರುಪತಿ, ಬೆಂಗಳೂರಿಗೆ , ಕೇರಳದ ಎರ್ನಾಕುಲಂಗೆ, ಬಿಹಾರ್ ಛಂಡಿಘಡ್ ಗೆ ಮುಮದಿನ ಫೆಬ್ರವರಿ ತಿಂಗಳಲ್ಲಿ ವಂದೇ ಭಾರತ್ ಚಲಿಸಲಿದೆ. ರೈಲ್ವೆ ಇಲಾಖೆ ಅದಕ್ಕೆ ಟೈಮ್ ಟೇಬಲ್ ಹಾಗೂ ರೈಲಿನ ಸಂಖ್ಯೆಯನ್ನೂ ನೀಡಿ ಸಿದ್ದ ಮಾಡಿಟ್ಟುಕೊಂಡಿದೆ ಎಂದು ತಿಳಿಸಿದ್ದಾರೆ.
ತಾಳಗುಪ್ಪದಿಂದ ಹುಬ್ಬಳಿಗೆ 150 ಕಿಮಿ ದೂರಕ್ಕೆ ರೈಲು ವ್ಯವಸ್ಥೆಗೆ ಸರ್ವೆ ನಡೆದಿದೆ. ಬದಲೀ ಜಮೀನ್ ಆಗಬೇಕಿದೆ ತಾಳಗುಪ್ಪದಿಂದ ಹೊನ್ನಾವರ ಕ್ಕೆ 73% ಅರಣ್ಯ ಬರುತ್ತಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಅನುಮತಿ ಪಡೆಯಬೇಕಿದೆ ಎಂದ ಸಂಸದರು ಬೀರೂರು-ಶಿವಮೊಗ್ಗದ ನಡುವೆ ಡಬ್ಬಲ್ ಟ್ರ್ಯಾಕ್ ಕಾಮಗಾರಿ ನಡೆಯಬೇಕಿದೆ. ಮತ್ತು ಭದ್ರಾವತಿ ಚಿಕ್ಕಜಾರು ನಡುವೆ ಟ್ರ್ಯಾಕ್ ಆಗಲಿದೆ. ಈ ಅಭಿವೃದ್ಧಿ ಇಲ್ಲಿ ಮಾತ್ರವಲ್ಲ. ದೇಶದ ಎಲ್ಲಡೆ ಆಗ್ತಾಯಿದೆ. ಇಚ್ಚಾಶಕ್ತಿಯಿದ್ದಲ್ಲಿ ದೇಶ ಕಟ್ಟುವ ಬಗ್ಗೆ ಪ್ರಧಾನಿ ಮೋದಿಯಿಂದಲೇ ಸಾಧ್ಯವೆಂದು ಎಂದರು.
ಇತಿಹಾಸವನ್ನಮರೆತವರು ಇತಿಹಾಸವನ್ನ ಸೃಷ್ಠಿಸಕಾರರು ಎಂದು ಅಂಬೇಡ್ಕರ್ ಹೇಳಿದ್ದರು. ಇತಿಹಾಸ ಮರೆತ ಕಾರಣ ಬ್ರಿಟೀಶ್ ಆಳ್ವಿಕೆ ನಮ್ಮ ದೇಶ ನಡೆಸಿತು. ಪಾಶ್ಚಿಮಾತ್ಯ ಸಂಸ್ಕೃತಿಯನ್ನ ನೀಡಿದರು. ಇದನ್ನ ಅರೆತುಕೊಂಡು ದೇಶದ ಜನ 2014 ರಲ್ಲಿ ಪ್ರದಾನಿ ಮೋದಿ ಸರ್ಕಾರಕ್ಕೆ ಬಹುಮತ ನೀಡಿತು ಎಂದರು.
ಭ್ರಷ್ಠ ಯುಪಿಎ ಸರ್ಕಾರ ಖಾಲಿ ಕೀಯನ್ನಮೋದಿಗೆ ನೀಡಿತ್ತು. ಮೋದಿ ಸರ್ಕಾರ ಬಂದ ಮೇಲೆ ಮೂಲಭೂತ ಸೌಕರ್ಯ ನೀಡಲಾಗಿತ್ತು. ಬಾಂಗ್ಲ, ಪಾಕ್ ಚೀನಾದ ಕಿರಿಕಿರಿ ಇದ್ದಾಗಲೂ ಕೂಡ ದೇಶದ ಆರ್ಥಿಕತೆಯನ್ನ ಭದ್ರ ಪಡಿಸಿದ್ದು ಮೋದಿ ಒಬ್ಬರೇ ಎಂದರು.
5.7 ಕೋಟಿ ಇಂಕಮ್ ಟ್ಯಾಕ್ಸ್ ಪೇಯರ್ ಇದ್ದಿದ್ದು ಈಗ 15.7 ಕೋಟಿ ಜನರಿದ್ದಾರೆ. 8.61 ಕೋಟಿ ಇನ್ಕಮ್ ಟ್ಯಾಕ್ಸ್ ರಿಟರ್ನರ್ ಆಗಿದ್ದಾರೆ. ಹಿಂದಿನ ಯುಪಿಎ ಸರ್ಕಾರದ ಸ್ಲಾಬ್ ಗಿಂತ ಕಡಿಮೆ ಮಾಡಿದ್ದು ಮೋದಿ ಸರ್ಕಾರವಾಗಿದೆ.
ಜು.14 ರಂದು ಗಡ್ಕರಿ ಮತ್ತು ಜೋಶಿ ಸಾಗರದ ಅಂಬರಗೋಡ್ಲು -ಕಳಸವಳ್ಳಿ ಸೇತುವೆಗೆ ಸಿಗಂದೂರು ಚೌಡೇಶ್ವರಿ ಎಂದು ನಾಮಕರಣಕ್ಕೆ ಎನ್ ಒಸಿ ನೀಡಿದರೆ ಕೇಂದ್ರದಿಂದ ಕೊಡಿಸಬಹುದಾಗಿದೆ. 2008 ರಿಂದ 2023 ರವರೆಗೆ ಅಭಿವೃದ್ಧಿ ಹೇಗೆ ಆಯಿತು ಮತ್ತು ಹಿಙದೆ ಯಾಕೆ ಆಗಲಿಲ್ಲ ಎಂದು ಅವಲೋಕ ನಡೆಸುವಂತೆ ಕೋರಿದರು. ನಂತರ ವೇಳೆ ಮೂವರಿಗೆ ಸನ್ಮಾನಿಸಲಾಯಿತು.
ಸಿಟಿ ರವಿ ಮಾತು
ನಂತರ ಮಾಜಿ ಸಚಿವ ಸಿಟಿ ರವಿ ಮಾತನಾಡಿ, ಮೋದಿ ಪ್ರಧಾನಿಯಾದರೆ ದೇಶ ಬಿಡುವ ಮಾತನಾಡಿದವರೆಲ್ಲಾ ಬಿಜೆಪಿ ಜೊತೆಗೆ ಬಂದರು ಎಂದರು ಕಾರಣ ಮೋದಿಯ ಪಾರದರ್ಶಕತೆ ಆಡಳಿತ ಮತ್ತು ಭ್ರಷ್ಠಚಾರವಿಲ್ಲದ ಸರ್ಕಾರದ ಹೆಗ್ಗಳಿಕೆ ಕಾರಣ ಎಂದರು.
ಆಡಳಿತದಲ್ಲಿ ಸುಧಾರಣೆ ತರಲಾಯಿತು. ಜಿಎಸ್ ಟಿ ತರಲಾಯಿತು, ಡಿಬಿಟಿ ಅನುಷ್ಠಾನಗೊಳಿಸಿದ ಕಾರಣ ಕೇಂದ್ರದಿಂದ ಕಳುಹಿಸುವ ಹಣ ಜನರಿಗೆ ನೇರವಾಗಿ ಹಣ ತಲುಪುತ್ತಿದೆ. ಮೇಲಿನವರು ಸಹ ಮೈ ನಹಿ ಕಾವುಂಗಾ ಖಾನೇದುಂಗಾ ಎಂಬ ವಾಕ್ಯದೊಡನೆ ಕೆಲಸ ಮಾಡುತ್ಯಿರುವ ಪರಿಣಾಮ ಈ ಸಾಧ್ಯತೆಗಳು ಕಂಡು ಬರುತ್ಯಿದೆ. ಡಿಜಿಟಲ್ ನಲ್ಲಿ ಕ್ರಾಂತಿ ತರಲಾಯಿತು. ಹಣದಲ್ಲಿ ಬದಲಾಯಿತು ಮೇಕಿಂಗ್ ಇಂಡಿಯಾದಲ್ಲಿ 99% ಮೊಬೈಲ್ ಗಳನ್ನ ಇಲ್ಲೇ ತಯಾರಾಗುತ್ತಿದೆ.
ಈಹಿಂದಿನ ಸರ್ಕಾರ ಕೇವಲ 53 ಸಾವಿರ ಕಿಮಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದರೆ, ಈಗಿನ ಸರ್ಕಾರ 99 ಸಾವಿರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೆಚ್ಚಾಗಿಸಿದೆ. ಕಲ್ಬುರ್ಗಿ, ಶಿವಮೊಗ್ಗ, ಬಿಜಾಪುರ ಮೈಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಯಿತು. 76 ಏರ್ಪೋರ್ಟ್ ಬದಲು 157 ವಿಮಾನನಿಲ್ದಾಣ ಆಗಿದೆ. ರೈಲ್ವೆ ನಿರ್ಮಾಣದಲ್ಲೂ ಕ್ರಾಂತಿಕಾರಿ ಆಗಿದೆ. 53 ಕೋಟಿಯ ಜನರನ್ನ ಬ್ಯಾಂಕ್ ಖಾತೆಯನ್ನ ತೆರೆಯಿಸುವ ಜೊತೆ ಜೋಡಣೆ ಮಾಡಲಾಯಿತು ಎಂದರು.
2014 ರಲ್ಲಿ 71 ಶತಕೋಟಿ ಬಂಡವಾಳವಾಗಿತ್ತು. ಈಗ 600 ಶತಕೋಟಿ ಬಂಡವಾಳ ಹೂಡಿಕೆಯಾಗಿತ್ತು. ಆಗ ದೇಶ 11 ನೇ ಆರ್ಥಿಕ ಶಕ್ತಿಯಾಗಿತ್ತು. ಈಗ ಜಪಾನ್ ನ್ನ ಹಿಂದಾಕಿ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಜರ್ಮನಿಯನ್ನ ಹಿಂದಾಕಬಹುದು ಆದರೆ ಮುಂದೆ ಬೆಳೆಯಲು ಸವಾಲಿದೆ ಎಂದರು.
MP gives good news about railway travel for the people of Shimoga