ad

ಪಾಲಿಕೆಯ ಕಂದಾಯ ಶಾಖೆಯ ಅರ್ಜಿಗಳ ದೂರುಗಳ ಸಂಬಂಧ ಆಯುಕ್ತರ ಸಭೆ-Commissioners meeting regarding applications

 SUDDILIVE || SHIVAMOGGA

ಪಾಲಿಕೆಯ ಕಂದಾಯ ಶಾಖೆಯ ಅರ್ಜಿಗಳ ದೂರುಗಳ ಸಂಬಂಧ ಆಯುಕ್ತರ ಸಭೆ-Commissioners' meeting regarding applications and complaints from the Revenue Branch of the Corporation

Commissioner, application

ಪಾಲಿಕೆಯ ಕಂದಾಯ ಶಾಖೆಯ ಅರ್ಜಿಗಳ ದೂರು ಪರಿಹಾರ ಸಂಬಂಧ ಆಯುಕ್ತರಿಂದ ವಲಯ ಕಚೇರಿಗಳ ಭೇಟಿ ನಡೆಯಲಿದೆ.  ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಸಾಪ್ತಾಹಿಕ ಕಂದಾಯ ಶಾಖೆ ದೂರು ಪರಿಹಾರ ಸಭೆ ನಡೆಯಲಿದೆ.

ವಲಯವಾರು A/B ಖಾತಾ ನೋಂದಣಿ, ಆಸ್ತಿ ಹಕ್ಕು ವರ್ಗಾವಣೆ, ಕಂದಾಯ ನಿಗದಿಪಡಿಸುವಿಕೆ, ಹಾಗೂ ಇತರೆ ಕಂದಾಯ ಶಾಖೆಗಳಲ್ಲಿನ ಬಾಕಿ ಅರ್ಜಿಗಳು ದೂರುಗಳು, ಅಹವಾಲುಗಳ ಪರಿಹಾರ ಸಂಬಂಧ ಪಾಲಿಕೆ ಆಯುಕ್ತರು ಸಭೆ ನಡೆಸಲಿದ್ದಾರೆ.

ವಲಯ-1 ವಿನೋಬನಗರಕ್ಕೆ ಪ್ರತಿ ಮಂಗಳವಾರ ಮದ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ, ಗೋಪಿ ವೃತ್ತದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿರುವ ವಲಯ-2ಕ್ಕೆ  ಪ್ರತಿ ಗುರುವಾರ ಮಧ್ಯಾಹ್ನ 3 ರಿಂದ  ಸಂಜೆ 5 ರವರೆಗೆ, ಪಾಲಿಕೆಯ ಕೇಂದ್ರ ಕಚೇರಿಯಲ್ಲಿರುವ ವಲಯ-3ರಲ್ಲಿ ಪ್ರತಿ ಶುಕ್ರವಾರ  ಮಧ್ಯಾಹ್ನ 3 ರಿಂದ 5 ರವರೆಗೆ ಆಯುಕ್ತರು ಸಭೆ ನಡೆಸಲಿದ್ದಾರೆ. 

ತುರ್ತು ಸಭೆ ಮತ್ತು ಸಾರ್ವಜನಿಕ ರಾಜಾ ದಿನಗಳನ್ನ ಹೊರತುಪಡಿಸಿ ಈ ಸಭೆ ನಡೆಯಲಿದ್ದು ಆಸ್ತಿ ತೆರಿಗೆ ಮಾಲೀಕರು ಕಂದಾಯ ಶಾಖೆಗೆ ಅರ್ಜಿ ದಾಖಲೆಗಳು ಹಾಗೂ ಸಂಕ್ಷಿಪ್ತ ದೂರಿನ ಸಹಿತ ವಲಯ ಕಚೇರಿಯಲ್ಲಿ ಆಯುಕ್ತರನ್ನ ಸಂಪರ್ಕಿಸಿ ತಮ್ಮ‌ಅಹವಾಲುಗಳನ್ನ ಪರಿಹರಿಸಿಕೊಳ್ಳುವಂತೆ ಕೋರಲಾಗಿದೆ. 

Commissioners' meeting regarding applications

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close