ad

ಪೌರಕಾರ್ಮಿಕರ ಪ್ರತಿಭಟನೆಗೆ ರಾಜ್ಯಾಧ್ಯಕ್ಷ ಬಲ-State President supports civic workers' protest

 SUDDILIVE || SHIVAMOGGA

ಪೌರಕಾರ್ಮಿಕರ ಪ್ರತಿಭಟನೆಗೆ ರಾಜ್ಯಾಧ್ಯಕ್ಷ ಬಲ ರಾಜ್ಯಾಧ್ಯಕ್ಷರ-State President supports civic workers' protest

ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ತಮ್ಮ ನ್ಯಾಯಯುತ ಬೇಡಿಕೆಯನ್ನು ಇಡೇರಿಸುವಂತೆ ಆಗ್ರಹಿಸಿ ಇಂದು  ಶಿವಮೊಗ್ಗ ಮಹಾನಗರ ಪಾಲಿಕೆ ಮುಂಭಾಗ ಮಹಾನಗರ ಪಾಲಿಕೆ ನೌಕರರು ಮುಷ್ಕರ ನಡೆಸಿದರು.

ಮಹಾನಗರ ಪಾಲಿಕೆಗಳ ನೌಕರರ ಸಂಘದ ರಾಜ್ಯ ಸಮಿತಿ ಕರೆಯ ಮೇರೆಗೆ ಹಮ್ಮಿಕೊಂಡಿದ್ದ ಈ ಮುಷ್ಕರದಲ್ಲಿ   ಸ್ವಚ್ಛತಾ ಕಾರ್ಮಿಕರೂ ಸೇರಿದಂತೆ ಪಾಲಿಕೆಯ ಎಲ್ಲಾ ವಿಭಾಗಗಳ ನೂರಾರು ನೌಕರರು ಪಾಲ್ಗೊಂಡಿದ್ದರು. ಈ ವೇಳೆ ಪ್ರತಿಭಟನಾಕಾರರು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಶೀಘ್ರವೇ ಇಡೇರಿಸುವಂತೆ ತಮ್ಮ ಬೇಡಿಕೆಯ ವಿವಿಧ ಫಲಕಗಳನ್ನು ಹಿಡಿದುಕೊಂಡು ಘೊಷಣೆಯನ್ನು  ಕೂಗಿದರು. ವಿಷೇಶವೆಂದರೆ ಈ ಪ್ರತಿಭಟನೆಯಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್​ ಷಡಾಕ್ಷರಿ ಸಹ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್​ ಷಡಾಕ್ಷ ರಿನೌಕರರ 6 ಬೇಡಿಕೆಗಳು ತುಂಬಾ ಸರಳ ಬೇಡಿಕೆಗಳಾಗಿದ್ದು ರಾಜ್ಯ  ಸರ್ಕಾರ ಅದನ್ನು  ಸುಲಭವಾಗಿ ಈಡೇರಿಸಬಹುದು   ಈ ನೌಕರರರ ಬೇಡಿಕೆಗಳು ನೈಜ ವಾಗಿರುವುದರಿಂದ ನಾನು ಸಹ ನೌಕರರಿಗೆ ಬೆಂಬಲವನ್ನು ಸೂಚಿಸುತ್ತಿದ್ದೇನೆ. ಹಾಗೆಯೇ ರಾಜ್ಯದ ಸರ್ಕಾರಿ ನೌಕರರ ಸಂಘ ಮಹಾನಗರ ಪಾಲಿಕೆ ಜೊತೆ ಕೈ ಜೋಡಿಸುತ್ತದೆ. ಮಹಾನಗರ ಪಾಲಿಕೆಯ ಎಲ್ಲಾ ನೌಕರರು ಸಹ ಬಹಳಾ ಹುಮ್ಮಸ್ಸಿನಿಂದ  ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇದೀಗ ರಾಜ್ಯ ಮಟ್ಟದಲ್ಲಿ ಸಹ ಇದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ಆದಷ್ಟು ಬೇಗ ಸರ್ಕಾರ ಮಧ್ಯ ಪ್ರವೇಶ ಮಾಡಿ ಗಂಭೀರವಾಗಿ ನಿರ್ಣಯ ತೆಗೆದುಕೊಂಡು ಈ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು



 ನೌಕರರರ ಬೇಡಿಕೆಗಳೇನು


7ನೇ ವೇತನ ಆಯೋಗದ ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿರುವಂತೆ ಮಹಾನಗರ ಪಾಲಿಕೆ ಅಧಿಕಾರಿ ನೌಕರರಿಗೆ ಯಥಾವತ್ತಾಗಿ ಸರ್ಕಾರ ಆರ್ಥಿಕ ಇಲಾಖೆಯಿಂದಲೇ ಅನುಧಾನವನ್ನು ಬಿಡುಗಡೆ ಮಾಡಬೇಕು

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿ ಕರಡು ಅಧಿಸೂಚನೆಯನ್ನು ಪ್ರಕಟಿಸಬೇಕು. 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಕೆ.ಜಿ.ಐ.ಡಿ, ಜಿ.ಪಿ.ಎಫ್ ಸೌಲಭ್ಯವನ್ನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ/ನೌಕರರಿಗೆ ಜಾರಿಗೊಳಿಸಬೇಕು. 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಜಾರಿಗೊಳಿಸಿರುವ ಆರೋಗ್ಯ ಸೌಲಭ್ಯದ ಜ್ಯೋತಿ / ಆರೋಗ್ಯ ಸಂಜೀವಿನಿಯನ್ನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ/ನೌಕರರಿಗೆ ಜಾರಿಗೊಳಿಸಬೇಕು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಆಯೋಜಿಸುವ ಕ್ರೀಡೆಯನ್ನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ/ನೌಕರರಿಗೆ ಆಯೋಜಿಸಬೇಕು.

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ/ನೌಕರರು ಸುಮಾರು ವರ್ಷಗಳಿಂದ ವಿವಿಧ ವೃಂದದ ಹುದ್ದೆಗಳನ್ನು ಮುಂಬಡ್ತಿ ಪಡೆಯಲು ವಂಚಿತರಾಗಿರುವುದರಿಂದ ಕೂಡಲೇ ವೃಂದವಾರು ಮುಂಬಡ್ತಿ ನೀಡುವಂತೆ ಆಗ್ರಹಿಸಿ ಪೌರಕಾರ್ಮಿಕರು ಪ್ರಭಟಿಸಿದ್ದಾರೆ. 

ಸಿಂಹಸೇನೆ ಬೆಂಬಲ

ಈ ಪ್ರತಿಭಟನೆಗೆ ಕರ್ನಾಟಕ ರಕ್ಷಣ ವೇದಿಕೆ ಸಿಂಹಸೇನೆಯು ಬೆಂಬಲಿಸಿದೆ. ಮಧುಸೂದನ್ ಮಾತನಾಡಿ, ಈ ಹಿಂದೆ ಸಂಘಟನೆ ಜಲಮಂಡಳಿಯ ಸಿಬ್ಬಂದಿಗಳ ಜೊತೆ ಪ್ರತಿಭಟಿಸಿ ಶಿವಮೊಗ್ಗ ಶಾಸಕರು ಶೂನ್ಯ ವೇಳೆ ಸರ್ಕಾರಕ್ಜೆ ಪ್ರಶ್ನಿಸುವಂತೆ ಮಾಡಿ ಸಾಧ್ಯವಾದಷ್ಟು ನ್ಯಾಯಕೊಡಿಸಲು ಪ್ರಯತ್ನಿಸಲಾಗಿತ್ತು. ಈ ದಿಸೆಯಲ್ಲೇ ಪೌರಕಾರ್ಮಿಕರ ಸಮಸ್ಯೆ ಬಗಡಹರಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ ಎಂದರು. 

State President supports civic workers' protest


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close