SUDDILIVE || SAGARA
ಕಾರ್ಯಕ್ರಮದ ಅಯೋಜನೆ ಮತ್ತು ಆಹ್ವಾನದಲ್ಲಿ ಲೋಪ ಆಗಿದೆ-There was a lapse in the organization and invitation of the event.
ಸಿಗಂದೂರು ತೂಗು ಸೇತುವೆ ಉದ್ಘಾಟನೆ ವಿಚಾರದಲ್ಲಿ ಸಾಗರದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮದ ಅಯೋಜನೆ ಮತ್ತು ಆಹ್ವಾನದಲ್ಲಿ ಲೋಪ ಆಗಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಎಂ ನಿನ್ನೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಸೇತುವೆ ನಿರ್ಮಾಣದ ಹಿಂದೆ ರಾಜ್ಯ ಸರ್ಕಾರದ ಪಾತ್ರವೂ ಇದೆ. ಜಾಗದ ಅನುಮತಿ ಸೇರಿದಂತೆ ಬೇರೆ ಬೇರೆ ವಿಷಯದಲ್ಲಿ ರಾಜ್ಯ ಸರ್ಕಾರದ ಕೊಡುಗೆ ಇದೆ. ಹೀಗಿದ್ದೂ ಕಾರ್ಯಕ್ರಮದ ಆಹ್ವಾನ ನೀಡುವುದರಲ್ಲಿ ಲೋಪ ಆಗಿದೆ. ಈ ಸಿಎಂ ಸಿದ್ದರಾಮಯ್ಯ ಈಗಾಗಲೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ನಾನು ಸ್ಥಳೀಯ ಶಾಸಕರೊಂದಿಗೆ ಚರ್ಚೆ ಮಾಡುತ್ತೇನೆ. ಸ್ಥಳೀಯ ಶಾಸಕರಿಗೂ ತಡವಾಗಿ ಆಹ್ವಾನ ನೀಡಲಾಗಿದೆ ಎಂಬ ಮಾಹಿತಿ ಇದೆ ಎಂದು ಅವರು ತಿಳಿಸಿದರು.
ಈ ಮಧ್ಯೆ ಸಂಸದರು ಸಾಮಾಜಿಕ ಜಾಲತಾಣದಲ್ಲಿ ನಾನು ಜುಲೈ.9 ನೇ ತಾರೀಖೇ ಸಿಎಂಗೆ ಆಹ್ವಾನಿಸಿರುವುದಾಗಿ ಹೇಳಿದ್ದಾರೆ. ಸಿಎಂ ತಡವಾಗಿ ಆಹ್ವಾನಿಸಲಾಗಿದೆ ಎಂದು ಹೇಳಿರುವುದು ನಗೆಪಾಟಲಿಗೆ ಕಾರಣವಾಗಿದೆ. ಅಲ್ಲದೆ ಶಾಸಕ ಗೋಪಾಲ ಕೃಷ್ಣ ಬೇಳೂರು ಸಹ ಸಂಸದರ ವಿರುದ್ಧ ಮುಗಿಬಿದ್ದಾರೆ.