SUDDILIVE || SHIVAMOGGA
ಸಿಟಿ ಬಸ್ ಕಂಡಕ್ಟರ್ ಗಳ ಪರಸ್ಪರ ಹೊಡೆದಾಟ-ಬಿತ್ತು ಕೇಸ್-City bus conductors fight with each other - Lodged case
ಸಿಟಿ ಬಸ್ ಕಂಡಕ್ಟರ್ ಮೇಲೆ ಮತ್ತೋರ್ವ ಬಸ್ಸಿನ ಕಂಡಕ್ಟರ್ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗೋಪಾಳದ ಕೊನೆ ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಎಸ್.ಬಿ.ಎಂ. ಸಿಟಿ ಬಸ್ಸಿನ ಕಂಡಕ್ಟರ್ ರಾಘವೇಂದ್ರ ಎಂಬುವವರ ಮೇಲೆ ಹಲ್ಲೆಯಾಗಿದೆ.
ನಿಲ್ದಾಣದಿಂದ ಬಸ್ ತಡವಾಗಿ ಹೊರಟಿದೆ ಎಂದು ಹಿಂದಿನ ಬಸ್ಸಿನ ಕಂಡಕ್ಟರ್ ಆರೋಪಿಸಿದ್ದಾರೆ. ಬಸ್ ತಡೆದು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ ಹಿಂದಿನ ಬಸ್ಸಿನ ಕಂಡಕ್ಟರ್ ಮತ್ತು ಆತನ ಸಹಚರರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಟಿಕೆಟ್ ಕಲೆಕ್ಷನ್ ₹3500 ಹಣ ಕಳುವಾಗಿದೆ ಎಂದು ರಾಘವೇಂದ್ರ ದೂರಿನಲ್ಲಿ ಆರೋಪಿಸಿದ್ದಾರೆ
ಗಾಯಗೊಂಡಿದ್ದ ಕಂಡಕ್ಟರ್ ರಾಘವೇಂದ್ರ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
City bus conductors fight with each other - Lodged case